ನನ್ನತನ ಎನ್ನುವುದನ್ನು ಉಳಿಸಿಕೊಳ್ಳುತ
ನಮ್ಮತನಕ್ಕೆ ಪ್ರಾಶಸ್ತ್ಯವನ್ನು ಸದಾ ನೀಡುತ
ಸ್ವಂತಿಕೆ ಸ್ವಾಭಿಮಾನದಿಂದ ಬದುಕುತ್ತಿರುವೆ
ನಾನ್ಯಾರು ಎಂಬುದ ಕಂಡುಕೊಳ್ಳುತಿರುವೆ
ನಾನು ಎಂಬ ಅಹಂಕಾರದಿಂದ ಆಚೆಗೆ
ನಾನೇ ಎಲ್ಲಾ ಎನ್ನುವ ಮಾತಿನ ಹೊರಗೆ
ನಿಂತು ಬದುಕಲು ಬಯಸುತಿರುವೆ ನಾನು
ಅದಕ್ಕಾಗಿ ಸತತ ಪ್ರಯತ್ನ ಮಾಡುತ್ತಿರುವೆನು.
ಜನನ ಮರಣಗಳು ನನ್ನ ಅಧೀನದಲ್ಲಿಲ್ಲ
ಇವುಗಳ ನಡುವಿನ ಜೀವನವೂ ನನ್ನದಲ್ಲ,
ಅತಿಥಿಯಾಗಿ ಈ ಧರೆಗೆ ನಾ ಬಂದಿರುವೆನು
ಅಲ್ಪಕಾಲವಿದ್ದು ನಾ ಹೊರಟು ಹೋಗುವೆನು.
ಜೀವಿಸುವ ರೀತಿಯಲ್ಲಿ ನಾನ್ಯಾರು ಎಂಬುದಿದೆ
ಜೀವನ ಶೈಲಿಯೇ ನನ್ನನ್ನು ಪರಿಚಯಿಸುತಿದೆ.
-ಸುನಿಲ್ ಲೇಖಕ್ ಎನ್
ಬೆಂಗಳೂರು



















