ಪುಣ್ಯಕ್ಷೇತ್ರ, ಆಧ್ಯಾತ್ಮಿಕತೆಯ ದಿವ್ಯಕ್ಷೇತ್ರ, ತುಮಕೂರಿನ ಶ್ರೀ ಸಿದ್ದಗಂಗಾ ಮಠದ ದಿವ್ಯ ಸನ್ನಿಧಿಯಲ್ಲಿ ಇದೇ ಆಗಸ್ಟ್ 30ರ ಭಾನುವಾರದಂದು “ಶ್ವೇತಾಂಜಲಿ ಭರತನಾಟ್ಯ ಶಾಲೆ (ರಿ.)” ವತಿಯಿಂದ ಭರತನಾಟ್ಯ ನೃತ್ಯ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ.
ಶ್ವೇತಾಂಜಲಿ ಭರತನಾಟ್ಯ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಾದ ಹೊಯ್ಸಳ ಪ್ರಶಸ್ತಿ ಪುರಸ್ಕೃತ, ಬಾಲಕವಿ ತಾನೀಶ್.ಎನ್, ಮತ್ತು ಚಿಕ್ಕತಿರುಪತಿಯ ಪ್ರತಿಭಾವಂತ ನೃತ್ಯಗಾರ್ತಿ ಕುಮಾರಿ ಜಾನವಿ.ಪಿ.ರೆಡ್ಡಿ ಈ ಪವಿತ್ರ ವೇದಿಕೆಯಲ್ಲಿ ತಮ್ಮ ನೃತ್ಯ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ಬೆಳಗ್ಗೆ 7-30 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಮಠದ ಪೂಜ್ಯ ಶ್ರೀಗಳಾದ ಪೀಠಾಧಿಪತಿಗಳು ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ವಿದ್ಯಾರ್ಥಿಗಳು ನೃತ್ಯ ನಮನ ಸಲ್ಲಿಸಲಿದ್ದಾರೆ.
ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿರುವ ಈ ಭವ್ಯ ಕಾರ್ಯಕ್ರಮಕ್ಕೆ ಕಲಾಭಿಮಾನಿಗಳು, ಪೋಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಬಾಲ ಕಲಾವಿದರನ್ನು ಹರಸಿ ಪ್ರೋತ್ಸಾಹಿಸಬೇಕಾಗಿ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಮುಖ್ಯಸ್ಥರು, ಗುರುಗಳು, ಕರ್ನಾಟಕ ರಾಜ್ಯ ಯುವ ಪ್ರಶಸ್ತಿ ಹಾಗೂ ಕರುನಾಡ ಕಣ್ಮಣಿ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಶ್ವೇತಾನಾಗರಾಜ್ ಕೋರಿದ್ದಾರೆ.
ಈ ಕಾರ್ಯಕ್ರಮದಲ್ಲಿ ಜ್ಞಾನ ಗಂಗಾ ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗದ ಸಾರಥಿಗಳಾದ ಶ್ರೀ ಮಣ್ಣೆ ಮೋಹನ್, ಪ್ರಕಾಶಕರಾದ ಪರಿಮಳ ಮೆಡಂ, ಹಾಗೂ ಪದಾಧಿಕಾರಿಗಳು ಹಾಜರಾಗುವರು.
- ಕರುನಾಡ ಕಂದ ಸುದ್ದಿ




















