ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಏಳು ಮಂದಮ್ಮ ತಾಯಿ ಹಾಗೂ ಜಡೆ ಮುನೇಶ್ವರಸ್ವಾಮಿ ಸನ್ನಿಧಾನದಲ್ಲಿ ಸಂಭ್ರಮದಿಂದ ಲಕ್ಷ ದೀಪೋತ್ಸವ.

ಹೊಸಕೋಟೆ ಗ್ರಾಮಸ್ಥರಿಂದ ಸಡಗರ ಸಂಭ್ರಮದ ಲಕ್ಷಾ ದೀಪೋತ್ಸವ.

ಕೊರಟಗೆರೆ. ತಾಲೂಕಿನ ನೀಲಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ ಗ್ರಾಮದಲ್ಲಿ 30 ವರ್ಷಗಳ ಇತಿಹಾಸ ಹೊಂದಿರುವ ತಾಯಿ ಸನ್ನಿಧಾನದಲ್ಲಿ ಇಂದು ಅತ್ಯಂತ ಸಂಭ್ರಮದಿಂದ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಕಾರ್ಯಕ್ರಮ ನೆರವೇರಿತು.
ಇಂದು ಏಳು ಮಂದಮ್ಮ ದೇವಾಲಯದಲ್ಲಿ ಬೆಳಗ್ಗೆ ಪುಷ್ವಾರ್ಚನೆ ಮಂಗಳಾರತಿ ಪೂಜೆ ಹವನಗಳು ದೀಪಾಲಂಕಾರ ,ಹೂವಿನ ಅಲಂಕಾರ, ಮೆರವಣಿಗೆಯೊಂದಿಗೆ ನೆರವೇರಿದವು.

ದೇವಾಲಯಕ್ಕೆ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರು ಭೇಟಿ ನೀಡಿ ಜಗತ್ತಿನಲ್ಲಿ ಮನುಷ್ಯ ಸೃಷ್ಟಿಯ ಮೊದಲ ಹಂತವು ಮನುಷ್ಯರಿಂದ ಸೃಷ್ಟಿಗೊಂಡ ಮೊದಲ ದೇವರು ಹೆಣ್ಣು. ಹೆಣ್ಣು ದೇವರಾಗಲು ಸೃಷ್ಟಿಯ ಸೃಷ್ಟಿಕರ್ತ ಹೆಣ್ಣು, ಅದು ಇಡೀ ಜಗತ್ತು ನಂಬಿ ಒಪ್ಪುವಂತಹ ತತ್ವಜ್ಞಾನ ಸಿದ್ದಾಂತವಾಗಿದ್ದು. ಹಳೆಯ ಕಾಲದಲ್ಲೂ ಸ್ತ್ರೀ ವಿಗ್ರಹಗಳು ದೊರೆಯುತ್ತಿದ್ದು ಕಂಚಿನ ಯುಗದಲ್ಲೂ ಮಾತೃದೇವಾರದಲ್ಲಿ ಜಗತ್ತಿನಲ್ಲೇ ಇತ್ತು.
ತಾಲೂಕಿನ ಸುತ್ತಮುತ್ತ ಸುಕ್ಷೇತ್ರ ದೇವಿಯ ಪವಾಡದಿಂದ ನಮ್ಮೆಲ್ಲಾ ಕಷ್ಟ ದೂರವಾಗಿ ಬೇಡಿದ ವರವನ್ನು ನೀಡುವ ತಾಯಿಯಾಗಿದ್ದಾರೆ. ಏಳು ಮಂದಮ್ಮ ತಾಯಿಯ ಕೃಪಾಕಟಾಕ್ಷದಿಂದ ಬಂದ ಭಕ್ತರ ಕಷ್ಟ ಕಾರ್ಪಣ್ಯಗಳು ದೂರವಾಗಿ ಮಹಿಳೆಯರ ಕಷ್ಟಗಳು ನಿವಾರಣೆಯಾಗಿ ಕೃಪೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿ ಹರಕೆ ಹೊತ್ತರೆ ಮನೋರಥಗಳು ಈಡೇರುತ್ತವೆ ಎಂಬ ನಂಬಿಕೆ ಜನಮಾನಸದಲ್ಲಿ ಬೇರೂರಿದ್ದು ದೇವಾಲಯದ ಅಕ್ಕ ಪಕ್ಕ ಹರಕೆ ಹೊತ್ತ ಭಕ್ತಾಧಿಗಳು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಭಕ್ತಾಧಿಗಳಿಗೆ ನೀರು ಮತ್ತು ಅನ್ನದಾನದ ವ್ಯವಸ್ಥೆ ಮಾಡಿ ಎಂದರು.
ಸಂಸ್ಕೃತಿಯಲ್ಲಿ ಏಳು ವಿಗ್ರಹಗಳಿರುವ ಒಂದು ಸರ್ಪ ಮುದ್ರಿಕೆಯನ್ನು ಸಪ್ತ ಮಾತೃ ಮಾತೃಕೆಯರ ಕಲ್ಪನೆ ಈ ಏಳು ಮಂದಮ್ಮ ತಾಯಿ. ಈ ಗುಡಿ ಸಣ್ಣ ಗುಡಿಯಾಗಿರಬಹುದು ಆದರೆ ಆಕೆಯ ಪವಾಡ ಜಗತ್ತಿಗೆ ಏಳು ಮಕ್ಕಳ ತಾಯಿ ಆರಾಧಿಸಿದರೆ ಹೇಳು ರೋಗಗಳು ವಾಸಿಯಾಗುತ್ತದೆ ಎಂಬುದು ಆಗಿನ ಕಾಲದ ಅನುಭವ. ಜಗತ್ತಿನ ದೇವರಲ್ಲವೂ ಸ್ತ್ರೀ ದೇವತೆಗಳ ಅಲ್ಲದೆ ಬೇರೆ ಯಾವುದು ಸತ್ಯವಲ್ಲ, ಹೇಳು ಮಂದಮ್ಮ ತಾಯಿ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಬೇಗನೆ ಒಲಿದುಅವರ ಕಷ್ಟಗಳನ್ನು ನೀಗಿಸಿ ಭಕ್ತರಿಗೆ ಸುಖ ಸಮೃದ್ಧಿಯನ್ನು ಕರುಣಿಸುತ್ತಾಳೆ ಎಂದು ಸ್ವಾಮೀಜಿಯವರು ಹೇಳಿದರು.

ಗ್ರಾಮಸ್ಥರೆಲ್ಲರೂ ಒಟ್ಟಾಗಿ ಸೇರಿ ವಿವಿಧ ಹೋಮ ಹವನ ಮತ್ತು ವಿಶೇಷ ದೀಪ ಅಲಂಕಾರ ಹಾಗೂ ಮೆರವಣಿಗೆಯನ್ನು ಮಾಡಿ ತಾಯಿ ಕೃಪೆಗೆ ಪಾತ್ರರಾಗಿ ತಮ್ಮ ಕಷ್ಟ ಕಾರ್ಪಣ್ಯಗಳನ್ನು ನಿವಾರಣೆ ಮಾಡಿಕೊಂಡು ಈ ತಾಯಿ ಸನ್ನಿಧಿಯ ಮಹಾತ್ಮೆಯ ಎಲ್ಲರಿಗೂ ರಕ್ಷೆಯಾಗಿದೆ ಎಂದ ಭಕ್ತ ಸಮೂಹ.

ವರದಿ .ಪ್ರಸನ್ನ ಕುಮಾರ್ .ಎಸ್ ಕೊರಟಗೆರೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!