ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಚಲಿಸುವ ಬಸ್ಸಿನಲ್ಲೇ ಮೂಢಿದ ಸಾಹಿತ್ಯ: ಕರ್ತವ್ಯದ ನಡುವೆ ಕಾವ್ಯ ಕಟ್ಟಿದ ಸಾಧಕಿ, ನಿರ್ವಾಹಕಿ ವರಲಕ್ಷ್ಮೀ (ವರ)

ಬಿ.ಎಂ.ಟಿ.ಸಿ ನಿರ್ವಾಹಕಿ ಕನ್ನಡ ಸಾಹಿತ್ಯದ ಪ್ರಚಾರಕಿ ಎಂಬುದು ಕೇವಲ ಒಂದು ಶೀರ್ಷಿಕೆಯಲ್ಲ, ಅದು ಕರ್ತವ್ಯದ ಜೊತೆಗೆ ಭಾಷಾ ಪ್ರೇಮವನ್ನು ಮೈಗೂಡಿಸಿಕೊಂಡು ಬದುಕುತ್ತಿರುವ ಶ್ರಮಜೀವಿಯೊಬ್ಬರ ಅನನ್ಯ ಸಾಧನೆಯ ಸಂಕೇತವಾಗಿದೆ.
ಬೆಂಗಳೂರಿನ ಜನಜೀವನದ ಜೀವನಾಡಿಯಾಗಿರುವ ಬಿ.ಎಂ.ಟಿ.ಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಸ್‌ಗಳಲ್ಲಿ ನಿತ್ಯ ಸಾವಿರಾರು ಜನ ಪ್ರಯಾಣಿಸುತ್ತಾರೆ. ಇಂತಹ ಗಿಜಿಗುಡುವ ಬಸ್‌ಗಳಲ್ಲಿ ಟಿಕೆಟ್ ನೀಡುವ ಜವಾಬ್ದಾರಿಯುತ ನಿರ್ವಾಹಕಿಯ (ಕಂಡಕ್ಟರ್) ಹುದ್ದೆಯಲ್ಲಿದ್ದುಕೊಂಡು, ಬಿಡುವಿಲ್ಲದ ಕೆಲಸದ ನಡುವೆಯೂ ಕನ್ನಡ ಭಾಷೆ ಮತ್ತು ಸಾಹಿತ್ಯದ ಪ್ರಚಾರ ಮಾಡುತ್ತಿರುವ ಮಹಿಳೆಯರ ಕಥೆ ಅತ್ಯಂತ ಸ್ಪೂರ್ತಿದಾಯಕವಾಗಿದೆ.
ಕರ್ತವ್ಯದ ನಡುವೆ ಸಾಹಿತ್ಯ ಸೇವೆ
ಒಬ್ಬ ನಿರ್ವಾಹಕಿಯ ದಿನಚರಿ ಸವಾಲುಗಳಿಂದ ಕೂಡಿರುತ್ತದೆ. ಮುಂಜಾನೆಯಿಂದ ರಾತ್ರಿಯವರೆಗೆ ನೂರಾರು ಪ್ರಯಾಣಿಕರನ್ನು ನಿಭಾಯಿಸುವುದು, ಚಿಲ್ಲರೆ ಸಮಸ್ಯೆ, ಟ್ರಾಫಿಕ್ ಕಿರಿಕಿರಿಗಳ ನಡುವೆ ಕೆಲಸ ಮಾಡುವುದು ಸುಲಭವಲ್ಲ. ಆದರೆ, ಈ ಒತ್ತಡದ ನಡುವೆಯೂ ಕನ್ನಡ ಸಾಹಿತ್ಯದ ಮೇಲಿರುವ ಅಪಾರ ಪ್ರೀತಿಯೇ ಇವರನ್ನು ಭಿನ್ನವಾಗಿಸುತ್ತದೆ.

ಇದು ನಮ್ಮ ಬೆಂಗಳೂರಿನ ಘಟಕ-29 ರ ಕೆ.ಆರ್.ಪುರಂ ಘಟಕದಲ್ಲಿ ಕರ್ತವ್ಯ ಮಾಡುತ್ತಿರುವ ಮಹಿಳಾ ನಿರ್ವಾಹಕಿ, ಸಾಧಕಿ, ವರಲಕ್ಷ್ಮೀ ಎಂಬ ದಿಟ್ಟ ಹೆಣ್ಣು ಮಗಳ ಅದ್ಬುತ ಸಾಧನೆ ಇತರರಿಗೆ ಪ್ರೇರಣೆಯ ಹಾದಿಯಲ್ಲಿನ ಲೇಖನ ಇದಾಗಿದೆ.

