ಕೊಟ್ಟೂರು: ತಾಲೂಕಿನಲ್ಲಿ ಮಳೆ ಬಾರದ ನಿಮಿತ್ತ ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪಟ್ಟಣದ ಭಕ್ತರು ಶ್ರೀ ಸ್ವಾಮಿಗೆ ಪೂಜೆ ಸಲ್ಲಿಸಿ.
ನಂತರ ಪಟ್ಟಣದ ಮಳೆ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಕೊಟ್ಟೂರೇಶ್ವರ ಭಜನಾ ಮಂಡಳಿ ಮಳೆಗಾಗಿ ಪ್ರಾರ್ಥಿಸಿ ವರುಣ ದೇವನನ್ನು ಕುರಿತು ಭಜನೆ ಮಾಡಿದರು.
ದೇವಾಲಯವನ್ನು ಭಕ್ತರು ಹಸಿರು ತೋರಣಗಳಿಂದ ಅಲಂಕರಿಸಿದ್ದರು. ನಂತರ ಮಳೆ ತೋರಣಗಳಿಂದ ಮಲ್ಲೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಕೋಟೆ ಭಾಗದ ರೈತರು ಮಳೆಗಾಗಿ ಮಲ್ಲೇಶ್ವರ ಸ್ವಾಮಿಯ ಲಿಂಗದ ಸುತ್ತ ಮಣ್ಣಿನ ಕಟ್ಟೆ ಕಟ್ಟಿ ಪೂಜೆ ಸಲ್ಲಿಸಿದ ತರುವಾಯ ಗಂಗೆ ಪೂಜೆ ಸಲ್ಲಿಸಿ ಕರಗಲ್ಲಿಗೆ ಪೂಜೆ ಸಲ್ಲಿಸಲಾಯಿತು.
ನಂತರ ಲಿಂಗದ ಸುತ್ತ ಕಟ್ಟಿದ ಮಣ್ಣಿನ ಕಟ್ಟೆಗೆ ಭಕ್ತರು ೧೩ ಬಿಂದಿಗೆ ನೀರನ್ನು ಹಾಕಿದ ನಂತರ ಮಣ್ಣಿನ ಕಟ್ಟೆ ಈಶಾನ್ಯ ಮೂಲೆಗೆ ಹೊಡೆದಿದ್ದರಿಂದ ಈ ಸಲ ಮಳೆಸಮೃದ್ಧವಾಗಿ ಬರಲಿದೆ ಎಂದು ಭಕ್ತರು ಹರ್ಷಗೊಂಡರು.
ವರದಿ ಕೆ.ಗೋಣೆಪ್ಪ




















