ಅಕ್ಷರ ಬರದಾರ ನೋಡವ್ವ
ಓದಾಕ ಕಲಿಬೇಕು ನೀನವ್ವ
ಅಕ್ಷರ ಬೆಳಕು ತಿಳಿಯವ್ವ
ಕಲಿತರ ನೀನೇ ಬೆಳಕವ್ವ
ಪದಗಳ ಜೋಡಿಸಿ ನೋಡವ್ವ
ಕಥೆ ಕವನ ಅದರಾಗವ್ವ
ಓದಿ ಬರೆದರ ನೀನವ್ವ
ಸಾಹಿತ್ಯ ಒಲಿವುದು ನಿನಗವ್ವ
ಅಂಕಿಯ ಸ್ಥಾನ ನೋಡವ್ವ
ಅದರ ಮಹಿಮೆ ದೊಡ್ಡದವ್ವ
ಕೂಡಿಸಿ ಕಳೆದರ ನೀನವ್ವ
ಲೆಕ್ಕ ಸುಲಭ ನಿನಗವ್ವ
ಕಲಿವ ಕೌಶಲ್ಯ ದೊಡ್ಡದವ್ವ
ಅದರಾಗ ಬದುಕಿದೆ ತಿಳಿಯವ್ವ
ಜಗದ ಅರಿವು ಅಕ್ಷರದಾಗವ್ವ
ಕಲಿತರ ಜಗವೇ ಚಿಕ್ಕದವ್ವ
ದ್ವಿಭಾಷೆ ಕಲಿಕೆ ಬಂದೈತೆವ್ವ
ಸೊಗಸಾದ ಭಾಷಾಂತರ ಅದರಾಗವ್ವ
ಜಗದ ಭಾಷೆ ಕೈಯಾಗವ್ವ
ಕಲಿತರ ಯಜಮಾನಿ ನೀನವ್ವ
- ಕಲ್ಲಪ್ಪ ಕವಳಕೇರಿ ಮಂಗಳೂರು✍️
(ಕೊಪ್ಪಳ ಜಿಲ್ಲೆ )




















