ಕಲಿಯಲು ಆದರಿಸಿ ಬಂದವರಿಗಾಗಿ
ಕಲಿಸಬೇಕು ಹಿಗ್ಗಿಂದ ನಯವಾಗಿ
ಕಲಿಸಿದ್ದು ಚಿಗುರಿ ಮರವಾಗಿ
ನಿಮ್ಹೆಸರನ್ನೇ ಪರಿಮಳಿಸುವುದು ಋಣಕ್ಕಾಗಿ
ಕಲಿಸುವ ಸಮಯ ಸಾರ್ಥಕವಾಗಿ
ಅಕ್ಷರಗಳೇ ಆಸಕ್ತಿಗೆ ಮಳೆಯಾಗಿ
ಮನಸು ತೃಪ್ತಿಯಿಂದ ಹಸಿರಾಗಿ
ಕಲಿಸಿದವರನ್ನೇ ಸ್ಮರಿಸುವುದು ಸಂಭ್ರಮಕ್ಕಾಗಿ
ಪರಿವರ್ತನೆ ಸಾಧ್ಯ ಬೋಧನೆಯಿಂದಾಗಿ
ನಿರ್ಲಕ್ಷಿಸದೆ ಬೋಧಿಸಿ ಬಂದವರಿಗಾಗಿ
ಓದಿಸಿ ಬರೆಸಿದರ ಅವರಿಂದಾಗಿ
ನೀವೇ ಶಾಸನವಾಗುವಿರಿ ಕಲಿಸಿದ್ದಕ್ಕಾಗಿ
ಕಲ್ಲೆಂದು ಕುಳಿತುಕೊಳ್ಳದೆ ಬೇಸರದಿಂದಾಗಿ
ಮುಗ್ಧರನು ತಿದ್ದಬೇಕು ಶ್ರಮದಿಂದಾಗಿ
ಕಲ್ಲುಗಳೆ ಮೂರ್ತಿಯಾಗುವುದು ಶ್ರದ್ಧೆಗಾಗಿ
ಮೂರ್ತಿಯಾದರ ನೀವೇ ದೇವರು ಕಲಿತವರಿಗಾಗಿ
ಆಸಕ್ತಿ ಕುಂದದಂತೆ ಕೌಶಲ್ಯದಿಂದಾಗಿ
ಮನವನು ಹಿಗ್ಗಿಸಿ ಕಲಿಯುವುದಕ್ಕಾಗಿ
ಕಲಿಸಿ ನಿಂತರ ಕಲಿಯುವವರಿಗಾಗಿ
ಗುರುಜನ್ಮ ಸಾರ್ಥಕ ಬೋಧನೆಯಿಂದಾಗಿ
- ಕಲ್ಲಪ್ಪ ಕವಳಕೇರಿ ಮಂಗಳೂರು✍️
(ಕೊಪ್ಪಳ ಜಿಲ್ಲೆ )



















