ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಆಜಾದ್ ನಗರದಲ್ಲಿರುವ ಎಚ್ ಕೆ ಜಿ ಎನ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದಂತಹ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಎಚ್ ಕೆ ಜಿ ಎನ್ ಸಂಸ್ಥಾಪಕರಾದ ಡಾಕ್ಟರ್ ಅಬ್ದುಲ್ ಶಕುರ್ ಗುರೂಜಿ ಹೊಲಿಗೆ ತರಬೇತಿ ಉದ್ಯೋಗ ಆರ್ಥಿಕ ಸ್ವಾವಲಂಬನೆಯಿಂದ ಆತ್ಮವಿಶ್ವಾಸ ಹೆಚ್ಚು ಸಮಾಜದ ಪ್ರಗತಿಗೆ ಕೊಡುಗೆ ನೀಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಸಾಧ್ಯ ಎಂದರು.
ನಂತರ ಮಾತನಾಡಿದ ಹೊಲಿಗೆ ತರಬೇತಿ ಶಿಕ್ಷಕಿಯರಾದ ರೇಷ್ಮಾ ನಾನು ಹಲವು ವರ್ಷಗಳಿಂದ ಎಚ್ ಕೆ ಜಿ ಎನ್ ಹೊಲಿಗೆ ತರಬೇತಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ ಇದರ ಸಂಪೂರ್ಣ ಜವಾಬ್ದಾರಿಯನ್ನು ಡಾಕ್ಟರ್ ಅಬ್ದುಲ್ ಶುಕುರ್ ಗುರೂಜಿ ನಿರ್ವಹಿಸಿ ಕೊಟ್ಟಿದ್ದಾರೆ ಮತ್ತು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲಿ ತೊಡಗಿ ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದರು.
ಎಚ್ ಕೆ ಜೆ ಎನ್ ಹೊಲಿಗೆ ತರಬೇತಿ ಕೇಂದ್ರದ ಸಂಸ್ಥಾಪಕರು ಡಾಕ್ಟರ್ ಅಬ್ದುಲ್ ಶುಕೂರ್ ಗುರೂಜಿ ಅವರ ಸ್ವಂತ ಖರ್ಚಿನಲ್ಲಿ ಎಚ್ ಕೆ ಜಿ ಎನ್ ಹೊಲಿಗೆ ತರಬೇತಿ ಸಂಪೂರ್ಣ ಉಚಿತವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ತರಬೇತಿ ವಿದ್ಯಾರ್ಥಿ ಅಭಿಪ್ರಾಯಪಟ್ಟರು.
ಡಾ. ಅಬ್ದುಲ್ ಶುಕುರ್ ಗುರೂಜಿ ಇವರಿಗೆ ತರಬೇತಿದಾರರ ಪರವಾಗಿ ಸನ್ಮಾನ ಮಾಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತರಬೇತಿದಾರರು ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















