ನಮ್ಮ ಹೊಲ ನಮಗಾಗಿ
ಮೀಸಲಿರಬೇಕು ಭವಿಷ್ಯಕ್ಕಾಗಿ
ಕೂಲಿ ಮಾಡಿದರೂ ಹೊಟ್ಟೆಗಾಗಿ
ಹೊಲ ಮಾರದಂತಿರಬೇಕು ಸ್ಥಿರವಾಗಿ
ದನಕರುಗಳ ಬಾಯಿಗೆ ಮೇವಾಗಿ
ಹಸಿದವರ ಹೊಟ್ಟೆಗೆ ಅನ್ನವಾಗಿ
ಹೇಳಿಕೊಳ್ಳಲು ಹೆಮ್ಮೆಯ ಆಸ್ತಿಯಾಗಿ
ಹೊಲ ಇರಬೇಕು ಬದುಕಿಗಾಗಿ
ಕೋಲ ಮಾರಿದರ ಮನೆ ಕಟ್ಟುವುದಕ್ಕಾಗಿ
ಮನೆಯೇ ಮರುಗುವುದು ಮೂರ್ಖತನಕ್ಕಾಗಿ
ಅನ್ನ ಹಾಕಿ ಸಲುಹಿದ ಭೂತಾಯಿಗಾಗಿ
ಅರಿವಿಂದ ಬಾಳಬೇಕು ನಮ್ಮ ನೆಲಕ್ಕಾಗಿ
ಫಲಪುಷ್ಪ ಹಸಿರು ಉಸಿರಿಗಾಗಿ
ಸಕ್ಕರೆ ಬೆಲ್ಲ ಜೇನೂ ಹೊಲದಿಂದಾಗಿ
ಅಕ್ಷಯಪಾತ್ರೆ ಹೊಲ ಉಣುವುದಕ್ಕಾಗಿ
ಹೊಲದಂತ ಸಂಪತ್ತಿಲ್ಲ ಐಸಿರಿಗಾಗಿ
ಹೊಲ ಮಾರಿ ಕುಂತವರಿಲ್ಲ ಆರಾಮಾಗಿ
ಕೆಲಸವಿಲ್ಲದೆ ಕಳೆದರು ಕೂಲಿಗಾಗಿ
ಚೂರಿದ್ದರೂ ಹೊಲ ಹಸಿರಾಗಿ
ಹಸಿವಿಲ್ಲದೆ ಬಾಳ ಬಲ್ಲೆವು ಸ್ವಾವಲಂಬಿಯಾಗಿ
- ಕಲ್ಲಪ್ಪ ಕವಳಕೇರಿ ಮಂಗಳೂರು✍
( ಕೊಪ್ಪಳ ಜಿಲ್ಲೆ )


















