ಯಾದಗಿರಿ: ಶಹಾಪುರ ವಿಧಾನಸಭಾ ಕ್ಷೇತ್ರದ ಗಂಗನಾಳ ಗ್ರಾಮದ ಯುವಕರು ಮತ್ತು ಸಮಾಜದ ಹಿರಿಯರು ಮುಖಂಡರು ಅಮೀನರಡ್ಡಿ ಯಾಳಗಿ ಇವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿ ಅವರು ನಾನು ಐದು ಕಿರುಪರಿಚಯ ಗ್ರಾಮದ ಜನತೆಗೆ ಗೊತ್ತಿದೆ ನಾನು ಜೆಡಿಎಸ್ ಪಕ್ಷದಿಂದ ಸೋತಾಗಿನಿಂದ ಗ್ರಾಮದ ಕಷ್ಟ ಸುಖಕ್ಕೆ ಸ್ಪಂದಿಸಿದೆನೆ ಎಂದು ಹೇಳಿದರು.
ಈಗ ನಾನು ಬಿಜೆಪಿ ಅಭ್ಯರ್ಥಿ ಆಗಿ ನಿಮ್ಮ ಮುಂದೆ ಬಂದಿದ್ದೇನೆ. ನಾನು ಎಂ.ಎಲ್.ಎ ಆಗಿ ಬಂದರೆ ಶಹಾಪುರ ವಿಧಾನಸಭಾ ಕ್ಷೇತ್ರದ ಜನರೆ ಎಂ.ಎಲ್.ಎ ಇದ್ದ ಹಾಗೆ ನಾನು ಬಿಜೆಪಿ ಅಭ್ಯರ್ಥಿಯಾಗಿ ನನ್ನನು ಗುರುತಿಸಿ ಮುಂಬರುವ ತಾಲೂಕ ಪಂಚಾಯತಿ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಗ್ರಾಮದ ಯುವಕರನ್ನು ಗುರುತಿಸುವ ಪಕ್ಷ ಯಾವುದು ಎಂದರೆ ಅದು ನಮ್ಮ ಬಿಜೆಪಿ ಪಕ್ಷ ಎಂದು ಹೇಳಿದರು.
ಶಹಾಪುರ ತಾಲೂಕ ಪ್ರತಿ ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲಾ ರಸ್ತೆ ಇಲ್ಲಾ ಇದಕ್ಕೆಲ್ಲ ಹೊಣೆಗಾರರು ಯಾರು ಅಂದ್ರೆ ಶಾಸಕ ಶರಣಬಸಪ್ಪ ದರ್ಶನಾಪುರ ಅವರು ಎಂದರು ಈ ಸಂದರ್ಭದಲ್ಲಿ ಗಂಗನಾಳ ಗ್ರಾಮದ ಹಿರಿಯರು ಮುಖಂಡರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು.
ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