ಈವರೆಗೆ ಅದೆಷ್ಟೋ
ಬೆಳಕಿನ ಹಬ್ಬಗಳು
ಕಳೆದಿವೆ
ನೂರಾರು ಕನಸುಗಳನ್ನು ಹೊತ್ತು
ಸಾವಿರಾರು ದೀಪಗಳ
ಹಚ್ಚಿದ್ದೇವೆ
ದೀಪಕ್ಕಾಗಿ ಹೊಸೆದ ಬತ್ತಿ
ತನ್ನ ತಾ ಸುಟ್ಟು
ಮಾಯವಾಗಿದೆ
ಬೆಳಕಿಗಾಗಿ ತೈಲವಾಗುವ
ಕಾಯಕದಲ್ಲಿ ಬೀಜವೂ
ಇಲ್ಲವಾಗಿದೆ
ಆದರೆ ಹಚ್ಚಿದ ದೀಪದ
ಇರಾದೆ ಇನ್ನೂ
ಈಡೇರಿಲ್ಲ ….
ಅದೆಷ್ಟೋ ದೀಪಗಳ
ಕೊನೆಗಾಣಿಸಿದ
ಹಬ್ಬ
ಹೊಸದ ಬತ್ತಿಯ ಸುಟ್ಟು
ಬೆಳಕ ನೀಡಿದ
ಹಬ್ಬ
ಉರಿವ ದೀಪದ ದಾಹ ನೀಗಿಸಲು
ತೀರಿದ ಎಣ್ಣೆಯ ಅಂತ್ಯಕ್ಕೆ ಕಾರಣವಾದ
ಹಬ್ಬ
ಆಂತರ್ಯದಲ್ಲಿನ ಅಜ್ಞಾನವ ಮಾತ್ರ
ಹಾಗೆಯೇ ಉಳಿಸಿಬಿಟ್ಟೆದೆ?
ಕಾರಣವೇನು? ಅರಿಯೆ….
ಬೆಳಕಿನ ಹಬ್ಬದಲೂ ಕೊನೆಯಾಗದ
ಆಂತರ್ಯದ ಕತ್ತಲೆ
ಸುಡುತಿದೆ ಬದುಕ….
- ಡಾ. ಲೋಹಿತೇಶ್ವರಿ ಎಸ್ ಪಿ

















