ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಗವಿಮಠದಲ್ಲಿ ಶ್ರಾವಣ ಮಾಸದ ಧಾರ್ಮಿಕ–ಆಧ್ಯಾತ್ಮಿಕ ಉಪನ್ಯಾಸ ಮಾಲೆಗೆ ಚಾಲನೆ.

ಬಸವಕಲ್ಯಾಣ: ಪವಿತ್ರ ಶ್ರಾವಣ ಮಾಸದ ಅಂಗವಾಗಿ ನಗರದ ಇತಿಹಾಸ ಪ್ರಸಿದ್ಧ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ವತಿಯಿಂದ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸಂದೇಶ ಕುರಿತು ಉಪನ್ಯಾಸ ಮಾಲೆಯ ಉದ್ಘಾಟನಾ ಕಾರ್ಯಕ್ರಮ ಭಕ್ತಿಭಾವದಿಂದ ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹುಲಸೂರಿನ ತಹಶೀಲ್ದಾರರಾದ ಶ್ರೀ ಶಿವಾನಂದ ಮೇತ್ರೆ ಅವರು ಮಾತನಾಡಿ ಗವಿಮಠದ ಪೂಜ್ಯರು ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿ ಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು. ಶ್ರಾವಣ ಮಾಸದಲ್ಲಿ ಪ್ರಕೃತಿಯಲ್ಲಾಗುವ ಬದಲಾವಣೆಗಳು ಶಿವನ ಲೀಲೆಯನ್ನು ನೆನಪಿಸುತ್ತವೆ. ಗವಿಮಠದ ಪೂಜ್ಯರು ಸರಳ ಜೀವನ ನಡೆಸುತ್ತಾ ಸಮಾಜಕ್ಕೆ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಚಿಂತನೆಗಳನ್ನು ನೀಡುತ್ತಿರುವುದು ವಿಶೇಷವಾಗಿದೆ ಶ್ರಾವಣ ಮಾಸದ ಮಹತ್ವ ಹಾಗೂ ಶಿವಾಚಾರ್ಯ ಪರಂಪರೆಯ ವಿಶೇಷತೆಯನ್ನು ತಿಳಿದುಕೊಳ್ಳುವುದು ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಪೊಲೀಸ್ ಅಧಿಕಾರಿಗಳಾದ ಶ್ರೀ ವಿಶ್ವನಾಥ ವಸ್ತ್ರದ ಅವರು ಮಾತನಾಡುತ್ತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರ ನೇತೃತ್ವದಲ್ಲಿ ಗವಿಮಠವು ಧರ್ಮ ಜಾಗೃತಿ ಹಾಗೂ ಆಧ್ಯಾತ್ಮಿಕ ಸಂದೇಶಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯ ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಪಡುವ ಸಂಗತಿ ಆಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗವಿಮಠದ ಕಾರ್ಯಾಧ್ಯಕ್ಷರಾದ ಶರಣಪ್ಪಾ ಬಿರಾದರ ಮಾತನಾಡುತ್ತಾ ಗವಿಮಠದ ಅಭಿವೃದ್ಧಿ ಹಾಗೂ ಧಾರ್ಮಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಮಠವು ಕೈಗೊಂಡಿರುವ ವಿವಿಧ ಕಾರ್ಯಗಳನ್ನು ಶ್ಲಾಘಿಸಿದರು.
