ಇಂಡಿ:15ನೇ ಹಣಕಾಸು ಯೋಜನೆಯಡಿಯಲ್ಲಿ ಬಂದ 59 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಹೇಶ್ ರಾಠೋಡ ಮತ್ತು ಅಧ್ಯಕ್ಷರಾದ ಮುತ್ತಪ್ಪ ರೇವಪ್ಪ ಚಿಕ್ಕಬೆನ್ನೂರು ಅವರ ವಿರುದ್ಧ ಆರೋಪ ಬಂದಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ನಡೆದಿದೆ.
2021-22 ನೆಯ ಸಾಲಿನ 15ನೇ ಹಣಕಾಸು ಯೋಜನೆಯಡಿಯಲ್ಲಿ ಬಂದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಇಂಡಿ ತಾಲೂಕಿನ ಹಿರೆಬೇವನೂರ ಗ್ರಾಮ ಪಂಚಾಯತಿ ಪಿಡಿಒ ವಿರುದ್ಧ ಅಬ್ದುಲ್ ರಜಾಕ ಮಕಾನದಾರ ಅವರು ಆರೋಪಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
15ನೇ ಹಣಕಾಸು ಯೋಜನೆಯಡಿ ಬರುವ ಹಣವನ್ನು ಕಾಮಗಾರಿಗೆ ಹಣ ಬಳಕೆ ಮಾಡದೆ ಹಣವನ್ನು ನುಂಗಿ ನೀರು ಕುಡಿದಿದ್ದಾರೆ
ಸುಮಾರು 59 ಲಕ್ಷ ರೂಪಾಯಿ ಹಣ ಸರ್ಕಾರದ ಹಣವನ್ನು ಲೂಟಿ ಮಾಡಿಕೊಂಡಿರುತ್ತಾರೆ ಬಿಲ್ ನಲ್ಲಿ ತೋರಿಸಿದ ಕಾಮಗಾರಿಗಳು ಎಲ್ಲಿಯೂ ಯಾವ ಕಾರಣಕ್ಕೂ ನಡೆದಿಲ್ಲ ಎಂದು ಆರೋಪ ಬಂದಿರುವ ಕಾರಣ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ಗ್ರಾಮ ಪಂಚಾಯತಿಯಲ್ಲಿ ಹಣ ಲೂಟಿ ಮಾಡಿದವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡೋಣ.
ವರದಿ. ಅರವಿಂದ್ ಕಾಂಬಳೆ ಇಂಡಿ