ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ವಿಶ್ವಕರ್ಮ ಸಮಾಜದಿಂದ ಶುಕ್ರವಾರದಂದು ಶ್ರೀ ಕಾಳಿಕಾ ಕಮ್ಮಠೇಶ್ವರ ದೇವರ ಗಂಗೆಸ್ಥಳ, ಉತ್ಸವ ಮೆರವಣಿಗೆ ಶ್ರದ್ದಾಭಕ್ತಿ ಜರುಗಿತು.
ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ನಡೆದ ಭವ್ಯ ಮೆರವಣಿಗೆ ನಡೆಯಿತು. ನಂತರ ಭಕ್ತರೆಲ್ಲರಿಗೂ ತೀರ್ಥ ಪ್ರಸಾದವನ್ನು ವಿತರಿಸಲಾಯಿತು ಸಂಜೆ ಕಾಳಿಕಾ ಕಮಟೇಶ್ವರ ದೇವರ ಉಯ್ಯಾಲೆ ಪೂಜೆ ಶಾಸ್ತ್ರೋಕ್ತವಾಗಿ ನೆರವೇರಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಡಿ.ರುದ್ರಪ್ಪ ಪ್ರಾಚಾರ್ಯ ಕಾರ್ಯದರ್ಶಿ ಡಿ.ಮೌನೇಶ್, ಮುಖಂಡರಾದ ಕಾಳಚಾರಿ, ನಾರಾಯಣಚಾರ್, ಮೌನೇಶ್, ರಾಘು, ಮಲ್ಲಿ, ಚಂದ್ರಶೇಖರ ಆಚಾರ್, ರಾಘವೇಂದ್ರ, ಷಣ್ಮುಖ ಆಚಾರ್, ರಾಮಚಂದ್ರ ಆಚಾರ್, ಮಹಿಳಾ ಅಧ್ಯಕ್ಷೆ ರಾಧಾ, ಡಿ.ವೀಣಾ, ವಿಜಯಲಕ್ಷ್ಮಿ, ಪೂಜಾ ಸೇರಿದಂತೆ ಸಮಾಜದವರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