ಇವರ ಬಗ್ಗೆ ಸಣ್ಣದಾಗಿ ಪರಿಚಯಿಸುವುದಾದರೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಹೋಬಳಿಯ ದೊಡ್ಡೂರು ಎಂಬ ಕುಗ್ರಾಮದಲ್ಲಿ ದಿನಾಂಕ: 15-04-1995 ರಲ್ಲಿ ತಂದೆ ಈರೇಗೌಡ ಹಾಗೂ ವರದಮ್ಮ ದಂಪತಿಯ ಮಗಳಾಗಿ ಜನಿಸಿದವರೇ ವರಲಕ್ಷ್ಮೀ , ಅಪ್ಪ-ಅಮ್ಮನ ಪ್ರೀತಿಯ ವರ.

ಪ್ರಾರಂಭದ ದಿನಗಳಲ್ಲಿ ಸಂಸಾರದ ಎಲ್ಲಾ ಜವಾಬ್ದಾರಿ ಅಮ್ಮನ ಮೂಲಕ ನಡೆಯುತ್ತಿದ್ದನ್ನು ನೋಡಿ, ಬಡತನ ಸ್ಥಿತಿಯನ್ನು ನೇರವಾಗಿ ನೋಡಿ, ಅನುಭವಿಸಿದ ಭಾವನಜೀವಿ ಇವರು.
ಬಡತನದ ಬೇಗೆಯಲ್ಲಿ ಊಟ-ಬಟ್ಟೆಗೆ ಕಷ್ಟ ಇರುವಂತಹ ದುಸ್ಥಿತಿಯಲ್ಲಿ ಶಿಕ್ಷಣ ಪಡೆಯಬೇಕು ಎಂಬ ಹಸಿವಿನ ದಾಹಕ್ಕಾಗಿ, ಅಮ್ಮನ ಕೈ ಬಲಪಡಿಸಲು ಆಯ್ಕೆ ಮಾಡಿಕೊಂಡಿದ್ದು ಮಾತ್ರ ನಿಜಕ್ಕೂ ಮನಕಲಕುವ ವಿಷಯವೇ ಆಗಿದೆ ಏನು ಅಂತೀರಾ, ಚರಂಡಿಗಳ ಸ್ವಚ್ಚತೆ ಕೆಲಸ, ಕೂಲಿ ಕೆಲಸ, ಅಕ್ಕನ ಜೊತೆಗೆ ಸೊಪ್ಪು ಮಾರುವುದು, ಇವುಗಳ ಜೊತೆಗೆ ಬಾಲಾ ನಾಗಮ್ಮ ಎಂಬ ನಾಟಕಗಳಲ್ಲಿ ನಟನೆ, ಬೀದಿ ನಾಟಕಗಳಲ್ಲಿ ಸಣ್ಣ ಸಣ್ಣ ಪಾತ್ರಗಳನ್ನು ಮಾಡಿಕೊಂಡು ಬಂದ ಹಣದಲ್ಲಿ ಶಾಲೆಯ ವಿದ್ಯಾಭ್ಯಾಸ, ಮನೆ ನಿರ್ವಹಣೆ, ನಡೆಯುತ್ತಿತ್ತು.

ಕಂಡಕ್ಟರ್ ವರಲಕ್ಷ್ಮೀ ರವರು ಪದವಿದರರು, ಪೂರ್ವ ಪ್ರಾಥಮಿಕ ಶಾಲೆಯನ್ನು 1 ರಿಂದ 5 ದೊಡ್ಡೂರಿನಲ್ಲಿ, 6 ಮತ್ತು 7 ನೇ ತರಗತಿ ಗುಲ್ಲಹಳ್ಳಿಯಲ್ಲಿ, 8 ರಿಂದ 10 ನೇ ತರಗತಿಯನ್ನು ಬಂಗಾರಪೇಟೆಯ ಹಾಸ್ಟೇಲ್ ನಲ್ಲಿ ಓದುತ್ತಾ, ಪಿಯುಸಿಯನ್ನು ಬೂದಿಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರ್ಣಗೊಳಿಸಿ, ನಂತರ ಪದವಿಯನ್ನು ಬಂಗಾರಪೇಟೆಯ ಕೆ.ಸಿ‌ರೆಡ್ಡಿ ಕಾಲೇಜಿನಲ್ಲಿ ಓದುವ ಸಮಯದಲ್ಲಿ ಬಿ.ಎಂ.ಟಿ.ಸಿ ನಿರ್ವಾಹಕ ಹುದ್ದೆಗೆ ಮೊದಲ ಬಾರಿ ಅರ್ಜಿ ಹಾಕಿದ್ದು ಪಿಯುಸಿಯಲ್ಲಿ ತೆಗೆದ ಹೆಚ್ಚು ಅಂಕದ ಪರಿಣಾಮ ನಿರ್ವಾಹಕ ಹುದ್ದೆಗೆ ನೇರ ಆಯ್ಕೆಯಾಗಲು ಸಹಾಯ ಆಯಿತು.

