ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಈದ್ ಮಿಲಾದ್ ಹಬ್ಬದ ಬೃಹತ್ ಜೂಲುಸ್ ಮೆರವಣಿಗೆ ಸ್ಪರ್ಧೆಯಲ್ಲಿ ಯಾಸಿನ್ ಮಸೀದಿಯ ತಂಡದ ಮೆಕ್ಕಾದಲ್ಲಿ ಮದೀನಾ ಪ್ರಥಮ ಬಹುಮಾನವನ್ನು ಮುಡಿಗೇರಿಸಿಕೊಂಡಿದೆ

ಬಳ್ಳಾರಿ / ಕಂಪ್ಲಿ : ಈದ್ ಮಿಲಾದ್ ಜೂಲುಸ್ ಸ್ಪರ್ಧೆಯಲ್ಲಿ ಯಾಸಿನ್ ಮಸೀದಿಯ
ತಂಡಕ್ಕೆ ಪ್ರಥಮ ಬಹುಮಾನಗಳಿಸಿದೆ. ಶಿಸ್ತು ಮತ್ತು ಕಲೆಗೆ ಸಂದ ಜಯವಾಗಿದೆ.

ಪಟ್ಟಣದಲ್ಲಿ ಬುದುವಾರ ಅತ್ಯಂತ ವೈಭವ ಹಾಗೂ ಸೌಹಾರ್ದತೆಯಿಂದ ಜರುಗಿದ ಈದ್ ಮಿಲಾದ್ (ಮಿಲಾದ್-ಉನ್-ನಬಿ) ಹಬ್ಬದ ಬೃಹತ್ ಜೂಲುಸ್ ಮೆರವಣಿಗೆ ಸ್ಪರ್ಧೆಯಲ್ಲಿ ಮೆಕ್ಕಾದಲ್ಲಿ ಮದೀನಾ ಸ್ಥಬ್ದ ಚಿತ್ರವನ್ನು ಪ್ರಥಮ, ಫ್ಯಾಕ್ಟರಿಯ ಮಸೀದಿಯ ದ್ವಿತೀಯ ಬಹುಮಾನವನ್ನು ಮುಡಿಗೇರಿಸಿಕೊಂಡಿದೆ. ಆಕರ್ಷಕ ಕಲಾಕೃತಿ, ಸೌಹಾರ್ದತೆಯ ಮೆರವಣಿಗೆಯಲ್ಲಿ ತಂಡವು ಪ್ರದರ್ಶಿಸಿದ ಪವಿತ್ರ ಮದೀನಾ ಮಸೀದಿ ಹಾಗೂ ಕಾಬಾ ಮಂದಿರದ ಅತ್ಯಂತ ಸುಂದರ ಹಾಗೂ ಆಕರ್ಷಕ ಪ್ರತಿಕೃತಿಗಳು ಸಾರ್ವಜನಿಕರ ಹರಸಿಕೆಗೆ ಪಾತ್ರವಾದವು. ಇದರೊಂದಿಗೆ ಪ್ರವಾದಿ ಮಹಮ್ಮದರ ಶಾಂತಿ, ಕರುಣೆ ಮತ್ತು ಸೌಹಾರ್ದತೆಯ ಬೋಧನೆಗಳನ್ನು ಸಾರುವ ಬ್ಯಾನರ್‌ಗಳು ಹಾಗೂ ಫಲಕಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡಿದವು.

ಸುಮಧುರವಾದ ಪ್ರವಾದಿ ಗೀತೆಗಳು (ನಅತ್ ಶರೀಫ್) ಮತ್ತು ಕಣ್ಮನ ಸೆಳೆಯುವ ಸ್ಥಬ್ದ ಚಿತ್ರಗಳು ಜೂಲುಸ್‌ಗೆ ವಿಶೇಷ ಮೆರುಗು ನೀಡಿತು.

ವೇದಿಕೆಯ ಮೇಲೆ ಪ್ರಥಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆಶಿಖಾನೆ ಗೌಸುಲ್ವರಾ ಕಮಿಟಿ ಯಾಸಿನ್ ಮಸೀದಿ ಪ್ರಮುಖರು, “ಈ ಮಹತ್ತರ ಯಶಸ್ಸು ನಮ್ಮ ಇಡೀ ತಂಡದ ಸದಸ್ಯರ ಕಠಿಣ ಪರಿಶ್ರಮ, ಒಗ್ಗಟ್ಟು ಮತ್ತು ಶಿಸ್ತಿಗೆ ಸಂದ ಗೌರವವಾಗಿದೆ. ನಮಗೆ ಪ್ರಥಮ ಬಹುಮಾನ ನೀಡಿ ಪ್ರೋತ್ಸಾಹಿಸಿದ ಗೌರವಾನ್ವಿತ ತೀರ್ಪುಗಾರರಿಗೆ ಹಾಗೂ ಸಂಘಟಕರಿಗೆ ನಮ್ಮ ಸಮಿತಿ ಪರವಾಗಿ ಹೃದಯಪೂರ್ವಕ ಧನ್ಯವಾದಗಳು” ಎಂದು ತಿಳಿಸಿದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!