ಕೊಳ್ಳೇಗಾಲ : ತಾಲ್ಲೂಕಿನ ಮುಳ್ಳೂರು ಹಾಗೂ ಹರಳೆ ಗ್ರಾಮಗಳಲ್ಲಿ ಸುಮಾರು 1 ಕೋಟಿ 88 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ. ಎ. ಆರ್. ಕೃಷ್ಣಮೂರ್ತಿಯವರಿಂದ ಭೂಮಿ ಪೂಜೆ ಮತ್ತು ತಾಲ್ಲೂಕಿನ ಮುಳ್ಳೂರು ಗ್ರಾಮದ ಚೆಕ್ ಪೋಸ್ಟ್ ಕೆರೆ ರಸ್ತೆ 68 ಲಕ್ಷ ಅನುದಾನದಲ್ಲಿ ಡಾಂಬರೀಕರಣ, ಉಪ್ಪಾರ ಬೀದಿಯಲ್ಲಿ 20 ಲಕ್ಷ, ಅನುದಾನದಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣ, ಲಿಂಗಾಯತರ ಬೀದಿಯಲ್ಲಿ 50 ಲಕ್ಷ ಅನುದಾನದಲ್ಲಿ ಸಿಸಿ ರಸ್ತೆ ಚರಂಡಿ ಕಾಮಗಾರಿ ಹಾಗೂ ಹರಳೆ ಗ್ರಾಮದಿಂದ ಬೆಂಗಳೂರು ಬೈಪಾಸ್ ರಸ್ತೆವರೆಗೆ 50 ಲಕ್ಷ ರೂ. ಅನುದಾನದಲ್ಲಿ ಡಾಂಬರು ರಸ್ತೆ ಕಾಮಗಾರಿಗಳಿಗೆ ಶಾಸಕರು ಭೂಮಿ ಪೂಜೆಯನ್ನು ನೆರವೇರಿಸಿದರು.
ಕಾಮಗಾರಿಗಳ ಭೂಮಿ ಪೂಜೆ ನೆರವೇರಿಸಿ ಶಾಸಕರು ಮಾತನಾಡಿ ಮುಳ್ಳೂರು ಗ್ರಾಮದಲ್ಲಿ ಈ ಕಾಮಗಾರಿಗಳಿಗೆ ಎರಡು ತಿಂಗಳ ಹಿಂದೆಯೆ ಭೂಮಿ ಪೂಜೆ ನಡೆಯಬೇಕಾಗಿತ್ತು, ಆದರೆ ಬೌದ್ಧ ಮಹಾಸಮ್ಮೇಳ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರಿಂದ ತಡವಾಗಿ ಭೂಮಿ ಪೂಜೆಯನ್ನು ನಡೆಸಲಾಗಿದೆ,
ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಮೊದಲ ಅನುದಾನ ಮೊದಲ ಕಾಮಗಾರಿಗೆ ಸ್ಮಶಾನ ನಿರ್ಮಾಣಕ್ಕೆ ಮುಳ್ಳೂರಿಗೆ ಕೊಟ್ಟಿದ್ದೇನೆ, ಅದೇ ರೀತಿ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದ 25 ಕೋಟಿ ಅನುದಾನದಲ್ಲಿ ಕ್ಷೇತ್ರ ಎಲ್ಲಾ ವರ್ಗದ ಎಲ್ಲ ಧರ್ಮದ ಎಲ್ಲ ಸಮುದಾಯದವರ ಭವನಗಳ ನಿರ್ಮಾಣಕ್ಕೆ ಹಾಗೂ ಭವನಗಳ ಮುಂದುವರಿದ ಕಾಮಗಾರಿಗಳಿಗೆ ಅನುದಾನವನ್ನು ಹಾಕಿ ಕೊಟ್ಟಿದ್ದೇನೆ, ಎಲ್ಲಾ ಸಮುದಾಯದವರಿಗೂ ಸಾಮಾಜಿಕ ನ್ಯಾಯವನ್ನು ಒದಗಿಸುವ ಸಲುವಾಗಿ ಎಲ್ಲಾ ಸಮುದಾಯದ ಬೀದಿಗಳ ರಸ್ತೆ ಚರಂಡಿ ನಿರ್ಮಾಣಗಳಿಗೆ ಅನುದಾನವನ್ನು ಕೊಟ್ಟಿದ್ದೇನೆ ಅದರಂತೆ ಈ ದಿನ ಮುಳ್ಳೂರು ಗ್ರಾಮದ ಚೆಕ್ ಪೋಸ್ಟ್ ಕೆರೆಯ ರಸ್ತೆ ಅಭಿವೃದ್ಧಿಗೆ 68 ಲಕ್ಷ, ಉಪ್ಪಾರ ಬೀದಿಯ ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ 20 ಲಕ್ಷ, ಲಿಂಗಾಯತ ಬೀದಿಯಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ 50 ಲಕ್ಷ, ಹರಳೆ ಗ್ರಾಮದಲ್ಲಿ ಡಾಂಬರು ರಸ್ತೆ ನಿರ್ಮಾಣಕ್ಕೆ 50 ಅನುದಾನವನ್ನ ಹಾಕಿ ಈ ದಿನ ಭೂಮಿ ಪೂಜೆಯನ್ನು ನಡೆಸಲಾಗಿದೆ, ಕಾಂಗ್ರೆಸ್ ಸರ್ಕಾರ ಸಂವಿಧಾನಾತ್ಮಕವಾದ ಸಾಮಾಜಿಕ ನ್ಯಾಯದ ಪರವಾದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದು ಗ್ಯಾರಂಟಿ ಯೋಜನೆಗಳ ಜೊತೆಗೆ ರಾಜ್ಯದಲ್ಲಿ ಅಭಿವೃದ್ಧಿಗೆ ಅನುದಾನಗಳನ್ನು ಬಿಡುಗಡೆ ಮಾಡಿ ಅಭಿವೃದ್ಧಿಗೆ ಸ್ಪಂದಿಸುತ್ತಿದೆ, ಆದ್ದರಿಂದ ನಮ್ಮ ಕೊಳ್ಳೇಗಾಲ ಕ್ಷೇತ್ರಕ್ಕು ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡಿದ್ದು ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ಚೇತನ್ ದೊರೆರಾಜ್, ಮುಳ್ಳೂರು ಮಂಜುನಾಥ್, ಲ್ಯಾಂಡ್ ಆರ್ಮಿ ಅಧಿಕಾರಿ ಚಿಕ್ಕಲಿಂಗಯ್ಯ, ಪ್ರಭಾರ ಇಒ ಕುಮಾರ್ ಹಾಗೂ ಇನ್ನಿತರರು ಇದ್ದರು.
ವರದಿ – ಕೊಡಕ್ಕಲ್ ಶಿವಪ್ರಸಾದ್ , ಶಿವಮೊಗ್ಗ ಮೈಸೂರು.




















