ತಾಲೂಕಿನ ವಡಗೇರಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬೇಡ್ಕರ್ ನಗರದ ನೂತನ ಎಸ್ ಡಿಎಂಸಿ ಅಧ್ಯಕ್ಷರಾಗಿ ಸಾಬರಡ್ಡಿ ಹೊಂಟೂರ್ ಚುನಾಯಿತರಾದರು.
ಉಪಾಧ್ಯಕ್ಷರಾಗಿ ಶ್ರೀಮತಿ ಮಧುಮತಿ ಗೊರವುರ , ನೂತನ ಸದಸ್ಯರಾಗಿ ರಘುಪತಿ ನಾಟೇಕರ್, ವೆಂಕಟೇಶ್ ಬೊಜ್ಜಿ, ಶಭಾನ, ಶರಣಮ್ಮ ಅಯ್ಯಮ್ಮ, ಗೌರಮ್ಮ, ಸಾಬಮ್ಮ, ಮರಿಯಪ್ಪ, ಶರಣಪ್ಪ, ರಮೇಶ್, ಮಲ್ಲಪ್ಪ, ಸಂತೋಷ್, ಭಾಗ್ಯಶ್ರೀ, ಲಕ್ಷ್ಮಿ ಮತ್ತು ಕಾರ್ಯದರ್ಶಿಯಾಗಿ ಮುಖ್ಯ ಶಿಕ್ಷಕಿ ಮೀನಾಕ್ಷಿ ಮುಸ್ತಜೀರ್ ಆಯ್ಕೆಯಾದರು. ಚುನಾಯಿತರಾದ ಎಲ್ಲಾ 18 ಸದಸ್ಯರನ್ನು ಗ್ರಾಮಸ್ಥರು ಹಾಗೂ ಶಾಲೆಯ ವತಿಯಿಂದ ಸಮಿತಿಗೆ ಅಭಿನಂದಿಸಲಾಯಿತು.
ಸದಸ್ಯರಾದ ರಘುಪತಿ ನಾಟೆಕಾರ್ ಮಾತನಾಡಿ, ಶಿಕ್ಷಕರೊಂದಿಗೆ ಸಮಿತಿ ಒಗ್ಗೂಡಿ ಕೆಲಸ ಮಾಡಿದರೆ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಶಾಲೆ ಹಾಗೂ ಶಿಕ್ಷಕರ ಜತೆಗೆ ಸಮಿತಿಯು ಶಾಲಾಭಿವೃದ್ಧಿಗೆ ನಾವೆಲ್ಲರೂ ಒಂದಾಗೋಣ ಎಂದರು.
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ರಾಜಶ್ರೀ, ಜರಿನಾ ಬೇಗಮ್, ಮಂಜುಳಾ, ಶ್ರೀದೇವಿ, ಬಸವರಾಜ್, ಅನಿತಾ ಸೇರಿದಂತೆ ವಿದ್ಯಾರ್ಥಿಗಳ ಪೋಷಕರು ಉಪಸ್ಥಿತರಿದ್ದರು.
- ಕರುನಾಡ ಕಂದ




















