ಯೋಚಿಸುತಲಿರು ನಿನ್ನ ಯೋಜನೆಗಳ ಬಗ್ಗೆ
ಕಿಂಚಿತ್ತು ಯೋಚಿಸಬೇಡ, ಮುರಿದು ಹೋದ ಸಂಬಂಧಗಳ ಬಗ್ಗೆ.
ನಿನ್ನ ದಾರಿ ಸ್ಪಷ್ಟವಾಗುವುದು ನಿನ್ನ ನೋಡಿ ಆಡಿಕೊಳ್ಳುವವರ ಮುಂದೆ.
ಜಗ್ಗಲಿಲ್ಲ ಕುಗ್ಗಲಿಲ್ಲ ಮನವೇ ನೀ ತೋರುತ್ತ ಇರು ,ಹೀಗೆ ಮಾರ್ಗದರ್ಶನ,ಈಗೀಗ ನನಗಿಲ್ಲ ಯಾವ ಸೋಲಿನ ಚಿಂತೆ.
ಸಂಬಂಧಗಳು ಸಂಬಂಧಿಕರು ತೋರುವ ನಾಟಕದ ಅಂತೆ ,ಕಂತೆ
ನೀ ಗುರಿ ಮುಟ್ಟಿದರೆ ಬರುವರು ಇಂತಹ ಸಂಬಂಧಿಕರು ಸಾಲುಗಟ್ಟಿ ಸಂತೆಯಂತೆ.
ನಿನ್ನಲ್ಲಿ ನೀನಾಗಿರಲು ಯೋಚಿಸುವರು, ನಿನ್ನದೇ ಆದಾ ಭವಿಷ್ಯದ ಚಿಂತೆ.
ನೀ ಗುರಿ ಮೆಟ್ಟಿ ನಿಂತಾಗ ಬಾಯಿ ತೆರೆದು ಹೇಳುವರು ಅವರು ನಮ್ಮ ಸಂಬಂಧಿಯಂತೆ.
-ಮದನಾ ವೈಶಾಲಿ,ಜಾಲಹಳ್ಳಿ ವೆಸ್ಟ್ ಶೆಟ್ಟಿಹಳ್ಳಿ
ಬೆಂಗಳೂರು-560015