ಹರಪನಹಳ್ಳಿ:ವಿಧಾನಸಭಾ ಕ್ಷೇತ್ರದ ನೂತನ ಮಹಿಳಾ ಶಾಸಕರಾಗಿ ಇತಿಹಾಸ ಸೃಷ್ಟಿಸಿದ ಸಹೋದರಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ಬೆಂಗಳೂರಿನಿಂದ ಹರಪನಹಳ್ಳಿಗೆ ಆಗಮಿಸಿದ ನಂತರ ಮೊದಲ ಬಾರಿಗೆ ಭೇಟಿ ನೀಡಿ ಶುಭಕೋರಿದ ಯುವ ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ಗಂಗಜ್ಜಿ ನಾಗರಾಜ್ ಅವರು
ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ಸಾಮಾಜಿಕ,ಧಾರ್ಮಿಕ,ಸಾಂಸ್ಕೃತಿಕವಾಗಿ ಬಡವರ ಕೂಲಿ ಕಾರ್ಮಿಕರ ಹಿಂದುಳಿದ ವರ್ಗದವರ ಧ್ವನಿಯಾಗಿ ಸಮಾಜಮುಖಿ ಸೇವೆಯನ್ನು ಸಲ್ಲಿಸಿದ ಲತಕ್ಕ ಅವರಿಗೆ ಈ ಬಾರಿ ಹರಪನಹಳ್ಳಿ ಕ್ಷೇತ್ರದ ಜನರು ಬಹುಮತದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆ ಮಾಡಿದ್ದಾರೆ.ಲತಕ್ಕ ಅವರು ಕ್ಷೇತ್ರವನ್ನು ಒಂದು ಮಾದರಿ ತಾಲ್ಲೂಕನ್ನಾಗಿ ಮಾಡುತ್ತಾರೆ ಎಂಬ ಎಲ್ಲಾ ಭರವಸೆ ನಮಗಿದೆ ಎಂದು ನಾಗರಾಜ್ ಅವರು ತಿಳಿಸಿದರು.