ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಮೌಲ್ಯವಿರುತ್ತದೆ.ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವನ್ನು ಅದರ ಮೌಲ್ಯದಿಂದ ಅಳೆಯಲಾಗುತ್ತದೆ. ಅದೇ ರೀತಿ ಪ್ರತಿಯೊಬ್ಬ ವ್ಯಕ್ತಿಯನ್ನು ಅವನ ಪ್ರತಿಭೆ ಮತ್ತು ಕೌಶಲದಿಂದ ಅಳೆಯಲಾಗುತ್ತದೆ.
ಹೇಗೆ ಕೆಲವೊಂದು ವಸ್ತುಗಳನ್ನು ಪಾಲಿಶ್ ಮಾಡಿ ಹೊಳಪನ್ನು ನೀಡಲಾಗುತ್ತದೆ ಹಾಗೆ ಕಾಲಕಾಲಕ್ಕೆ ನಮ್ಮ ಕೌಶಲಗಳನ್ನು ಅಪ್ಡೇಟ್ ಆಗುವಾದರ ಮೂಲಕ ವೃದ್ಧಿಸಿಕೊಳ್ಳಬೇಕು.
ನಿಂತ ನೀರು ಹೇಗೆ ಕೊಳಚೆ ಆಗರವಾಗುತ್ತದೆಯೇಾ ಹಾಗೆ ನಮ್ಮ ಬದುಕಿನಲ್ಲಿ ಚಲನ ಶೀಲತೆಯನ್ನು ರೂಢಿಸಿಕೊಳ್ಳಬೇಕು.
ಉತ್ತಮ ಗುಣಗಳನ್ನು ಅಳವಡಿಸಿ ಕೊಳ್ಳುವಾದರಿಂದ ಮತ್ತು ನಮ್ಮ ವ್ಯಕ್ತಿತ್ವವನ್ನು ಕಾಲಕಾಲಕ್ಕೆ ತಕ್ಕಂತೆ ಹರಿಯುವ ನೀರಿನಂತೆ ರೂಢಿಸಿಕೊಂಡರೆ ಅದು ತನ್ನ ಮೌಲ್ಯವನ್ನು ತಾನಾಗಿಯೇ ಹೆಚ್ಚಿಸಿಕೊಳ್ಳುತ್ತದೆ.
ಈ ದಿಕ್ಕಿನಲ್ಲಿ ಸಾಗೋಣ…
-ಗಾಯತ್ರಿ ಸುಂಕದ,ಬಾದಾಮಿ.




















