
ಕೊರಟಗೆರೆಯ ಸತ್ಯ ಗಣಪತಿ ಮಂಡಳಿ ವತಿಯಿಂದ ಅದ್ದೂರಿ 66ನೇ ವರ್ಷದ ಗಣೇಶ ಪ್ರತಿಷ್ಠಾಪನೆಯ ಮಹೋತ್ಸವ ನೆರವೇರಿತು. ಇಂದು ಯುವಕರ ಬಂಧು, ನಾಟಕ ಪ್ರತಿಭೆಗಳ ಪ್ರೋತ್ಸಾಹಕ ,ಸಮಾಜ ಸೇವಕರಾದ ಪಿಎನ್ ಕೃಷ್ಣಮೂರ್ತಿಯವರು ಶ್ರೀ ಸತ್ಯ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಹಾಗೂ ಅನ್ನ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ನೆರವೇರಿಸಿ ನಂತರ ರತ್ನಮಂಜರಿ ನಾಟಕ ವೀಕ್ಷಿಸಿ ಈ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಕ್ಷೇತ್ರದ ಹಿರಿಯರು, ಯುವಕರು ಹಾಗೂ ಮಕ್ಕಳ ಮನರಂಜನೆಗಾಗಿ ನಡೆಯುವುದು ತುಂಬಾ ಸಂತೋಷದ ವಿಷಯ. ಹಿಂದೆ ಬಾಲಗಂಗಾಧರ್ ತಿಲಕ್ ರವರು ಜನರನ್ನು ಒಗ್ಗೂಡಿಸಲು ಗಣಪತಿ ಉತ್ಸವವನ್ನು ಪ್ರಾರಂಭಿಸಿದರು. ಅದೇ ರೀತಿ ಸಮಾಜ ಸೇವಕರಾದ ಪಿಎನ್ ಕೃಷ್ಣಮೂರ್ತಿಯವರು ಯಾವುದೇ ಪಕ್ಷಪಾತವಿಲ್ಲದೆ ಎಲ್ಲಾ ಕ್ಷೇತ್ರದ ಜನರು ನನ್ನ ಬಂಧುಗಳು ಅವರ ಪ್ರೀತಿಗೆ ನಾನು ಚಿರಋಣಿ. ಈ ಧಾರ್ಮಿಕ ಆಚರಣೆಯು ಯುವ ಪೀಳಿಗೆಯನ್ನು ಒಗ್ಗೂಡಿಸುವ ವೇದಿಕೆ ಗಣೇಶೋತ್ಸವ. ಯುವಕರು ಹಾಗೂ ಗ್ರಾಮದ ಎಲ್ಲರೂ ಸಂಘಟಿತರಾಗಿ ಗ್ರಾಮಗಳ ಅಭಿವೃದ್ಧಿ ಹಾಗೂ ಸಾಮಾಜಿಕ ಪ್ರವೃತ್ತಿಯಲ್ಲಿ ಬೆಳೆಯಬೇಕು. ಇದರಿಂದ ನಾವೆಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಗಣೇಶನನ್ನು ಎಲ್ಲಾ ಶುಭಕಾರ್ಯಗಳಲ್ಲಿ ಪ್ರಥಮ ಪೂಜೆ ಮಾಡಿ ಯಾವುದೇ ಜಾತಿ ಭೇದವಿಲ್ಲದೆ ಮೊದಲ ಪೂಜೆ ಅವನಿಗೆ ಸಲ್ಲಿಸುತ್ತಾರೆ. ಹಾಗೆ ಕ್ಷೇತ್ರದ ಎಲ್ಲಾ ಜನರು ಎಲ್ಲಾ ಪಕ್ಷದವರು ನನ್ನನ್ನು ಪ್ರೀತಿಯಿಂದ ಅಣ್ಣ, ಸಮಾಜ ಸೇವಕರು ಎಂದು ಆಶೀರ್ವದಿಸುವುದು ನನ್ನ ಭಾಗ್ಯ. ಎಂದು ನಾಟಕ ವೀಕ್ಷಿಸಿ ಪ್ರೋತ್ಸಾಹ ಧನವಾಗಿ 50,000 ನಗದನ್ನು ನೀಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ಲಾಘನೀಯ ಎಂದು ಪಿಎನ್ ಕೃಷ್ಣಮೂರ್ತಿಯವರು ಹೇಳಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಕಾಮರಾಜು, ಚಿಕ್ಕ ರಂಗಯ್ಯ, ಪುಟ್ಟ ನರಸಪ್ಪ, ಲಂಬೂರಾಜಣ್ಣ ,ಲಕ್ಷ್ಮೀನಾರಾಯಣ್ ಹಾಗೂ ಚೌಡಪ್ಪ ಇನ್ನು ಅನೇಕ ಮುಖಂಡರುಗಳು, ಭಕ್ತರು, ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ವರದಿ. ಪ್ರಸನ್ನ ಕುಮಾರ್. ಎಸ್. ಕೊರಟಗೆರೆ




















