
80 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಿನ ಜುಮನಾಳ ಗ್ರಾಮದಲ್ಲಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಅವರ 258ನೇ ಜಯಂತ್ಯೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಶೌರ್ಯ ಮತ್ತು ಅವರ ಜೀವನ ನಮ್ಮೆಲ್ಲಾ ಯುವಕರಿಗೆ ಆದರ್ಶವಾಗಿರುವುದರಿಂದ ಅವರ ಜೀವನವನ್ನು ಅಳವಡಿಸಿಕೊಳ್ಳಬೇಕೆಂದು ಹೇಳಲಾಯಿತು.
ಈ ಸಂದರ್ಭದಲ್ಲಿ ಜೆಟ್ಟು ಪೂಜಾರಿ, ರಮೇಶ್ ಒಬ್ಬರ್, ರಾಮಣ್ಣ ಪೂಜಾರಿ, ಸಂಜು ಕಂಡನವರ್, ಗದಿಗೆಪ್ಪ ಪೂಜಾರಿ, ಮಾಳಪ್ಪ ಪೂಜಾರಿ, ಎಲ್ಲಪ್ಪ ತಳೆವಾಡ್, ಮುದುಕಪ್ಪ ಪೂಜಾರಿ, ದಯಾನಂದ ಪೂಜಾರಿ, ರಮೇಶ್ ಬಾಡಿಗೆ, ಪ್ರವೀಣ್ ತಾನೇ, ಸಂತೋಷ್ ಪೂಜಾರಿ ಸೇರಿದಂತೆ ಗ್ರಾಮದ ಹಿರಿಯರು,ಯುವಕರು ಭಾಗವಹಿಸಿದ್ದರು.
ವರದಿಗಾರರು ಆನಂದ ಮ. ಬಳ್ಳಾರಿ




