2013 ರಲ್ಲಿ ಬಿ.ಎಂ.ಟಿ.ಸಿ ನಿರ್ವಾಹಕ ಹುದ್ದೆಗೆ ಸೇರಿ ಇಂದಿಗೆ 14 ವರ್ಷ ಆಗಿದೆ. ಈ ಒಂದು ಸಂದರ್ಭದಲ್ಲಿ ನನ್ನಯ ಬಾಳ ಸಾಂಗತಿಯಾಗಿ 2016 ರಲ್ಲಿ ವಿಶ್ವನಾಥ್ ಎಂಬುವವರನ್ನು ವೈವಾಹಿಕ ಜೀವನಕ್ಕೆ ಕಾಲಿಡಲಾಯಿತು. ಈ ಸಾಧಕಿಗೆ ಇಬ್ಬರು ಮಕ್ಕಳಿದ್ದು ಹದ್ವಿತ್ ಗೌಡ ಎಂಬ ಮಗ ಹಾಗೂ ನಿಧಿಗೌಡ ಎಂಬ ಮಗಳು ಇದ್ದಾರೆ‌.
ಪ್ರಸ್ತುತ ವರಲಕ್ಷ್ಮೀ ರವರು ಬಿ.ಎಂ.ಟಿ.ಸಿಯ ಘಟಕ 29 ರ ಕೆ.ಆರ್, ಪುರಂ ಘಟಕದಲ್ಲಿ ದಕ್ಷ ನಿರ್ವಾಹಕಿಯಾಗಿ ಕೆಲಸ ಮಾಡುತ್ತಾ ಉತ್ತಮ ಕಾವ್ಯ ರಚನೆಯಲ್ಲಿ ತೋಡುಗುತ್ತಾ, ಸಾಹಿತ್ಯದ ಘಮಲನ್ನು ಸಾರಿಗೆ ಸಂಸ್ಥೆಯಲ್ಲಿ ಪ್ರಯಾಣಿಕರಲ್ಲಿ ಪ್ರಚುರಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.

ಪ್ರಬುದ್ದ ಕಾರ್ಯ ಮಾಡುತ್ತಿರುವ ಸಾರಿಗೆ ಸಂಸ್ಥೆಯ ನಿರ್ವಾಹಕಿಯ ಎಲ್ಲಾ‌ ಕಾರ್ಯಗಳಿಗೂ ಪ್ರೋತ್ಸಾಹ ಬೇಕಾಗಿದೆ. ಇಂತಹ ಸಾಹಿತ್ಯ ಪ್ರೇಮಿ, ಕಲಾವಿದೆ, ಕವಿಯತ್ರಿಯನ್ನು ಸಾರಿಗೆ ಸಚಿವರು, ಸಾರಿಗೆ ಇಲಾಖೆಯ ಸಾಂಸ್ಕೃತಿಕ ಘಟಕ, ವ್ಯವಸ್ಥಾಪಕ ನಿರ್ದೇಶಕರು, ಘಟಕ ಮ್ಯಾನೇಜರ್ ಎಲ್ಲರೂ ಗುರ್ತಿಸಿ ಪ್ರೋತ್ಸಾಹಿಸಬೇಕಾಗಿದೆ ಎಂಬುದು ನಮ್ಮ ಆಶಯ.

