ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಗೊಲ್ಲಾಳೇಶ್ವರ ಜಾತ್ರೆಯಲ್ಲಿ ರಥದ ಮೇಲಿಂದ ಬಿದ್ದು ವ್ಯಕ್ತಿ ಸಾವು

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ನಡೆಯುತ್ತಿದ್ದ ಗೋಲ್ಲಾಳೇಶ್ವರ ಜಾತ್ರೆಯ ರಥೋತ್ಸವದ ವೇಳೆ ಆಯತಪ್ಪಿ ಮೇಲಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಗೋಲಗೇರಿಯ ಗ್ರಾಪಂ ಮಾಜಿ ಸದಸ್ಶ ಸಾಹೇಬ ಪಟೇಲ (ಮುದುಕಣ್ಣ) ಖಾಜಾಪಟೇಲ ಕಾಚಾಪೂರ (55) ಮೃತ ದುದೈ೯ವಿ. ಈತ ಮೇಲಿಂದ ಕೆಳಕ್ಕೆ ಬಿದ್ದ ಸಂದಭ೯ದಲ್ಲಿ ರಥದ ಬಳಿ ನಿಂತಿದ್ದ ನಿಜಣ್ಣ ಬಡಿಗೇರ ಅವರ ಕಾಲು ಮುರಿದಿದ್ದು, ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಮೃತನನ್ನು ಊರ ಜನರು ಮುದುಕಪ್ಪ ಅಂತಲೇ ಕರೆಯುತ್ತಿದ್ದರು ಈತ ತನ್ನ 18ನೇ ವಯಸ್ಸಿನಿಂದಲೂ ಜಾತ್ರೆಯ ಸಂದರ್ಭದಲ್ಲಿ ತೇರಿನ ಕಳಶ ಮತ್ತು ಕೊಡೆಯನ್ನು ಕಟ್ಟುತ್ತಿದ್ದ ಪ್ರತಿ ವರ್ಷದಂತೆ ಈ ಸಲವೂ ಕಟ್ಟುತ್ತಿದ್ದ ವೇಳೆ,ಕೈಯಲ್ಲಿದ್ದ ಹಗ್ಗ ಕೊಸರಿದ ಪರಿಣಾಮ ಸುಮಾರು 70 ಅಡಿ ಎತ್ತರದ ರಥದ ಮೇಲಿಂದ ಕೆಳಗೆ ಬೀಳುವ ವೇಳೆ ರಥವು ಬಡಿದು ಸಾವನ್ನಪ್ಪಿದ್ದಾನೆ ಘಟನೆ ಹಿನ್ನೆಲೆ ರಥೋತ್ಸವವನ್ನು ರದ್ದುಗೊಳಿಸಲಾಗಿದೆ.

ಏ.6ರಂದು ಗೋಲ್ಲಾಳೇಶ್ವರ ಜಾತ್ರೆ ರಥೋತ್ಸವದೊಂದಿಗೆ ಆರಂಭಗೊಂಡು ಐದು ದಿನಗಳ‌ ನಂತರ ಕಳಸದ ಮೆರವಣಿಗೆ ಆದ ಮೇಲೆ ಜಾತ್ರೆ ಸಂಪನ್ನಗೊಳ್ಳಲಿತ್ತು. ಆದರೆ ಅಷ್ಟರೊಳಗಾಗಿ ಈ ಅವಘಡ ಸಂಭವಿಸಿದೆ ಗೋಲ್ಲಾಳೇಶ್ವರ ಜಾತ್ರೆಗೆ ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ಲಕ್ಷಾಂತರ ಜನ ಭಕ್ತರು ಸೇರುತ್ತಾರೆ.
ಈ ಸಂಬಂಧ ಧಮ೯ದಶಿ೯ ವರಪುತ್ರ ಹೊಳೆಪ್ಪನವರ ದೇವರಮನಿ ಭಕ್ತರಿಗೆ ಮನವಿ ಮಾಡಿದ್ದು,ಸದ್ಯ ರಥದಿಂದ ಬಿದ್ದಿರುವ ಮುದುಕಣ್ಣ ಕಾಚಾಪುರ ಗೋಲ್ಲಾಳೇಶ್ವರ ದೇವಸ್ಥಾನದಲ್ಲಿ ಹಲವು ವರ್ಷಗಳಿಂದ ಸೇವೆ ಮಾಡುತ್ತಿದ್ದರು.ಈ ದುರ್ಘಟನೆಯಿಂದ ಭಕ್ತರು ದೃತಿಗೆಡಬಾರದು. ಶಾಂತಿ ಕಾಪಾಡಬೇಕು ಎಂದು ಕೇಳಿಕೊಂಡಿದ್ದಾರೆ. ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ-ಖಾದರಬಾಷ ಮೇಲಿನಮನಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