
ಕನ್ನಡ ನಾಡಿನ ಸೇವೆಗೆ ನಾವು ಸದಾ ಸಿದ್ಧ.
ಕಲ್ಬುರ್ಗಿ. ಇಂದು ಕನ್ನಡ ನಾಡನ್ನು ಕಟ್ಟುವುದಕ್ಕಿಂತ ಕಾಯುವುದು ಬಹಳ ಕಷ್ಟ. ಕನ್ನಡಿಗರು ನಾಡಿಗಾಗಿ ತ್ಯಾಗ ಮತ್ತು ಸೇವೆಯನ್ನು ಮೈಗೂಡಿಸಿಕೊಳ್ಳಬೇಕು. ತಾಯ್ನಾಡಿನ ಸೇವೆ ಮಾಡುವ ಯೋಗ ಎಲ್ಲರಿಗೂ ಸಿಗುವುದಿಲ್ಲ .ನಾಡಿಗಾಗಿ ಕೆಲವು ತ್ಯಾಗಗಳು ಹೋರಾಟಗಳು ಮಾಡಬೇಕಾಗುತ್ತದೆ. ಕನ್ನಡಕ್ಕಾಗಿ ಹೋರಾಟ ಮಾಡಿ ಕೆಲವು ಬೇಡಿಕೆಗಳಾದ ಏತ ನೀರಾವರಿ ಯೋಜನೆ, ದತ್ತಾತ್ರೇಯ ದೇವಾಲಯ ಅಭಿವೃದ್ಧಿ, ಕಲ್ಯಾಣ ಕರ್ನಾಟಕ ವಲಸೆ ತಪ್ಪಿಸಲು, ನಿರುದ್ಯೋಗ ನಿರ್ಮೂಲನೆ ಮಾಡುವುದು, ಕೈಗಾರಿಕಾಳನ್ನು ಸ್ಥಾಪಿಸಿ ಅಭಿವೃದ್ಧಿಪಡಿಸಲು. ಇಂದು ಕಲ್ಯಾಣ ಕಲಬುರ್ಗಿಯಲ್ಲಿ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಮ್ಮ ನಡೆ ಕಲ್ಯಾಣ ಕಲಬುರ್ಗಿಯ ಕಡೆ ಎಂಬ ಘೋಷಣೆಯೊಂದಿಗೆ ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಬಣದ ವತಿಯಿಂದ 1500 ಕನ್ನಡದ ಕಟ್ಟಾಳುಗಳು, ಕನ್ನಡ ವೀರ ಸಾರ್ವಜನಿಕರು ಭಾಗಿಯಾಗಿ ಬೃಹತ್ ಪಾದಯಾತ್ರೆ ಕೈಗೊಂಡಿದ್ದರು.
ನಿನ್ನೆ ಕಲಬುರ್ಗಿ ಕೇಂದ್ರ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೂ ಈ ಬೃಹತ್ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು ಪಾದಯಾತ್ರೆಯ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಾದಯಾತ್ರೆಯಲ್ಲಿ ಕರವೇ ರಾಜ್ಯಾಧ್ಯಕ್ಷರಾದ ಪ್ರವೀಣ್ ಶೆಟ್ಟಿರು, ರಾಜ್ಯ ಉಪಾಧ್ಯಕ್ಷರು ಉಮೇಶ್ ಗೌಡ್ರು, ಉತ್ತರ ಕರ್ನಾಟಕ ಅಧ್ಯಕ್ಷರಾದ ಶ್ರೀ ಶರಣು ಬಿ ಗದ್ದುಗೆ, ಕೊರಟಗೆರೆ ತಾಲೂಕು ಅಧ್ಯಕ್ಷರಾದ ನರಸಿಂಹರಾಜು ಎಲ್ ಸೇರಿದಂತೆ ಇತರರು ಹೋರಾಟದಲ್ಲಿ ಭಾಗಿಯಾಗಿದ್ದರು.
ವರದಿ. ಪ್ರಸನ್ನಕುಮಾರ್ .ಎಸ್. ಕೊರಟಗೆರೆ




















