ಅನ್ನದಾತನ ಸ್ವರ್ಗದ ಅಂಗಳದಲ್ಲಿ
ಹಸಿರಿದ್ದರ ಸಿರಿ ಜಗದಲ್ಲಿ
ಮಾರಿಯಾಗಿ ಬರ ಕಾಡಲಿಲ್ಲಿ
ಸ್ವರ್ಗವನ್ನೇ ಒಣಗಿಸಿದೆ ಕ್ರೌರ್ಯದಲ್ಲಿ
ಮಳೆರಾಯ ಮುನಿಸಿ ಬಾನಿನಲ್ಲಿ
ತಿರುಗಿ ನೋಡದೆ ಭೂಮಿಯಲ್ಲಿ
ಒಲ್ಲದ ಸಾಗರದ ಅಂಗಳದಲ್ಲಿ
ಹೋಗಿ ಇಳಿದುಬಿಟ್ಟ ಸಿಡುಕಿನಲ್ಲಿ
ಬೆಳೆದ ಸಸಿಗಳು ಬಿಸಿಲಿನಲ್ಲಿ
ದಾಹ ತಾಳದೆ ತಳಮಳದಲ್ಲಿ
ಕಮರಿ ಕುಗ್ಗಿ ನಿಶಕ್ತಿಯಲ್ಲಿ
ಒಣಗಿ ನಿಂತವು ಬಯಲಿನಲ್ಲಿ
ಬಯಸಿ ಬಿತ್ತಿದ ಒಡಲಿನಲ್ಲಿ
ಆತಂಕ ಕಂಪಿಸಿ ಭಯದಲ್ಲಿ
ನೀರು ಜಿನುಗಿ ಕಣ್ಣಿನಲ್ಲಿ
ಹಣೆಬರಹ ತಾಳಬೇಕೆಂದರು ದುಃಖದಲ್ಲಿ
ಬೆಳೆದಾಗ ನೀಡಿದರು ಉದಾರತೆಯಲ್ಲಿ
ಬರದಾಗ ಕೊಡುವವರಿಲ್ಲ ಅದೇ ಬೆಲೆಗಿಲ್ಲಿ
ಹಣವೊಂದನ್ನೇ ಕಾಣುವವರು ದೃಷ್ಟಿಯಲ್ಲಿ
ಮೋಸವೇ ವ್ಯಾಪಾರವೆನ್ನುವರು ಬಜಾರದಲ್ಲಿ
- ಕಲ್ಲಪ್ಪ ಕವಳಕೇರಿ ಮಂಗಳೂರು✍️
( ಕೊಪ್ಪಳ ಜಿಲ್ಲೆ )




















