ಕಂಪ್ಲಿ: ಬ್ರಿಟಿಷರ ಕಾಲದ ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳೀಯ ಶಾಮೀಯಾಚಂದ್ ಸರ್ಕಾರಿ ಪ್ರೌಢಶಾಲೆಯ ಜೀರ್ಣೋದ್ಧಾರಕ್ಕಾಗಿ ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಿಕ್ಷಣ ಸುಧಾರಣಾ ಸಮಿತಿಯ ನಾಮನಿರ್ದೇಶನ ಸದಸ್ಯರಾದ ಹೆಚ್. ಕುಮಾರಸ್ವಾಮಿ ಅವರು ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹರಿಕಾರ ಶಾಸಕ ಜೆ .ಎನ್. ಗಣೇಶ್ ಅವರಿಗೆ ₹50 ಲಕ್ಷ ಅನುದಾನ ಕೋರಿ ವಿಶೇಷ ಮನವಿ ಸಲ್ಲಿಸಿದ್ದಾರೆ.
ಶಿಕ್ಷಣೋದ್ಧಾರಕ್ಕೆ ಕುಮಾರ್ ಅವರ ಅದಮ್ಯ ಶ್ರಮ :
ಕ್ಷೇತ್ರದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಕಂಕಣಬದ್ಧರಾಗಿರುವ ಹೆಚ್. ಕುಮಾರಸ್ವಾಮಿ ಅವರು, ಷಾಮೀಯಾಚಂದ್ ಶಾಲೆಯ ದುಸ್ಥಿತಿಯನ್ನು ಕಂಡು ತೀವ್ರ ಕಳಕಳಿ ವ್ಯಕ್ತಪಡಿಸಿದ್ದಾರೆ. ಸಾವಿರಾರು ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆಸರೆಯಾಗಿರುವ ಈ ಐತಿಹಾಸಿಕ ಶಾಲೆಯನ್ನು ಉಳಿಸಿ, ಬೆಳೆಸಲೇಬೇಕೆಂಬ ಅವರ ದೃಢ ಸಂಕಲ್ಪ ಮತ್ತು ದೂರದರ್ಶಿತ್ವಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಮೂಲಸೌಕರ್ಯ ಕಲ್ಪಿಸಿಕೊಡಲು ಅವರು ಶಾಸಕರ ಕದ ತಟ್ಟುವ ಮೂಲಕ ತಮ್ಮ ಶಿಕ್ಷಣ ಪ್ರೇಮವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
” ಈ ಶಾಲೆಯು ಕಂಪ್ಲಿ ಪಟ್ಟಣದ ಶೈಕ್ಷಣಿಕ ಹೆಮ್ಮೆಯಾಗಿದೆ. ಪ್ರಸ್ತುತ ಕಟ್ಟಡದ ದುರಸ್ತಿ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಮಕ್ಕಳು ಅನುಭವಿಸುತ್ತಿರುವ ತೊಂದರೆಗೆ ತಕ್ಷಣವೇ ಸ್ಪಂದಿಸಬೇಕಾಗಿದೆ. ಈ ಐತಿಹಾಸಿಕ ಶಾಲೆಯ ಹಳೆಯ ವೈಭವವನ್ನು ಮರಳಿ ತರಲು ಶಾಸಕರು ₹50 ಲಕ್ಷ ವಿಶೇಷ ಅನುದಾನ ಮಂಜೂರು ಮಾಡಲಿದ್ದಾರೆ ಎಂಬ ಸಂಪೂರ್ಣ ವಿಶ್ವಾಸ ನಮಗಿದೆ ,” ಎಂದು ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಹೆಚ್. ಕುಮಾರಸ್ವಾಮಿ ಅವರು ಅತ್ಯಂತ ಆಶಾದಾಯಕವಾಗಿ ನುಡಿದಿದ್ದಾರೆ.
ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಕುಮಾರ್ ಅವರ ಈ ಮಹತ್ತರ ಕಾರ್ಯಕ್ಕೆ ಹಳೆ ವಿದ್ಯಾರ್ಥಿ ಸಂಘ ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್



















