ಯಾದಗಿರಿ: ಸುರಪುರ ತಾಲೂಕಿನ ಸಾರ್ವತ್ರಿಕ ಚುನಾವಣೆ 2023 ಸಾಲಿನ ಬಿರುಸಿನ ಪ್ರಚಾರದ ವೇಳೆ ಬಿಜೆಪಿ ಶಾಸಕರಾದ ರಾಜುಗೌಡ ಕಾಂಗ್ರೆಸ್ ಕಾರ್ಯಕರ್ತರಿಗೆ ತರಾಟೆಗೆ ತೆಗೆದುಕೊಂಡರು.
ಸಾಮಾಜಿಕ ಜಾಲತಾಣದಲ್ಲಿ ಕೆಲವು ಸುದ್ದಿಗಳಿಗೆ ಕಾಂಗ್ರೆಸ್ ನ ಕಾರ್ಯಕರ್ತರು ತಪ್ಪು ತಪ್ಪಾಗಿ ಕಾಮೆಂಟ್ ಮಾಡುತ್ತಿದ್ದೀರಿ.
ಕಾಂಗ್ರೆಸ್ ಕಾರ್ಯಕರ್ತರು ಇದನ್ನೇ ಮುಂದು ವರಿಸಿದ್ದೇ ಆದರೆ ನಿಮ್ಮ ಜಾತಕಗಳು ನನ್ನ ಬಳಿ ಇವೆ. ಅದನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ಬಿಟ್ಟರೆ ನಿಮ್ಮ ರಾಜಕೀಯ ಜೀವನದಲ್ಲಿ ಏರು ಪೇರು ಆಗುತ್ತದೆ ಎಚ್ಚರ ಎಂದು ಸಾರ್ವಜನಿಕರ ಸಮ್ಮುಖದಲ್ಲಿ ಎಚ್ಚರಿಕೆ ಕೊಟ್ಟಿದ್ದಾರೆ.
ಅದು ಅಲ್ಲದೆ ನೀವುಗಳು ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಒತ್ತಡ ಹೇರುವುದನ್ನು ಬಿಟ್ಟು ನನ್ನ ಬಳಿ ಬಂದು ಮಾಡಿಸಿಕೊಂಡಿರುವ ಕೆಲಸಗಳು ತುಂಬಾ ಇದೆ ಅದನ್ನು ಎಲ್ಲಾ ಆಚೆ ಬಿಡಬೇಕಾಗುತ್ತದೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ವರದಿ-ರಾಜಶೇಖರ ಮಾಲಿ ಪಾಟೀಲ್ ಶಹಾಪುರ