ಪುಸ್ತಕಗಳ ವಿತರಣೆ: ಬಸ್ಸಿಗೆ ಹತ್ತುವ ಪ್ರಯಾಣಿಕರಿಗೆ ಕೇವಲ ಪ್ರಯಾಣದ ಟಿಕೆಟ್ ನೀಡುವುದಷ್ಟೇ ಅಲ್ಲದೆ, ಪ್ರೀತಿಯಿಂದ ಕನ್ನಡ ಪುಸ್ತಕಗಳನ್ನು ಪರಿಚಯಿಸುವುದು ಅಥವಾ ಸಣ್ಣ ಸಣ್ಣ ಸಾಹಿತ್ಯದ ತುಣುಕುಗಳನ್ನು ಹಂಚುವುದು ಇವರ ವಿಶೇಷತೆ.

ತಾವು ಕರ್ತವ್ಯ ಮಾಡುವ ಘಟಕದಲ್ಲಿ‌ ಇವರು ಉಪಯೋಗಿಸುವ ವೇಬಿಲ್ ಸಹ ಅಚ್ಚ ಕನ್ನಡ ಭಾಷೆಯಲ್ಲಿರುವುದು ಇವರ ಕನ್ನಡ ಪ್ರೇಮಕ್ಕೆ ಮತ್ತೊಂದು ಉದಾಹರಣೆ. ಅನ್ಯಭಾಷಿಕರಿಗೆ ಕನ್ನಡ ಕಲಿಕೆಯ ಸಹಾಯದ ಮೂಲಕವು ಇವರ ಸೇವೆ ಅನನ್ಯ.

ಇನ್ನೂ ಕೆಲವೇ ದಿನಗಳಲ್ಲಿ ನಿರ್ವಾಹಕಿ ವರಲಕ್ಷ್ಮೀ ರವರು ಕನ್ನಡ ಸಾಹಿತ್ಯ ಲೋಕಕ್ಕೆ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಚಿಂತನೆಯಲ್ಲಿ ಬರಹ ಬರೆಯುತ್ತಿದ್ದಾರೆ. ಅವರ ಬರಹದಲ್ಲಿ ಒಂದು ಸಾಲು ತಿಳಿಸುತ್ತೆ…ಅಮ್ಮ ಎಂದರೆ ಏನು???
ಮಾತು ಬಾರದ ಮಗುವಿಗೆ ನೀನು,
ಭಾಷೆಯ ಕಲಿಸಿದ ಮೊದಲ ಗುರು;
ಹೆಜ್ಜೆ ಇಡಲು ತಡಕಾಡಿದಾಗ,
ಬೆರಳು ಹಿಡಿದು ನಡೆಸಿದ ಕರು.
ತಪ್ಪು ನಡೆದಾಗ ತಿದ್ದಿ ಹೇಳಿ,
ನನ್ನ ಅರಿವಿನ ದೀಪವ ಬೆಳಗಿಸಿದೆ;
ಸೋತು ಕುಳಿತಾಗ ಬೆನ್ನು ಸವರಿ,
ಗೆಲುವಿನ ಹಾದಿಯ ತೋರಿಸಿದೆ.

ಇನ್ನೂ ಹೀಗೆ ಇವರು ವಿಶ್ವಮಾನವ ಕುವೆಂಪು ಫೌಂಡೇಶನ್ ನ ಸಾರಿಗೆ ಸಂಸ್ಥೆ ಮಹಿಳಾ ಘಟಕದ ಅಧ್ಯಕ್ಷರಾಗಿ ರಕ್ತದಾನ, ನೇತ್ರದಾನ , ಸಮಾಜ ಸೇವೆಯಲ್ಲೂ ಇವರ ಸೇವೆ ಅನನ್ಯ. ನಾಡು ನುಡಿಯ ರಕ್ಷಣೆಗಾಗಿ‌ ಕರ್ನಾಟಕ ರಕ್ಷಣಾ ವೇದಿಕೆಯ ಸಾಂಸ್ಕೃತಿಕ ಘಟಕದಲ್ಲಿನ ಸೇವೆ ಅಮರ.

