ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮುಕ್ಕುಂಪಿ, ಹೇಮಗುಡ್ಡ, ಲಿಂಗದಹಳ್ಳಿ, ಎಚ್ ಜಿ ರಾಮುಲು ನಗರ ಹಾಗೂ ಚಿಕ್ಕ ಬೆಣಕಲ್ ಗ್ರಾಮಗಳ ವ್ಯಾಪ್ತಿಯಲ್ಲಿ ರಾತ್ರಿ ಸಮಯದಲ್ಲಿ ರೈತರ ಬೋರ್ವೆಲ್ ಗೆ ಅಳವಡಿಸಿರುವ ಕೇಬಲ್ ಗಳ ಕಳ್ಳತನವಾಗುತ್ತಿದ್ದು ಇಲ್ಲಿಯವರೆಗೆ ಸರಿಸುಮಾರು ಸಾವಿರ ಬೋರ್ ವೆಲ್ ಗೂ ಅಧಿಕ ಕೇಬಲ್ ಗಳು ಕಳ್ಳತನವಾಗಿವೆ ಈ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಗಮನ ವಹಿಸಬೇಕಾಗಿದ್ದು. ಈ ಹಿಂದೆ ಒಂದು ಬಾರಿ ಕಳ್ಳತನ ಮಾಡಿದ ಕಳ್ಳರನ್ನು 112 ಗಸ್ತು ಅಧಿಕಾರಿಗಳಿಗೆ ಒಪ್ಪಿಸಲಾಗಿತ್ತು ಇದರ ನಂತರ ಕೇಲ ದಿನಗಳವರೆಗೆ ನಿಂತಿದ್ದ ಕಳ್ಳತನಗಳು ಈಗ ಮತ್ತೆ ಮುಂದುವರೆದಿದ್ದು , ಇದರಿಂದ ಬರಗಾಲದ ಮಧ್ಯೆ ಈ ಕೇಬಲ್ ಕಳ್ಳರ ಹಾವಳಿಯಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ವರದಿ ಹೊಳೆಯಪ್ಪ

















