ಹನೂರು:ವಿಧಾನಸಭಾಕ್ಷೇತ್ರ ಹಲವಾರು ಸುಳ್ಳು ಭರವಸೆಗಳನ್ನು ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದವರು ಇಂದು ನಮ್ಮೆಲ್ಲರಿಗೂ ಮಕ್ಮಲ್ ಟೋಪಿಯಾಕುತ್ತಾರೆ ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಸಾಮಾನ್ಯ ಜನರು ಬದುಕುವುದು ಬಹಳ ಕಷ್ಟವಾಗುತ್ತದೆ ಅಲ್ಲದೆ ಬಡವರ ಪರವಾಗಿ ಚಿಂತಿಸುವ ಕಾಂಗ್ರೇಸ್ ಪರವಾಗಿ ಹಾಗೂ
ಅಭಿವೃದ್ದಿ ಪರವಾಗಿ ಜನರ ಕೆಲಸ ಮಾಡುವವರನ್ನು ನೀವು ಆಯ್ಕೆ ಮಾಡಿ ಕೆಲಸಮಾಡದೆ ಇರುವವರನ್ನು ಆಯ್ಕೆ ಮಾಡಬೇಡಿ ಹಾಗೂ ನಮ್ಮ ಭಾಗದಲ್ಲಿ ವಿಶೇಷವಾಗಿ ಹೆಚ್ವಿನ ಅನುದಾನ ಅಭಿವೃದ್ದಿಯತ್ತ ಕೊಂಡೊಯ್ಯುಲು ಸಹಕಾರಿಯಾಗಬೆಕು ಎಂದು ತಿಳಿಸಿದರು.
ಹನೂರು ಕ್ಷೇತ್ರದ ಕುರಟ್ಟಿ ಹೊಸೂರು ಗ್ರಾಮದಲ್ಲಿ ನಡೆದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಆರ್ ನರೇಂದ್ರ ಅವರು ಕುಡಿಯುವ ನೀರಿನಿಂದ ಪ್ರಾರಂಭಿಸಿ,ಈ ಭಾಗಕ್ಕೆ ಶಾಲಾ ಕಾಲೇಜ್ ಮಂಜೂರು ಉತ್ತಮ ರಸ್ತೆ,ಚರಂಡಿ ಸೇರಿದಂತೆ ಹಲವಾರು ಕಾಮಗಾರಿಗಳನ್ನು ಸಿದ್ದರಾಮಯ್ಯನವರ ಅವಧಿಯಲ್ಲಿ ಮೂರು ಸಾವಿರ ಕೋಟಿ ಅನುದಾನದಲ್ಲಿ ಕ್ಷೇತ್ರ ಅಭಿವೃದ್ದಿ ಮಾಡಿದ್ದೇನೆ ಬಿ ಜೆ ಪಿ ಸರ್ಕಾರವು ಬಂದ ನಂತರ ಬಿಪಿ ಸಕ್ಕರೆ ಕಾಯಲೆ ಮಾತ್ರೆಗೂ ಜಿಎಸ್ ಟಿ ಹಾಕಿದ ಸರ್ಕಾರ ಅವರದು ಶಾಲಾ ಮಕ್ಕಳಿಗೂ ನೀಡುವ ಬಿಸಿಯುಟ ನಿಲ್ಲಿಸಿದ್ದಿರ ,ಇಂತಹ ಅನೇಕ ಕಾರ್ಯಕ್ರಮವನ್ನು ಬಿ ಜೆ ಪಿ ಸರ್ಕಾರ ನಿಲ್ಲಿಸಿದೆ ಇದಲ್ಲದೆ ಎದುರಾಳಿಗಳಿಬ್ಬರು ಸಹ ಕ್ಷೇತ್ರದ ಹೊರಗಿನವರು ನಿಮಗೆ ನಮ್ಮ ಅವಶ್ಯಕತೆಯನ್ನು ಮನಗಂಡು ಮತ ನೀಡಲು ಮನವಿ ಮಾಡಿದರು.
