
ಬೆಂಗಳೂರು : ಆನಂದ ರಾವ್ ವೃತ್ತದ ಬಳಿ ಇರುವ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಜರುಗಿದ ಕೆ ಎಸ್ ರಾಜಾರಾಮ್ ಅವರ ಛಾಯಾಚಿತ್ರ ಪ್ರದರ್ಶನ, ಸತೀಶ ಯಲ್ಲಾಪುರ ಅವರ ಕಾರ್ಟೂನ್ ಪ್ರದರ್ಶನ, ಅಜಿತ ಕಾರಂತ್ ಹಾಗೂ ಸಂಗಡಿಗರಿಂದ ನಡೆದ ತಾಳಮದ್ದಳೆಗಳು, ಸಿರಿಕಲಾ ಮೇಳದವರ ಸುದರ್ಶನ ವಿಜಯ ಯಕ್ಷಗಾನ ಹಾಗೂ ಉಚ್ಚ ನ್ಯಾಯಾಲಯದ ಪದಾಂಕಿತ ಹಿರಿಯ ನ್ಯಾಯವಾದಿ ವಿಘ್ನೇಶ್ವರ ಶಾಸ್ತ್ರಿ ಅವರಿಂದ ಉದ್ಘಾಟನೆಗೊಂಡ ಹಾಗೂ ಜಿ ಎನ್ ಭಟ್ ಹರಿಗಾರ್ ಅವರ ನೇತೃತ್ವದಲ್ಲಿ ನಡೆದ ಧನಾತ್ಮಕ ಚಿಂತನೆಯ ಕಾರ್ಯಗಾರ, ಖ್ಯಾತ ವಿಮರ್ಶಕ ಎಸ್ ಆರ್ ವಿಜಯಶಂಕರ್ ಹಾಗೂ ಯಕ್ಷಗಾನ ವಿದ್ವಾಂಸ ಡಾ. ಆನಂದ ರಾಮ್ ಉಪಾಧ್ಯಾಯ ಅವರ ನೇತೃತ್ವದಲ್ಲಿ ಜರುಗಿದ ಪಾರ್ತಿಸುಬ್ಬ ಹಾಗೂ ಮಂಜುನಾಥ ಭಾಗ್ವತ್ ಹೊಸ್ತೋಟ ಅವರ ಪ್ರಸಂಗ ಸಾಹಿತ್ಯದ ಅವಲೋಕನ- ವಿಮರ್ಶೆ ,ಪುಸ್ತಕ ಪ್ರದರ್ಶನ, ಮಾರಾಟ ಹಾಗೂ ಡಾ. ಚಿಂತಾಮಣಿ ಕೊಡ್ಲೆಕೆರೆ ಅವರ ನೇತೃತ್ವದಲ್ಲಿ ನಡೆದ ಕವಿಗೋಷ್ಠಿ ಮುಂತಾದ ಕನ್ನಡ ಹಬ್ಬದ ಕಾರ್ಯಕ್ರಮಗಳು ಮನಸೂರೆಗೊಂಡವು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಬ್ಯಾಡ್ಮಿಂಟನ್ ಆಟಗಾರ್ತಿ ನಿಖಿತಾ ಆಚಾರ್ , ಕಬಡ್ಡಿ ಆಟಗಾರರಾದ ತ್ಯಾಗರಾಜ್, ಬಿ ಎನ್ ಮಹೇಶ್ ಹಾಗೂ ಪುಸ್ತಕ ಮಾರಾಟದಲ್ಲಿ ಭಾಗವಹಿಸಿದ ಎಲ್ಲಾ ಪ್ರಕಾಶಕರನ್ನು ಸನ್ಮಾನಿಸಲಾಯಿತು.
ನಂತರ ನಿವೃತ್ತ ಆರ್ಥಿಕ ಸಲಹೆಗಾರ ಎಂ ಎಸ್ ವೆಂಕಟೇಶ್ ಅವರ ಹರಿಭಕ್ತಿ ಸುಧೆ ಹಾಗೂ ಶಿರಸಿಯ ಲೇಖಕಿ ರೋಹಿಣಿ ಹೆಗಡೆ ಅವರು ಸಂಪಾದಿಸಿದ ತೇಲಿ ಬಂದ ತಾರೆಯರು e- ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಸದಸ್ಯರಾದ ಎಂ ಎಸ್ ವೆಂಕಟೇಶ್, ಮುರಳೀಧರ ನಾಯಕ, ರಾಮಚಂದ್ರರೆಡ್ಡಿ, ಮೈಕೇಲ್
ವಾಷಿಂಗ್ಟನ್, ಸಫೀರ್ ಅಹ್ಮದ್, ಪ್ರಫುಲ್ಲಾ ಹೆಗಡೆ, ಉಷಾ , ಭಾಗ್ಯ ಎ, ಕೆ ಸಿದ್ದರಾಜು, ಬಿ ಪಿ ಕುಮಾರ ಸ್ವಾಮಿ, ಗೌರಿ ಪಂಡಿತ್, ಗೀತಾ ಸಭಾಹಿತ, ಸರಸ್ವತಿ ಶಾಸ್ತ್ರಿ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕವಿಗೋಷ್ಠಿಯಲ್ಲಿ ಎಸ್ ಆರ್ ರವಿ, ಧೀರೇಂದ್ರ ನಾಗರಹಳ್ಳಿ, ರೋಹಿಣಿ ಹೆಗಡೆ, ಮಹೇಶ ಹಳ್ಳಿಗದ್ದೆ, ಪೂರ್ಣಿಮಾ ಗೋಪಾಲ್, ಬನವಾಸಿ ವೆಂಕಟೇಶ್ ದೀಕ್ಷಿತ್ , ಕಾಶಿನಾಥ ಹಂದ್ರಾಳ , ಪತ್ತಂಗಿ ಮುರಳಿ, ವಿನುತಾ ಗಾಯತ್ರಿ ಅವರ ಉಪಸ್ಥಿತಿ ಕನ್ನಡ ಹಬ್ಬಕ್ಕೆ ಮೆರಗು ತಂದಿತು.
ವರದಿ: ಕೊಡಕ್ಕಲ್ ಶಿವಪ್ರಸಾದ್ ಶಿವಮೊಗ್ಗ




















