ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರ್ನಾಟಕ ಪತ್ರಕರ್ತರ ಸಂಘ ರಾಜ್ಯ ಸಮಿತಿಯಿಂದ ಇಂದು ಬಾಗಲಕೋಟೆ ಜಿಲ್ಲೆಯ ನವನಗರದಲ್ಲಿ ಪತ್ರಿಕಾ ದಿನಾಚರಣೆ ಮತ್ತು ರಾಜ್ಯ ಕಾರ್ಯಕಾರಿಣಿ ಸಭೆ

ಬಾಗಲಕೋಟೆ:ಕಾರ್ಯಕ್ರಮವನ್ನು ಬಾಗಲಕೋಟೆ ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿ ನಡೆಸಿಕೊಟ್ಟರು.
ಸಭೆಯ ಸಾನಿಧ್ಯವನ್ನ ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಅಲ್ಲಮಪ್ರಭು ಸಾಮೀಜಿಗಳು ವಹಿಸಿದ್ದರು ಕಾರ್ಯಕ್ರಮದ ಮುಖ್ಯಅಥಿತಿಗಳಾಗಿ ಬಾಗಿಲಕೋಟೆಯ ಶಾಸಕರಾದ ಎಸ್ ವೈ ಮೇಟಿಯವರು ಆಗಮಿಸಿ ಸಮಾರಂಭವನ್ನು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ಇಂದು ಪತ್ರಿಕೆ ನಡೆಸುವುದು ತುಂಬಾ ಕಷ್ಟ, ಪತ್ರಕರ್ತರ ಕೆಲಸ ತುಂಬಾ ಕ್ಲಿಷ್ಟ,ಸಮಾಜದ ಮತ್ತು ದೇಶದ ಬದಲಾವಣೆಯಲ್ಲಿ ಪತ್ರಿಕಾ ಕ್ಷೇತ್ರ ಪ್ರಮುಖ ಪಾತ್ರ ವಹಿಸಿದೆ,ಸಂಘದ ಮತ್ತು ಪತ್ರಕರ್ತರ ಎಲ್ಲಾ ಸಹಕಾರ ಸಹಾಯವನ್ನು ಸರ್ಕಾರದ ಮುಖಾಂತರ ಮಾಡುತ್ತೇನೆ ಈ ಕುರಿತು ಮುಖ್ಯ ಮಂತ್ರಿಗಳಲ್ಲಿ ಮಾತಾನಾಡುತ್ತೇನೆ ಪತ್ರಕರ್ತರ ಕಲ್ಯಾಣಕ್ಕಾಗಿ ಶ್ರಮಿಸುವ ಸಮಾರಂಭ ಯಶಸ್ವಿಯಾಗಲಿ ಎಂದು ಹೇಳಿದರು ಸಮಾರಂಭದ ಅಧ್ಯಕ್ಷತೆಯನ್ನು ಮುರುಗೇಶ ಶಿವಪೂಜೆ ವಹಿಸಿದ್ದರು ಈ ಸಂದರ್ಭದಲ್ಲಿ ಮಾತನಾಡಿ ಸಂಘವು ಪ್ರಾರಂಭದಿಂದಲೂ ಸರ್ಕಾರ ಮತ್ತು ಯಾರಿಂದಲೂ ಸಹಾಯ ನಿರೀಕ್ಷೆ ಮಾಡದೆ ಸದಸ್ಯರಿಗೆ ಮಾಡುತ್ತಿರುವ ಸಹಾಯಗಳನ್ನು ತಿಳಿಸಿದರು,ಸಂಪಾದಕರು ಮತ್ತು ವರದಿಗಾರರಲ್ಲದೆ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲಾ ಸದಸ್ಯರಿಗೂ 4 ಲಕ್ಷ ರೂ ವಿಮೆ ಮತ್ತು ಹಣಕಾಸಿನ ಸಹಾಯ ಮಾಡುತ್ತಿದೆ ಎಂದು ಹೇಳಿ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು ಸಾನಿಧ್ಯ ವಹಿಸಿದ್ದ ಶ್ರೀಗಳು ಮಾತನಾಡಿ ವ್ಯಕ್ತಿಯ ವಿಶೇಷ ಬೆಳವಣಿಗೆಯನ್ನ ಪತ್ರಿಕೆ ಮಾಡುತ್ತಿದೆ,ಗ್ರಾಮೀಣ ಭಾಗದ ಪತ್ರಕರ್ತರನ್ನು ಗುರುತಿಸಿ ಅವರಿಗೆ ವಿಶೇಷ ಸಹಾಯ ಮಾಡುತ್ತಿರುವ ಪ್ರಥಮ ಏಕೈಕ ಸಂಘ ಕರ್ನಾಟಕ ಪತ್ರಕರ್ತರ ಸಂಘ, ಈ ಕೆಲಸ ಉಳಿದ ಸಂಘಗಳಿಗೆ ಮಾದರಿಯಾಗಬೇಕು, ಪತ್ರಕರ್ತರು ಒಳ್ಳೆಯ ಮನಸ್ಥಿತಿ ಇಟ್ಟುಕೊಂಡು ಕೆಲಸ ಮಾಡಬೇಕು,ಇವರ ಜವಾಬ್ದಾರಿ ಮಹತ್ವದ್ದಾಗಿದೆ, ಸಮಾಜದಲ್ಲಿ ಶಾಂತಿ ಮೋಡಿಸುವ ಕೆಲಸವನ್ನು ಮಾಡಬೇಕು ಸಮಾಜಕ್ಕೆ ಒಳ್ಳೆಯದಾಗಿಸುವ ಮತ್ತು ಒಳ್ಳೆಯದನ್ನು ಮಾಡುತ್ತಿರುವ ವ್ಯಕ್ತಿಗಳನ್ನು ಗುರುತಿಸುವ ಕೆಲಸ ಮಾಡಬೇಕು ಪತ್ರಕರ್ತರಿಗೆ ಇರುವ ಕಷ್ಟಗಳನ್ನು ಪ್ರತಿಬಿಂಬಿಸಿ ಅವುಗಳನ್ನು ನಿವಾರಿಸುವ ಕಾರ್ಯವನ್ನು ಕರ್ನಾಟಕ ಪತ್ರಕರ್ತರ ಸಂಘ ಮಾಡಲಿ ಎಂದು ಆಶೀರ್ವಾದ ನೀಡಿದರು ವೇದಿಕೆಯಲ್ಲಿ ಸಂಘದ ರಾಜ್ಯ ಪದಾಧಿಕಾರಿಗಳು,ಎಲ್ಲಾ ಜಿಲ್ಲೆಯ ಅಧ್ಯಕ್ಷರು ಉಪಸ್ಥಿತರಿದ್ದರು ಪ್ರಾರಂಭದಲ್ಲಿ ಬಾಗಿಲಕೋಟೆ ಕರ್ನಾಟಕ ಪತ್ರಕರ್ತರ ಸಂಘದ ಅಧ್ಯಕ್ಷರಾದ ಡಿ ಬಿ ವಿಜಯಶೆಂಕರ್ ಸ್ವಾಗತಿಸಿದರು,ಸುದೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ವರದಿ:ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