ಇದೇ ಸಮಯದಲ್ಲಿ ಅರಬಗೆರೆ,ಭದ್ರಯನಹಳ್ಳಿ ,ದಂಟಳ್ಳಿ,ಎಲ್ ಪಿ ಎಸ್ ಕ್ಯಾಂಪ್ ಸೇರಿದಂತೆ ವಿವಿದೆಡೆ ಪ್ರಚಾರ ಕಾರ್ಯ ಮಾಡಿದರು ಇದೇ ವೇಳೆ ರಾಮಪುರ ಜಿಲ್ಲಾಪಂಚಾಯಿತಿ ಮಾಜಿ ಉಪಾದ್ಯಕ್ಷ ಬಸವರಾಜು,ಉದ್ಯಮಿ ಪೊನ್ನಾಚಿ ರಂಗಸ್ವಾಮಿ, ಹನೂರು ಪಟ್ಟಣ ಪಂಚಾಯಿತಿ ಉಪಾದ್ಯಕ್ಷ ಗಿರೀಶ್ ಕುಮಾರ್,ಸದಸ್ಯ ಹರಿಶ್ ಕುಮಾರ್,ಗ್ರಾಪಂ ಸದಸ್ಯರುಗಳಾದ ಬಸವರಾಜು ,ಶಿವು ,ರಾಜಾರಾಮ್ , ವೆಂಕಟಚಲ,ಶಿವಕುಮಾರ್ ,ಅದ್ಯಕ್ಷರಾದ ಸ್ವಾಮಿ,ಮುಖಂಡರುಗಳಾದ ಸೋಮಶೆಖರ್ ,ಮೆಹಬೂಬ್ ,ಮಾದೇಶ್ ,ಬಸವರಾಜು ,ಶ್ರೀರಂಗಶೆಟ್ಟಿ ,ಸರೋಜ, ರಾಜಪ್ಪ,ಮಂಜುನಾಥ್,ಸರ್ದಾರ್ , ,ಶಿವಣ್ಣ ,ಪುಟ್ಟುವಿರನಾಯಕ ,ಸಿದ್ದರಾಜು ,ಸೆರಿದಂತೆ ಇತರರು ಹಾಜರಿದ್ದರು .
ಪ್ರಚಾರದ ಸಮಯಲ್ಲಿ ಅನ್ಯ ಪಕ್ಷ ತೋರೆದು ಹಲವರು ಕಾಂಗ್ರೇಸ್ ಸೆರ್ಪಡೆಗೊಂಡರು ಅವರಲ್ಲಿ ಸಿದ್ದಮಲ್ಲಪ್ಪ ,ಪಚ್ಚೆಗೌಡ,ಗೊವಿಂದ,ಚಿನ್ನವೆಂಕಟ ಬೊವಿ,ತಂಬಡಿ ನಾಗಣ್ಣ,ಇತರರು ಹೊಸಳ್ಳಿ ವಿರಮಲ್ಲೆಗೌಡ ,ಮಾದುಗೌಂಡ,ಚನ್ನಶೆಟ್ಟಿ,ಮಾಲಶೆಟ್ಟಿ,ಬಸವ ,ಚಿನ್ನಸ್ವಾಮಿ,ಶಂಬ,ಚಾಮುಂಡಿ,ಗಣೇಶ, ,ಚುಕ್ಕನಾಯಕ,ರುದ್ರ,ಮಾದೆವಸೆಟ್ಟಿ,
ಜಡೆಸ್ವಾಮಿ ಟಿ ವಿಲೆಜ್,ಕರ್ಪಾಚಿ ಅಮ್ಮ,ಡಿ ವಿಲೆಜ್ ಜಡಿಯ ಸೇರಿದಂತೆ ಇನ್ನೂ ಹಲವರಿದ್ದರು .
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.