ಕಾರ್ಯಕ್ರಮದ ನೇತೃತ್ವ ವಹಿಸಿದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಆಶೀರ್ವಚನ ನೀಡುತ್ತಾ ಗುರು ಇದ್ದರೆ ಗುರಿ ಇರುತ್ತದೆ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಬದುಕಿನ ಅಂತರಂಗ ಬಹಳ ಆಳವಾದದ್ದು ಅವರ ಜೀವನ ಸಾಧನೆ ಹಾಗೂ ಇತಿಹಾಸವನ್ನು ಅಧ್ಯಯನ ಮಾಡಲು ಅವಕಾಶವನ್ನು ಶ್ರಾವಣ ಮಾಸದ ಉಪನ್ಯಾಸ ಮಾಲೆ ಭಕ್ತರಿಗೆ ಒದಗಿಸುತ್ತಿದೆ ಎಂದು ಆಶೀರ್ವಚನ ನೀಡಿದರು. ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯರು ಕಿಟ್ಟಾ ಅವರು ಮಾತನಾಡುತ್ತಾ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಬಗ್ಗೆ ಮತ್ತು ನಂಬಿಕೆಯಿಂದ ನಡೆದುಕೊಳ್ಳುವವರಿಗೆ ಧರ್ಮದ ಆಶೀರ್ವಾದ ದೊರೆಯುತ್ತದೆ ಪರಮಾತ್ಮನು ವಿರಾಟ ಸ್ವರೂಪಿಯಾಗಿದ್ದು ಕಣ್ಣಿಗೆ ಕಾಣುವುದಿಲ್ಲ ಕೈಗೆ ಸಿಗುವುದಿಲ್ಲಾ ಆದರೆ ಕಾಣದ ಆ ಶಕ್ತಿಯ ಅನುಭವವೇ ಆಧ್ಯಾತ್ಮಿಕತೆಯ ಸಾರವಾಗಿದೆ ಎಂದು ನುಡಿದರು. ಪಂಚಪೀಠಗಳ ಪ್ರಥಮ ಜಗದ್ಗುರುಗಳಾದ ಶ್ರೀ ರೇಣುಕಾಚಾರ್ಯರ ಪರಂಪರೆಯಲ್ಲಿ ಶ್ರೀ ಘನಲಿಂಗ ರುದ್ರಮುನಿ ಶಿವಾಚಾರ್ಯರ ಸ್ಥಾನ ಮಹತ್ವದ್ದಾಗಿದೆ. ಗವಿಮಠದ ಇತಿಹಾಸ ಅತ್ಯಂತ ಅಮೂಲ್ಯವಾದದ್ದು ಮಹಾತ್ಮರು ಅವತಾರ ಪುರುಷರು ಅವರಿಗೆ ಸಾಮಾನ್ಯ ಅರ್ಥದಲ್ಲಿ ಹುಟ್ಟು ಸಾವಿನ ಬಂಧನವಿಲ್ಲ ಅವರ ಸಂದೇಶಗಳು ಸಮಾಜಕ್ಕೆ ದಾರಿದೀಪ ವಾಗಿರುತ್ತವೆ ಎಂದರು.
ಸರ್ವೇ ಜನಾಃ ಸುಖಿನೋ ಭವಂತು ಎಂಬ ಮಹಾನ್ ಸಂದೇಶ ಎಂದಿಗೂ ಪ್ರಸ್ತುತವಾಗಿದೆ ಕಲ್ಯಾಣದ ಮಣ್ಣಿಗೂ ಪವಿತ್ರ ಪರಂಪರೆ ಇದೆ ಗವಿಮಠವು ಅನೇಕ ಶಿವಶರಣರಿಗೆ ಲಿಂಗ ದೀಕ್ಷೆ ನೀಡಿದ ಪುಣ್ಯ ಸ್ಥಳವಾಗಿದೆ 12ನೇ ಶತಮಾನದಲ್ಲಿ ಘನಲಿಂಗ ರುದ್ರಮುನಿ ಶಿವಾಚಾರ್ಯರು ಅನೇಕ ಶರಣರಿಗೆ ಮಾರ್ಗದರ್ಶನ ನೀಡಿದ ಪರಂಪರೆಯ ಮಹತ್ವವನ್ನು ಇಂದಿನ ಪೀಳಿಗೆ ತಿಳಿದುಕೊಳ್ಳಬೇಕು ಎಂದು ಹೇಳಿದರು. ಶ್ರೀಮತಿ ಸುರೇಖಾ ಸಜ್ಜನ ಶೆಟ್ಟಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶರಣಬಸಪ್ಪಾ ಅಲಗುಡೆ ಪ್ರಾರ್ಥನೆ ಗೀತೆ ಹಾಡಿದರು. ಎ.ಜಿ ಪಾಟೀಲ ಸ್ವಾಗತಿಸಿದರು. ಮಲ್ಲಿಕಾರ್ಜುನ ಅಲಗೂಡೆ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಬಸವಂತಪ್ಪ ಲವಾರೆ, ಪ್ರೋ.ರುದ್ರೇಶ್ವರ ಗೋರ್ಟಾ, ಶ್ರೀಮತಿ ವಿಮಲಾಬಾಯಿ ಮಾಣಿಕಪ್ಪ ಬಿರಾದಾರ, ಪ್ರೊ.ಸೂರ್ಯಕಾಂತ ಶೀಲವಂತ, ಶ್ರೀ ವಿಠ್ಠಲ ರಾಜೋಳೆ, ರಾಮಚಂದ್ರ ಹುಡುಗೆ, ಲಕ್ಷ್ಮಣ ಸಿಂಗ್ ಸಿಂಗಾರೆ, ಗೋವಿಂದರೆಡ್ಡಿ ಕೋತಂಪಲ್ಲಿ, ಅಭಿಷೇಕ್ ರಾಮಣ್ಣ, ಶ್ರೀಮತಿ ಶಕುಂತಲಾ ಗುರುಲಿಂಗಯ್ಯಾ ಸ್ವಾಮಿ, ಸಂಜುಕುಮಾರ ಪಂಚಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ ಶ್ರೀನಿವಾಸ ಬಿರಾದಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!