ಕಾಳಗಿ : ಶಿಕ್ಷಕರ ಬಹುದಿನಗಳ ಬೇಡಿಕೆಯಾದ ಬಡ್ತಿ ನೀಡಿಸುವಲ್ಲಿ ಮತ್ತು ಹಳೆಯ ಶಿಕ್ಷಕರಿಗೆ ಟಿಇಟಿ ರದ್ದುಪಡಿಸಿ ಕಾನೂನು ಜಾರಿಗೆ ತರುವಲ್ಲಿ ಸಂಘಟನೆ ನಿರಂತರ ಪರಿಶ್ರಮ ಪಡುತ್ತಿದೆ. ಸರ್ಕಾರ ನಮ್ಮೆಲ್ಲ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಗಲಿ ಒತ್ತಾಯಿಸಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಇಂದು ಸರ್ಕಾರ ಶಿಕ್ಷಕರಿಗೆ ನೆಮ್ಮದಿಯಿಂದ ಶಾಲೆಯಲ್ಲಿ ಪಾಠ ಮಾಡಲು ಬಿಡುತ್ತಿಲ್ಲ. ಪಾಠ ಮಾಡುವುದಕ್ಕಿಂತ ಹೆಚ್ಚು ಸಮಯವನ್ನು ಗಣತಿ, ಚುನಾವಣಾ ಕೆಲಸ ಸಮೀಕ್ಷೆ ಸೇರಿದಂತೆ ಅನ್ಯ ಕೆಲಸಗಳಲ್ಲೇ ಕಳೆಯುವಂತಾಗಿದೆ. ಶಿಕ್ಷಕರನ್ನು ಈ ರೀತಿ ಬಳಸಿಕೊಳ್ಳುವುದರಿಂದ ಮಕ್ಕಳ ಶಿಕ್ಷಣಕ್ಕೆ ಹಿನ್ನಡೆಯಾಗುತ್ತಿದೆ. ಆದ್ದರಿಂದ ನಮ್ಮನ್ನು ನಮ್ಮ ಕೆಲಸ ಮಾಡಲು ನೆಮ್ಮದಿಯಿಂದ ಬಿಡಬೇಕು’ ಎಂದರು.
ಪಟ್ಟಣದ ಶ್ರೀ ನೀಲಕಂಠ ಕಾಳೆಶ್ವರ್ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಕಾಳಗಿ ವತಿಯಿಂದ 2026-31ನೇ ಅವಧಿಯ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಪದಗ್ರಹಣ ಸರ್ವೋತ್ತಮ ಶಿಕ್ಷಕ ಪ್ರಶಸ್ತಿ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಹಾಗೂ ಬಡ್ತಿ ಹೊಂದಿದ ಮುಖ್ಯ ಗುರುಗಳಿಗೆ ಸನ್ಮಾನ ಸಮಾರಂಭ ಉದ್ಘಾಟಸಿ ಮಾತನಾಡಿದರು.
ಶಿಕ್ಷಕರ ಸೇವೆ ಸಮಾಜಕ್ಕೆ ಅಮೂಲ್ಯವಾದುದು, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು ಎಂದು ಹೇಳಿದರು.
ಕಾರ್ಯಕ್ರಮ ಕುರಿತು ಡಾ. ಅವಿನಾಶ್ ಜಾಧವ ಶಾಸಕರು ಚಿಂಚೋಳಿ ಹಾಗೂ ಭರತನೂರಿನ ಚಿಕ್ಕಗುರುನಂ ಜೇಶ್ವರ ಸ್ವಾಮೀಜಿ, ಚಿತ್ತಾಪುರ ಬಿಇಒ ಶಶಿಧರ ಬಿರಾದಾರ, ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಂತೋಷ ಕಲ್ಯೂಡಕರ್ ಮಾತನಾಡಿದರು.
ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ಗಂಗೂ, ಪ್ರಧಾನ ಕಾರ್ಯದರ್ಶಿ ,ಮರೆಪ್ಪ ಹೊಸಮನಿ, ಕ್ಷೇತ್ರ ಸಮನ್ವಯಾಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ಶಂಕರ ಡಾಂಗೆ, ಶಿವಶರಣಪ್ಪ ಮಂಠಾಳ, ಆದಪ ಸಜ್ಜನ, ದೇವಿಂದ್ರಪ್ಪ ಹೋಲ್ಕರ್, ಶಿವಕುಮಾರ ಶಾಸ್ತ್ರಿ, ಚಂದ್ರಕಾಂತ ತಳವಾರ, ಶಿವಾನಂದ ನಾಲವಾರ, ಬಸವರಾಜ, ರಾಧಾಕೃಷ್ಣ, ಮುಚ್ಚಟ್ಟಿ, ವಿಜಯಕುಮಾರ್, ಮಾಣಿಕರಾವ ಪಾಟೀಲ್, ಶಿವಕುಮಾರ್ ಶಾಸ್ತ್ರೀ,ಚಂದ್ರಕಾಂತ್ ತಳವಾರ,ಚಂದ್ರಕಾಂತ್ ಕಾಳೆರಿ,ದೇವಿಂದ್ರ, ಶುಭಾಷ ಬೋಧನ, ಹಣಮಂತ, ವಿಜಯಲಕ್ಷ್ಮಿ, ವಿಜಯಕುಮಾರ್ ಗಿರಿ,ಮಕ್ಸದ ಅಲಿ ಅಶೋಕ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ ಚಂದ್ರಶೇಖರ್ ಆರ್. ಪಾಟೀಲ್




















