ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಂಪ್ಲಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಭವ್ಯ ಮೆರವಣಿಗೆ ನಾಡು-ನುಡಿಯ ಸಂಭ್ರಮ

ಕಂಪ್ಲಿ: ಕನ್ನಡ ಸಾಹಿತ್ಯ ಪರಿಷತ್ (ಕಸಾಪ) ವತಿಯಿಂದ ಆಯೋಜಿಸಲಾಗಿದ್ದ ಕಂಪ್ಲಿ ತಾಲೂಕು ದ್ವಿತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಯಿ ಭುವನೇಶ್ವರಿ ದೇವಿ ಹಾಗೂ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆಯು ಅತ್ಯಂತ ಸಡಗರ, ಸಂಭ್ರಮದಿಂದ ನೆರವೇರಿತು

ಸಾರೋಟಿನಲ್ಲಿ ಗಣ್ಯರ ಮೆರವಣಿಗೆ

ಅತ್ಯಾಕರ್ಷಕವಾಗಿ ಅಲಂಕರಿಸಲಾಗಿದ್ದ ಸಾರೋಟಿನಲ್ಲಿ (ರಥದಲ್ಲಿ) ಸಮ್ಮೇಳನದ ಸರ್ವಾಧ್ಯಕ್ಷರಾದ ದೊಡ್ಡಬಂಗಿ ಮಂಜುನಾಥ ಅವರೊಂದಿಗೆ ಕಸಾಪ ಜಿಲ್ಲಾಧ್ಯಕರಾದ ಡಾ. ನಿಷ್ಟಿ ರುದ್ರಪ್ಪ ಹಾಗೂ ತಾಲೂಕು ಅಧ್ಯಕ್ಷರಾದ ಷಣ್ಮುಖಪ್ಪ ಚಿತ್ರಗಾರ ಅವರು ಆಸೀನರಾಗಿ ಮೆರವಣಿಗೆಯಲ್ಲಿ ಸಾಗಿದರು. ದಾರಿಯುದ್ದಕ್ಕೂ ನೆರೆದಿದ್ದ ಕನ್ನಡಾಭಿಮಾನಿಗಳು ಹರ್ಷೋದ್ಗಾರಗಳೊಂದಿಗೆ ಗಣ್ಯರನ್ನು ಸ್ವಾಗತಿಸಿದರು.

ಮೆರವಣಿಗೆಯ ಕಾರ್ಯಕ್ರಮವನ್ನು ವೀರಶೈವ ಮುಖಂಡರಾದ ಅರಿವು ಬಸನಗೌಡ ಅವರು ವಿಧ್ಯುಕ್ತವಾಗಿ ಉದ್ಘಾಟಿಸಿ ಚಾಲನೆ ನೀಡಿದರು. ಈ ಗಂಗಾಮತ ಸಮಾಜದ ಮುಖಂಡರಾದ ಕರೆಕಲ್ ಮನೋಹರ್, ಕರವೇ (ಪ್ರವೀಣ್ ಶೆಟ್ಟಿ ಬಣ)ದ ಜಿಲ್ಲಾ ಉಪಾಧ್ಯಕ್ಷ ಬಿ ರಮೇಶ, ಶಿಕ್ಷಣ ಇಲಾಖೆಯ ಇಸಿಓ ಟಿ.ಎಂ. ಬಸವರಾಜ್, ಕಂಪ್ಲಿ ತಾಲೂಕಿನ ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಸದಸ್ಯರು ಹಾಗೂ ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕನ್ನಡಾಭಿಮಾನ ಮೆರೆದರು.

ನೋಡುಗರ ಕಣ್ಮನ ಸೆಳೆದ ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಲಾತಂಡಗಳು

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡಚೆಲ್ಲೂರು ಗ್ರಾಮದ ಶ್ರೀ ಬೈಲಾಂಜನೇಯ ಸ್ವಾಮಿ ಜಾನಪದ ಕಲಾತಂಡ, ಡೊಳ್ಳು ಕುಣಿತ, ಹಕ್ಕಿಪಿಕ್ಕಿ ಕಲಾತಂಡ, ತಾಷಾ-ರಾಮ್ ಡೋಲ್, ಬ್ಯಾಂಡ್ ವಾದನ ತಂಡ, ಮಂಗಳಮುಖಿಯರ ಆಕರ್ಷಕ ನೃತ್ಯ, ಸ್ಕೌಟ್ ಮತ್ತು ಗೈಡ್ಸ್ ಮಕ್ಕಳ ತಂಡ,
ಪಟ್ಟಣದ ಸ್ವಾಮಿ ವಿವೇಕಾನಂದ ಶಾಲೆ, ವಿದ್ಯಾಸಾಗರ ಶಾಲೆ ಹಾಗೂ ಚೇತನ ವಿದ್ಯಾನಿಕೇತನ ಶಾಲೆಯ ಮಕ್ಕಳ ವಿಶೇಷ ವೇಷಭೂಷಣ ಪಟ್ಟಣದ ಖಾಸಗಿ ಹಾಗೂ ಅನಿದಾನಿತ ಎಲ್ಲಾ ಶಾಲಾ ವಿದ್ಯಾರ್ಥಿಗಳ ಮೆರವಣಿಗೆಯ ಸೊಬಗನ್ನು ಹೆಚ್ಚಿಸಿದವು.

ಕೋಟೆಯ ಶ್ರೀ ಪಂಪಾಪತಿ ದೇವಸ್ಥಾನದ ಆವರಣದಿಂದ ಆರಂಭವಾದ ಈ ಭವ್ಯ ಮೆರವಣಿಗೆಯು ಜೋಗಿ ಕಾಲುವೆ, ಹಳೆಯ ಪೊಲೀಸ್ ಠಾಣೆ ಮುಂಭಾಗ, ಮುಖ್ಯ ರಸ್ತೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಸಮಿತಿ ಕಾಲೇಜು, ಪುನೀತ್ ರಾಜ್‌ಕುಮಾರ್ ವೃತ್ತ, ನಾಲ್ಕನೇ ವಾರ್ಡ್ ಶಾಲೆ, ಸಂತೆ ಮಾರ್ಕೆಟ್ ಹಾಗೂ ಸಂಸ್ಕೃತ ಪಾಠಶಾಲೆಯ ಮಾರ್ಗವಾಗಿ ಸಂಚರಿಸಿ, ಅಂತಿಮವಾಗಿ ಸಮ್ಮೇಳನದ ವೀರಶೈವ ಭವನದ ಆವರಣವನ್ನು ತಲುಪಿತು.
ದಾರಿಯುದ್ದಕ್ಕೂ ಕನ್ನಡದ ಬಾವುಟಗಳು ರಾರಾಜಿಸುತ್ತಿದ್ದು, ಇಡೀ ಕಂಪ್ಲಿ ಪಟ್ಟಣವು ಕನ್ನಡಮಯವಾಗಿ ಕಂಗೊಳಿಸಿತು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!