ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ವಿವಿಧ ಕಾಮಗಾರಿಗೆ ಶಾಸಕ ಎ. ಆರ್ .ಕೃಷ್ಣಮೂರ್ತಿ ಚಾಲನೆ

ಕೊಳ್ಳೇಗಾಲ: ವಿಧಾನಸಭಾ ವ್ಯಾಪ್ತಿಯ ಚಿಲಕವಾಡಿ ಬೆಟ್ಟದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಚೆಸ್ಕಾಂ ಉಪ ಕೇಂದ್ರ ನಿರ್ಮಾಣ ಕಾಮಗಾರಿ ಹರಳೆ ಗ್ರಾಮದಿಂದ ಎನ್ .ಎಚ್ ಜಂಕ್ಷನ್ ವರೆಗೆ ಒಂದು ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ , ಸಿದ್ದಯ್ಯನಪುರದಿಂದ ಕೆಂಪನಪಾಳ್ಯ ರಸ್ತೆಯವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಕ್ಷೇತ್ರ ಶಾಸಕರಾದ ಎ.ಆರ್ .ಕೃಷ್ಣಮೂರ್ತಿಯವರು ಭೂಮಿ ಪೂಜೆಯನ್ನು ನೆರವೇರಿಸಿ ಕಾಮಗಾರಿಗೆ ಚಾಲನೆಯನ್ನು ನೀಡಿದರು.

