ಕೊಪ್ಪಳ -ದೇಶದಲ್ಲಿ ಆಟೋಮೋಬೈಲ್ ಇಂಡಸ್ಟ್ರಿ ಬೆಳವಣಿಗೆ ಮತ್ತು ದೇಶದ ಆರ್ಥಿಕತೆ ಸಬಲೀಕರಣಕ್ಕೆ ಶ್ರೀರಾಮ್ ಫೈನಾನ್ಸ್ ಕಂಪನಿ ಅಪಾರ ಕೊಡುಗೆ ನೀಡಿದೆ. ಜೊತೆಗೆ ಇಂದು ಕೊಪ್ಪಳದಲ್ಲಿ 2500 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಇವರ ಸೇವೆ ಶ್ಲಾಘನೀಯ ಎಂದು ಸಂಸದ ರಾಜಶೇಖರ್ ಹಿಟ್ನಾಳ ಮಾತನಾಡಿದರು.
ಅವರು ಕೊಪ್ಪಳ ನಗರದ ಮಧುಶ್ರೀ ಗಾರ್ಡನ್ ನಲ್ಲಿ ಶ್ರೀರಾಮ್ ಕಂಪನಿ ಪ್ರಾಯೋಜಕತ್ವದಲ್ಲಿ ಜರುಗಿದ ಶ್ರೀ ರಾಮ್ ಸೇವಾ ಸಂಕಲ್ಪದ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ಶ್ರೀ ರಾಮ್ ಫೈನಾನ್ಸ್ ಲಿಮಿಟೆಡ್ ಕಂಪನಿಯ ಮಾನ್ಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀಧರ್ ಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಾಮಾನ್ಯ ಚಾಲಕರು, ಕ್ಲೀನರ್‌ಗಳುಗಳು ಸೇರಿದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಸಹ ಕಮರ್ಷಿಯಲ್ ಟ್ರಕ್ ಮಾಲೀಕರಾಗಬೇಕು ಎನ್ನುವ ಉದ್ದೇಶದಿಂದ ಗೌರವಾನ್ವಿತ ಶ್ರೀ ಆರ್. ತ್ಯಾಗರಾಜನ್ ರವರು ಸ್ಥಾಪನೆ ಮಾಡಿದ ಶ್ರೀರಾಮ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಎಂಬ ಕಂಪನಿ ಇಂದು ದೇಶದ ಆರ್ಥಿಕ ಸಬಲೀಕರಣಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಎಂದು ಕಂಪನಿ ಪರಿಚಯ ಹೇಳಿದರು. ಅವರು ಶ್ರೀ ರಾಮ್ ಕಂಪನಿ 3225 ಶಾಖೆಗಳ ನೆಟ್‌ವರ್ಕ್ ಹೊಂದಿದ್ದು, 831 ಗ್ರಾಮೀಣ ಕೇಂದ್ರಗಳನ್ನು ಹೊಂದಿದ್ದು ಹಾಗೂ ಭಾರತಾದ್ಯಂತ 50 ಪ್ರಾದೇಶಿಕ ಕಚೇರಿಗಳನ್ನು ಹೊಂದಿದ್ದು ಹಾಗೂ 28 ರಾಜ್ಯಗಳಲ್ಲಿ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಲ್ಲಿ ಸುಮಾರು 10.03 ಮಿಲಿಯನ್ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. 79,000 ಉದ್ಯೋಗಿಗಳ ಕುಟುಂಬಕ್ಕೆ ಉದ್ಯೋಗ ನೀಡಿದೆ . ರೂ.3.02/- ಲಕ್ಷ ಕೋಟಿ ವಹಿವಾಟು ಮಾಡುತ್ತಾ ಇಡೀ ಭಾರತದಲ್ಲಿ ಪ್ರಮುಖ ಹಣಕಾಸು ಸಂಸ್ಥೆಯಾದ ಶ್ರೀರಾಮ್ ಫೈನಾನ್ಸ್ ಕಂಪನಿ ಇಂದು ಚಾಲಕರ ಮಕ್ಕಳಿಗೆ ಈ ರೀತಿ ಪ್ರತಿ ವರ್ಷ ದೇಶಾದ್ಯಂತ 30 ಸಾವಿರಕ್ಕೂ ಅಧಿಕ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿದೆ ಎಂದರು.
ಕಾರ್ಯಕ್ರಮದ ಸಾನಿಧ್ಯವನ್ನು ಪೂಜ್ಯ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು ಬಿಸರಳ್ಳಿ ಗವಿಸಿದ್ದೇಶ್ವರ ಶಾಖಾಮಠ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ ಎಸ್ ದರಗದ , ಶಾಸಕ ರಾಘವೇಂದ್ರ ಹಿಟ್ನಾಳ್, ಮಾಜಿ ಸಂಸದ ಸಂಗಣ್ಣ ಕರಡಿ, ಶ್ರೀನಿವಾಸ್ ಗುಪ್ತ, ರಾಜ್ಯ ಪ್ರಶಸ್ತಿ ಪುರಸ್ಕೃತೆ ಹುಚ್ಚಮ್ಮ ಚೌದರಿ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಶಿಕ್ಷಣಾಧಿಕಾರಿ ಶೇಖರ್ ಹೊರಪೇಟೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ಮಹಾ ವರಿಷ್ಟಾಧಿಕಾರಿ ಹೇಮಂತ್ ಕುಮಾರ್ , ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಆನಂದಹಳ್ಳಿ, ಶ್ರೀ ರಾಮ್ ಕಂಪನಿಯ ಶ್ರೀ ಚನ್ನನ ಗೌಡ
ಪ್ರಹ್ಲಾದ್ ಕುಲಕರ್ಣಿ ರಾಘವೇಂದ್ರ, ಟಿ ಆರ್,ರಾಘವೇಂದ್ರ ಶೆಟ್ಟಿ, ಮಂಜುನಾಥ ಸಿಂಧೋಗಿ, ಮಂಜುನಾಥ ಕೊಪ್ಪಳ ಸೇರಿದಂತೆ ಹಲವರು ಇದ್ದರು.
- ಕರುನಾಡ ಕಂದ ಸುದ್ದಿ




















