ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ
ವೃತ್ತ ಮರು ನಿರ್ಮಾಣಕ್ಕೆ ವಿವಿಧ ಸಂಘಟನೆಗಳ ಸಹಕಾರ.
ಶಬ್ದವೇದಿ ಪರಿಣಿತ ಬೆಳವಡಿ ವಡ್ಡರ ಯಲ್ಲಣ್ಣ ವೃತ್ತವನ್ನು ಮರು ನಿರ್ಮಾಣಗೊಳಿಸಿ, 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಮಾಜದ ಗಣ್ಯರು ಸೇರಿ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನೇಕಾರರ ಸಂಘಟನೆಯ ರಾಜ್ಯಾಧ್ಯಕ್ಷರಾದ ಶಿವಲಿಂಗ ಟಿರ್ಕಿ, ರೈತ ಮುಖಂಡರಾದ ಬಂಧುಪಕಾಲಿ, ಶಿವಸೇನಾ ಪಕ್ಷದ ಜಿಲ್ಲಾಧ್ಯಕ್ಷರಾದ ನಾಗರಾಜ್ ಭಜಂತ್ರಿ, ಕುರುವಿನ ಶೆಟ್ಟಿ ಸಮಾಜದ ಹಿರಿಯರಾದ ಗಿರ ಮಲ್ಲಪ್ಪ ಬರಗಿ, ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರಾದ ಡಾ. ಶಂಕರ್ ಹುಕ್ಕೇರಿ ಹಾಗೂ ಕಿರಣ ಬುದ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶ್ರೀ ಸಿದ್ದರಾಮೇಶ್ವರ ಭೋವಿ ವಡ್ಡರ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅರ್ಜುನ ಬಂಡಿವಡ್ಡರ ಹಾಗೂ ಕಾರ್ಯದರ್ಶಿ ತಿಪ್ಪಣ್ಣ ಬಂಡಿವಡ್ಡರ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಯಂಕಪ್ಪ ಬಂಡಿವಡ್ಡರ, ರಾಜು ಬಂಡಿವಡ್ಡರ, ಮಾಂತೇಶ ಶಿವನಿಗಿ, ಮಹಾಲಿಂಗ ಬಂಡಿವಡ್ಡರ, ರಾಮು ಬಂಡಿವಡ್ಡರ, ವಕೀಲರಾದ ರಾಮು ಪಾತ್ರೋಟ, ಪರಶುರಾಮ ಅಮರಾವತಿ, ರಾಮು ಬಂಡಿವಡ್ಡರ, ರಮೇಶ್ ಬಂಡಿವಡ್ಡರ, ಅಶೋಕ ಬಂಡಿವಡ್ಡರ, ಮಾರುತಿ ಬಂಡಿವಡ್ಡರ, ಮಾಂತೇಶ ವಡ್ಡರ, ಶಂಕರ ಪಾತ್ರೋಟ, ಅಂಜು ನದಾಫ, ಹಸನ್ ನದಾಫ ಸೇರಿದಂತೆ ಸಮಾಜದ ಮುಖಂಡರು, ಯುವಕರು ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ವಡ್ಡರ ಯಲ್ಲಣ್ಣ ವೃತ್ತದ ಮರು ನಿರ್ಮಾಣದ ಮೂಲಕ ಸ್ಥಳೀಯರ ಬಹುದಿನಗಳ ಆಶಯಕ್ಕೆ ಸ್ಪಂದಿಸಿರುವುದು ಸಂತಸದ ಸಂಗತಿಯಾಗಿದೆ. ವಿವಿಧ ಸಮಾಜ ಹಾಗೂ ಸಂಘಟನೆಗಳ ಮುಖಂಡರು ಒಗ್ಗೂಡಿ ಸ್ವಾತಂತ್ರ್ಯೋತ್ಸವ ಆಚರಿಸಿರುವುದು ಸಾಮಾಜಿಕ ಏಕತೆ ಮತ್ತು ರಾಷ್ಟ್ರಾಭಿಮಾನದ ಸಂದೇಶವನ್ನು ಸಾರಿತು.




















