ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ತೀರ್ಥಹಳ್ಳಿಯ ಏಕೈಕ ‘ಕುಶಾವತಿ ಮಕ್ಕಳ ಪಾರ್ಕ್’ ಅವ್ಯವಸ್ಥೆಯ ಆಗರ: ತುಕ್ಕು ಹಿಡಿದ ಆಟಿಕೆಗಳಿಂದ ಮಕ್ಕಳಿಗೆ ಗಾಯ !


ಶಿವಮೊಗ್ಗ : ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯ ಕುಶಾವತಿ ಪಾರ್ಕ್ ಪಾಳು ಬಿದ್ದಿದೆ. ಆ ಕುಶಾವತಿ ಮಕ್ಕಳ ಪಾರ್ಕಿನಲ್ಲಿ ಯಾವುದೇ ಆಟದ ಪರಿಕರಗಳು ಸರಿಯಿಲ್ಲದೆ ಎಲ್ಲಾ ತುಕ್ಕು ಹಿಡಿದು ಮುರಿದುಬಿದ್ದಿದೆ, ಅದನ್ನು ಪಟ್ಟಣ ಪಂಚಾಯಿತಿಯವರು ಸರಿ ಮಾಡದೆ ಹಾಗೆಯೇ ಬಿಟ್ಟಿದ್ದಾರೆ ಹಾಗೂ ತಾಲೂಕು ಆಡಳಿತ ಸಹ ಅದರ ಬಗ್ಗೆ ಯಾವುದೇ ಗಮನ ಹರಿಸುತ್ತಿಲ್ಲ, ತೀರ್ಥಹಳ್ಳಿಯಲ್ಲಿರುವ ಏಕೈಕ ಪಾರ್ಕ್ ಅಂದರೆ ಕುಶಾವತಿ ಪಾರ್ಕ್, ಚಿಕ್ಕ ಮಕ್ಕಳಿಗೆ ಸಂಜೆ ಹೊತ್ತಲ್ಲಿ ಸಮಯ ಕಳೆಯಲು ಆಟವಾಡಲು ಇದ್ದ ಒಂದು ಸ್ಥಳವೂ ಸಹ ಪಾಳು ಬಿದ್ದ ಕೊಂಪೆಯಾಗಿದೆ. ಅದರಲ್ಲಿ ಮಕ್ಕಳು ಆಟವಾಡಲು ಹೋಗಿ ದೇಹಗಳಿಗೆ ಗಾಯಗಳನ್ನು ಮಾಡಿಕೊಂಡಿದ್ದಾರೆ ದಯವಿಟ್ಟು ಅದರಲ್ಲಿರುವ ಎಲ್ಲಾ ಕಬ್ಬಿಣದ ವಸ್ತುಗಳನ್ನು ತೆಗೆದು ತುಕ್ಕು ಬರದ ಜಿ ಐ ಯಲ್ಲಿ ಮಾಡಿರುವಂತಹ ಉತ್ತಮ ಗುಣಮಟ್ಟದ ಆಟದ ವಸ್ತುಗಳನ್ನು ಅಲ್ಲಿ ಜೋಡಿಸಬೆಕು. ಆ ಪಾರ್ಕ್ ನಲ್ಲಿ ಮಕ್ಕಳಿಗಿಂತ ದೊಡ್ಡವರೇ ಕೂತು ಆಟವಾಡುತ್ತಿದ್ದಾರೆ ಅಲ್ಲಿ ಯಾವುದೇ ಸೆಕ್ಯೂರಿಟಿಗಳು ಸಹ ಇರುವುದಿಲ್ಲ ಹಾಗೂ ಮಕ್ಕಳಿಗೆ ಆಟವಾಡುವಾಗ ಶೌಚಾಲಯ ವ್ಯವಸ್ಥೆ ರಾತ್ರಿ ಸಮಯದಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇರುವುದಿಲ್ಲ ಕುಡಿಯಲು ನೀರಿನ ವ್ಯವಸ್ಥೆಯೂ ಇರುವುದಿಲ್ಲ ಸರ್ಕಾರದಿಂದ ಯಾವುದೇ ಮೂಲಭೂತ ಸೌಕರ್ಯಗಳು ಸಹ ಅಲ್ಲಿ ಇರುವುದಿಲ್ಲ ಆದ್ದರಿಂದ ದಯವಿಟ್ಟು ಪಟ್ಟಣ ಪಂಚಾಯತಿಯವರು ಈಗಲಾದರೂ ಎಚ್ಚೆತ್ತುಕೊಂಡು ಆ ಎಲ್ಲಾ ಸೌಕರ್ಯಗಳನ್ನು ಒದಗಿಸಿ ಹಾಗೂ ಮಕ್ಕಳ ಆಟದ ವಸ್ತುಗಳನ್ನು ಸರಿಯಾದ ಗುಣಮಟ್ಟದಲ್ಲಿ ಹಾಕಿ ಸರಿಪಡಿಸಿ ಹೊಸದಾಗಿ ನವೀಕರಿಸಬೇಕಾಗಿ ತೀರ್ಥಹಳ್ಳಿಯ ಶಾಸಕರು ಹಾಗೂ ತೀರ್ಥಹಳ್ಳಿ ತಾಲ್ಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಅವರನ್ನು ಎಲ್ಲಾ ಪೋಷಕರು ಕೇಳಿಕೊಳ್ಳುತ್ತಿದ್ದಾರೆ.

ವರದಿ : ಪ್ರಸಾದ್ ಹೆಚ್ ಬಿ, ತೀರ್ಥಹಳ್ಳಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!