ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಜನ ಸೇವೆಗಾಗಿ ಮತ್ತೊಮ್ಮೆ ಹಂಪನಗೌಡ ಬಾದರ್ಲಿ

ಸಿಂಧನೂರು:
ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿ ಸಿಂಧನೂರು ವತಿಯಿಂದ ಶ್ರೀ ಹಂಪನಗೌಡ ಬಾದರ್ಲಿ ಇವರ ನೇತೃತ್ವದಲ್ಲಿ ‘ಹಂಪನಗೌಡರ ನಡೆ ಹಳ್ಳಿಯ ಕಡೆ’ ಗ್ರಾಮೀಣ ಜನತೆಯ ಜೊತೆಗೆ ಸಂವಾದ ಕಾರ್ಯಕ್ರಮ.
ರಾಜಕೀಯ, ಆರೋಗ್ಯ, ನೀರಾವರಿ, ಶೈಕ್ಷಣಿಕ ವಿಚಾರ ಮತ್ತು ಗ್ರಾಮ ಪಟ್ಟಣಗಳ ಅಭಿವೃದ್ಧಿ ಸಾಮಾಜಿಕ ವ್ಯವಸ್ಥೆ ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ಪ್ರತಿ ಗ್ರಾಮಗಳಲ್ಲಿ ಗ್ರಾಮೀಣ ಜನರ ಜೊತೆ ಸಂವಾದ ಕಾರ್ಯಕ್ರಮ ಹಮ್ಮಿಕೊಂಡು ಸಿಂಧನೂರು ವಿಧಾನಸಭಾ ಕ್ಷೇತ್ರದ ಬೂತಲದಿನ್ನಿ, ಮಲ್ಲಯ್ಯ ಕ್ಯಾಂಪ್, ಕಲ್ಲೂರು ಕ್ಯಾಂಪು, ಕಲ್ಲೂರು, ತೆಗ್ಗಿನ ಕ್ಯಾಂಪ್, ರಾಮರೆಡ್ಡಿ ಕ್ಯಾಂಪ್, ಮುಳ್ಳೂರು (ಇ ಜೆ), ಮುಳ್ಳೂರು( ಇ. ಜೆ) ಕ್ರಾಸ್, ಮುಳ್ಳೂರು( ಇ. ಜೆ) ಕ್ಯಾಂಪ್, ಪಗಡದಿನ್ನಿ ಮತ್ತು ಪಗಡದಿನ್ನಿ ಕ್ಯಾಂಪ್ ಗ್ರಾಮದಲ್ಲಿ ನಡೆಯಿತು.
ಹಂಪನಗೌಡ ಬಾದರ್ಲಿಯವರು ಗ್ರಾಮಗಳಿಗೆ ಭೇಟಿ ನೀಡಿದಾಗ ಗ್ರಾಮದ ಜನರು ಬೈಕ್ ರ‍್ಯಾಲಿ, ಡೊಳ್ಳು ವಾದ್ಯಗಳು ಹಾಗೂ ಪಟಾಕಿ ಬಿಡುವ ಮೂಲಕ ತುಂಬಾ ಅದ್ದೂರಿಯಾಗಿ ಸ್ವಾಗತವನ್ನು ಮಾಡಿದರು. ನಂತರ ಗ್ರಾಮದ ಜನತೆ ಕುಂದು ಕೊರತೆಗಳು ವಿಚಾರಿಸಿ ಅವುಗಳಿಗೆ ಪರಿಹಾರ ಒದಗಿಸುವ ಭರವಸೆ ನೀಡಿದರು. ತದನಂತರ ಇವರ ಆಡಳಿತ ಅವಧಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನು, ಅವರ ನಾಯಕತ್ವವನ್ನು, ಕಾಂಗ್ರೆಸ್ ಪಕ್ಷ ತತ್ವ ಸಿದ್ಧಾಂತವನ್ನು ಮೆಚ್ಚಿ ಬಾಬುಗೌಡ ಬಾದರ್ಲಿ ಮತ್ತು ಹನುಮೇಶ ನಾಯಕ ಮುಳ್ಳೂರು ಇವರ ನೇತೃತ್ವದಲ್ಲಿ ಮುಳ್ಳೂರು ಗ್ರಾಮದ ಅಮರೇಗೌಡ,ಬಸವರಾಜ ನಾಯಕ ಮತ್ತು ಸುರೇಶ್ ಮಡಿವಾಳ ಹಾಗೂ ಅನೇಕ ಯುವಕರು ಜೆಡಿಎಸ್ ಪಕ್ಷವನ್ನು ತೆರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಹಂಪನಗೌಡ ಬಾದರ್ಲಿ ಅವರ ಅಭಿಮಾನಿಗಳು, ಬಾಬುಗೌಡ ಬಾದರ್ಲಿ, ಬಸವರಾಜ್ ಹಿರೇಗೌಡ, ಶೇಖರಪ್ಪ ಗಿಣಿವಾರ , ಹನುಮೇಶ ನಾಯಕ ಮುಳ್ಳೂರು, ವಾಗೀಶ್ ಗೆಳೆಯರ ಬಳಗ, ಅನೇಕ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರುಗಳು ಉಪಸ್ಥಿತಿಯಲ್ಲಿದ್ದರು.
ವರದಿ// ವೆಂಕಟೇಶ.H. ಬೂತಲದಿನ್ನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