ನೂರೆಂಟು ಅಲೋಚನೆಗಳ ಅರ್ಥವಾಗದ ಪದಗಳು..
ಕಪಿಚೇಸ್ಟೆಯ ಮೌನದ ಮಾತುಗಳು..
ಈ ಜೋಡಿಸದ ವಾಕ್ಯಕ್ಕೆ ಅರ್ಥವಾಗದ ತಾತ್ಪರ್ಯ..
ಹುಡುಕಾಟದಲಿ ಮೌನದ ನಿಘಂಟಿನ ತಿರಳು…
ಮನದ ಮಾತಿನ ಸುರಿಮಳೆಗೆ ಈ ಭಾವನೆಗಳ ಮೂಕ ಭಾಷೆಯೇ ಕಾರಣ..
ಮುಸುಕಿದ ನೆನಪಲ್ಲಿ ಮತ್ತೆ ಆ ದಿನಗಳ ಅರಸುವ ಕ್ಷಣ..
ಚಂದದ ನುಡಿಗಂಟಲಿ ಪದಗಳ ಸಮ್ಮಿಲನ, ಹುಡುಕುವ ಭವಾರ್ಥಕ್ಕೆ ಈ ಅಕ್ಷರಗಳ ಮಿಲನ….
ಮುಗುಳುನಗೆಯ ಮನಕ್ಕೆ ಈ ನಗೆಯೇ ಸಡಗರ..
ಕಂಪನದ ಕಣ್ಣಿಗೆ ನಿಮ್ಮಯ ಕನಸುಗಳ ಹಂದರ..
ಮಾತಿನ ಸುರಿಮಳೆಗೆ ಪದಗಳ ಪಂಜರ..
ಭಾವನೆಗೆ ನಿಲುಕದ ಭಾವಕ್ಕೆ ನಿಮ್ಮ ಈ ಪದಗಳೇ ಜೀವಾರ….
-ಮಂಜುಳಾ ಜಾಗೀರದಾರ
ಲಕ್ಷ್ಮೇಶ್ವರ