ಹಾನಗಲ್ ಪಟ್ಟಣದ ರೋಷಿಣಿ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಹಾಗೂ ವಿವಿಧ ಇಲಾಖೆಗಳ ವತಿಯಿಂದ , ರೋಷಿಣಿ ವಿದ್ಯಾಸಂಸ್ಥೆಯ ಮುಖಂಡತ್ವದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಈ ಒಂದು ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷರಾದ ಅನಂತ್ ವಿಕಾಸ್ ನಿಂಗೋಜಿ. ತಾಲೂಕ ವೈದ್ಯಾಧಿಕಾರಿಗಳಾದ ಲಿಂಗರಾಜ . ಶಿಕ್ಷಣ ಇಲಾಖೆ ಅಧಿಕಾರಿಗಳಾದ ಚಂದ್ರಪ್ಪ ಸಿ ಹಾಗೂ ಬಿ ಆರ್ ಸಿ. ಮತ್ತು. ಸಿ ಆರ್ ಪಿ ಗಳು ಹಾಗೂ ವಿದ್ಯಾಸಂಸ್ಥೆಯ ಮುಖ್ಯ ಶಿಕ್ಷಕಿ ಸಿಸ್ಟ ಬೆನಿತಾ ಮತ್ತು ಸಹ ಶಿಕ್ಷಕ ವೃಂದದವರು, ಸಿಬ್ಬಂದಿ ವರ್ಗದವರು ದೈಹಿಕ ಶಿಕ್ಷಕರಾದ ಪಾಂಡುರಂಗ ನಾಗೋಜಿ. ಜಗದೀಶ್ ಕಬ್ಬೂರ. ವಿದ್ಯಾ ಸಂಸ್ಥೆಯ ಸುಮಾರು ಐದುನೂರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಒಂದು ಯೋಗ ಶಿಬಿರದಲ್ಲಿ ಉಪಸ್ಥಿತಿ ಇದ್ದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಿಕೊಟ್ಟರು ಮತ್ತು ಮುದ್ದು ಮಕ್ಕಳು ಯೋಗವನ್ನು ಮಾಡುವುದರ ಮೂಲಕ ಅತಿಥಿಗಳ ಗಮನ ಸೆಳೆದರು.
ವರದಿ ರವಿ ಓಲೆಕಾರ ಹಾನಗಲ