ನಂತರ ಶಾಸಕರು ಮಾತನಾಡಿ ಕೊಳ್ಳೇಗಾಲ ಕ್ಷೇತ್ರದ ಚಿಲಕವಾಡಿ ಬೆಟ್ಟದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಚೆಸ್ಕಾಂ ಉಪ ಕೇಂದ್ರದ ಶಾಖಾ ಘಟಕ ಕಚೇರಿ ನಿರ್ಮಾಣ ಕಾಮಗಾರಿ , ಹರಳೆ ಗ್ರಾಮದಿಂದ ಬೆಂಗಳೂರು ಕೊಳ್ಳೇಗಾಲ ಸಂಪರ್ಕದ ಎನ್.ಎಚ್ .ಜಂಕ್ಷನ್ ವರೆಗೆ ಒಂದು ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಸಿದ್ದಯ್ಯನಪುರ ಗ್ರಾಮದಿಂದ ಕೆಂಪನಪಾಳ್ಯ ರಸ್ತೆವರೆಗೆ ಒಂದು ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನಡೆಸಲಾಗಿದೆ .
ಕ್ಷೇತ್ರದ ಜನತೆ ನನಗೆ ಅವಕಾಶ ಕಲ್ಪಿಸಿ ಕೊಟ್ಟ ಮೇಲೆ ಕ್ಷೇತ್ರ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನವನ್ನು ತಂದು ತಾಲ್ಲೂಕಿನ ಎಲ್ಲ ಸಮುದಾಯದ ಎಲ್ಲ ವರ್ಗದ ಸಮುದಾಯ ಭವನಗಳ ನಿರ್ಮಾಣಕ್ಕೆ ಅನುದಾನವನ್ನು ಕೊಟ್ಟಿದ್ದೇನೆ, ಎಲ್ಲಾ ವರ್ಗದ ಬೀದಿಗಳಲ್ಲಿ ರಸ್ತೆ ನಿರ್ಮಾಣಕ್ಕೆ ಅನುದಾನವನ್ನು ಕೊಡಲಾಗಿದೆ ಹಾಗೂ ಯಳಂದೂರಿನಲ್ಲಿ 100 ಹಾಸಿಗೆಯ ಆಸ್ಪತ್ರೆಗೆ ಈಗಾಗಲೇ ನಿರ್ಮಾಣವಾಗಿ ಉದ್ಘಾಟನೆಗೆ ಸಿದ್ಧವಾಗಿದೆ ಮತ್ತು ಮುಡಿಗುಂಡದ ಸೇತುವೆ ಸಮೀಪ ಹೊಸ ಸೇತುವೆ ನಿರ್ಮಾಣಕ್ಕೆ 15 ಕೋಟಿಗೆ ಅನುಮೋದನೆ ದೊರೆತು ಅನುದಾನ ಬಿಡುಗಡೆಯಾಗಿದೆ, ರೇಷ್ಮೆ ಇಲಾಖೆ 5 ಎಕರೆ ಜಾಗದಲ್ಲಿ 200 ಹಾಸಿಗೆಯ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಅನುದಾನ ಅನುಮೋದನೆ ದೊರೆತು ಇನ್ನೂ ಸ್ವಲ್ಪ ದಿನದಲ್ಲಿಯೇ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಯಲಿದೆ , ನಮ್ಮ ಜಿಲ್ಲೆಯಲ್ಲಿನ ಕೊಳ್ಳೇಗಾಲ ಹನೂರು ಭಾಗದ ಜನ ಚಾಮರಾಜನಗರದ ಆಸ್ಪತ್ರೆಗೆ ಹೋಗಬೇಕು ಇಲ್ಲ ಯಡಬೆಟ್ಟದಲ್ಲಿರುವ ಆಸ್ಪತ್ರೆಗೆ ಹೋಗಬೇಕು ಇದು ತುಂಬ ದೂರ ಹಾಗೂ ಪ್ರಯಾಸದ ಕೆಲಸವಾಗಿತ್ತು ಆದ್ದರಿಂದ ಕೊಳ್ಳೇಗಾಲದಲ್ಲಿಯೇ ಒಂದು 200 ಹಾಸಿಗೆಯ ಜಿಲ್ಲಾಸ್ಪತ್ರೆ ನಿರ್ಮಾಣವಾಗುವುದರಿಂದ ಹನೂರು ಭಾಗದ ರಾಮಾಪುರ ಗೋಪಿನಾಥ ಗ್ರಾಮಗಳಿಂದ ಬರುವ ಜನರಿಗೆ ತುಂಬ ಅನುಕೂಲವಾಗಲಿದೆ ,
ಹಾಗೂ ಕೊಳ್ಳೇಗಾಲದಲ್ಲಿ ಮೂರು ಕೆಪಿಎಸ್ ಶಾಲೆಗಳ ನಿರ್ಮಾಣಕ್ಕೂ ಕೂಡ ಅವಕಾಶ ಸಿಕ್ಕಿದೆ , ಸಾರ್ವಜನಿಕರಿಗೆ ತಿಳಿದಿರುವಂತೆ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಎಲ್ಲಾ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಎಲ್ಲರ ಅಭಿವೃದ್ಧಿಗಾಗಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ ಆದ್ದರಿಂದ ಕ್ಷೇತ್ರದ ಜನತೆ ನನ್ನ ಕೆಲಸಗಳನ್ನು ನೋಡಿ ನನಗೆ ಮತ್ತೊಂದು ಅವಧಿಗೆ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ತಮ್ಮಗಳ ಸೇವೆ ಮಾಡಲು ಕ್ಷೇತ್ರದಲ್ಲಿ ಮತ್ತೊಮ್ಮೆ ಅವಕಾಶ ಮಾಡಿಕೊಡಬೇಕು ಎಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲ್ಲೂಕು ಅಧ್ಯಕ್ಷರಾದ ರಾಜೇಂದ್ರ,
ಚೆಸ್ಕಾಂ ಸಹಾಯಕ ನಿರ್ದೇಶಕರಾದ ತಬಸುಂ , ಹಬ್ಜಬಾನು
ಸಹಾಯಕ ಇಂಜಿನಿಯರ್ ಸುರೇಶ್ , ತೋಟೇಶ್ ನಗರಸಭೆ ಮಾಜಿ ಅಧ್ಯಕ್ಷ ರಮೇಶ್ ಹಾಗೂ ಗುತ್ತಿಗೆದಾರರು ಇದ್ದರು.

ವರದಿ : ಕೊಡಕ್ಕಲ್ ಶಿವಪ್ರಸಾದ್ , ಶಿವಮೊಗ್ಗ /ಬೆಂಗಳೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!