ಕನ್ನಡದ ಜಾಗೃತಿ: ಅನ್ಯಭಾಷಿಕರು ಹೆಚ್ಚಾಗಿರುವ ಬೆಂಗಳೂರಿನಲ್ಲಿ, ಬಸ್‌ಗೆ ಬರುವ ಹೊರರಾಜ್ಯದ ಪ್ರಯಾಣಿಕರಿಗೆ ಪ್ರೀತಿಯಿಂದ ಕನ್ನಡ ಮಾತನಾಡಲು ಕಲಿಸುವುದು ಮತ್ತು ಕನ್ನಡದ ಹಿರಿಮೆಯನ್ನು ಮನವರಿಕೆ ಮಾಡಿಕೊಡುವುದು ಇವರ ದಿನನಿತ್ಯದ ಕಾಯಕವಾಗಿದೆ.
ಚಲಿಸುವ ಬಸ್ಸೇ ಸಾಹಿತ್ಯದ ವೇದಿಕೆ
ಸಾಹಿತ್ಯ ಪ್ರಚಾರಕ್ಕೆ ಕೇವಲ ದೊಡ್ಡ ದೊಡ್ಡ ಸಭಾಂಗಣಗಳೇ ಬೇಕಾಗಿಲ್ಲ, ಮನಸ್ಸಿದ್ದರೆ ಚಲಿಸುವ ಬಸ್ಸನ್ನೇ ಸಾಹಿತ್ಯದ ವೇದಿಕೆಯನ್ನಾಗಿ ಮಾಡಬಹುದು ಎಂಬುದನ್ನು ಇವರು ಸಾಬೀತುಪಡಿಸಿದ್ದಾರೆ.
ಪ್ರೇರಣೆಯ ಚಿಲುಮೆ
ಇವರ ಈ ಕಾರ್ಯ ಕೇವಲ ಭಾಷಾ ಪ್ರಚಾರಕ್ಕೆ ಸೀಮಿತವಾಗಿಲ್ಲ.

ಇಂದಿನ ಯಾಂತ್ರಿಕ ಜೀವನದಲ್ಲಿ ಮೊಬೈಲ್ ಪರದೆಗೆ ಅಂಟಿಕೊಂಡಿರುವ ಜನರಿಗೆ ಪುಸ್ತಕ ಓದುವ ಹವ್ಯಾಸವನ್ನು ಮರುಕಳಿಸುವಂತೆ ಮಾಡುತ್ತಿದೆ. ಬಿಡುವಿನ ವೇಳೆಯಲ್ಲಿ ತಾವೂ ಓದುತ್ತಾ, ಪ್ರಯಾಣಿಕರಿಗೂ ಓದಲು ಉತ್ತೇಜಿಸುವ ಇವರ ನಡೆ ಸಾಹಿತ್ಯ ಲೋಕಕ್ಕೆ ನೀಡುತ್ತಿರುವ ವಿಶಿಷ್ಟ ಕೊಡುಗೆಯಾಗಿದೆ.
ಕಾಯಕವೇ ಕೈಲಾಸ ಎಂದು ನಂಬಿ, ತಾವು ಮಾಡುವ ವೃತ್ತಿಯ ಗೌರವವನ್ನು ಕಾಪಾಡಿಕೊಳ್ಳುತ್ತಲೇ ಮಾತೃಭಾಷೆಯ ಸೇವೆ ಮಾಡುತ್ತಿರುವ ಈ ಬಿ.ಎಂ.ಟಿ.ಸಿ ನಿರ್ವಾಹಕಿ ವರಲಕ್ಷ್ಮೀ ಪ್ರತಿಯೊಬ್ಬ ಕನ್ನಡಿಗನಿಗೂ ಹೆಮ್ಮೆಯಾಗಿದ್ದಾರೆ. ಭಾಷಾಭಿಮಾನ ಎನ್ನುವುದು ಕೇವಲ ಭಾಷಣಕ್ಕೆ ಸೀಮಿತವಾಗದೆ ಕ್ರಿಯೆಯಲ್ಲಿರಬೇಕು ಎಂಬುದನ್ನು ತೋರಿಸಿಕೊಟ್ಟಿರುವ ಇವರು ನಿಜವಾದ ‘ಕನ್ನಡದ ರಾಯಭಾರಿ’. ಇವರ ಸಾಹಿತ್ಯದ ಕಂಪು ಸಾರಿಗೆ ಸಂಸ್ಥೆಯ ಮೂಲಕ ನಾಡಿನಾದ್ಯಂತ ಮತ್ತಷ್ಟು ಪಸರಿಸಲಿ ಎಂಬ ಆಶಾಭಾವನೆ ನಮ್ಮದು.

ಇವರ ಪ್ರಮಾಣಿಕ ಸೇವೆ, ಸಾಹಿತ್ಯ ಸೇವೆಗೆ ನಿಮ್ಮ ಪ್ರೀತಿಯ ಶುಭಾಶಯ ಇರಲಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!