ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕಾಯಕದಲ್ಲಿ ನಿಷ್ಠೆ ಮತ್ತು ಬದುಕಿನಲ್ಲಿ ಸದಾಚಾರವಿದ್ದಾಗ ಮಾತ್ರ ಆತ್ಮಶುದ್ಧಿ ಸಾಧ್ಯ : ಶಿಕ್ಷಕ ಎ. ದೊಡ್ಡಬಸವ

ಕಂಪ್ಲಿ: “ಪರರ ಹಿತವನ್ನು ಮರೆತು ಕೇವಲ ಹೊಟ್ಟೆಪಾಡಿಗಾಗಿ ಅಥವಾ ಮೋಹಕ್ಕಾಗಿ ಕಾಯಕ ಮಾಡುವುದು ಸರಿಯಲ್ಲ. ಕಾಯಕದಲ್ಲಿ ನಿಷ್ಠೆ ಮತ್ತು ಬದುಕಿನಲ್ಲಿ ಸದಾಚಾರವಿದ್ದಾಗ ಮಾತ್ರ ಆತ್ಮಶುದ್ಧಿ ಸಾಧ್ಯ” ಎಂದು ಜವುಕು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಎ. ದೊಡ್ಡಬಸವ ಹೇಳಿದರು.
ಇಲ್ಲಿನ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಮಡಿವಾಳ ಮಾಚಿದೇವ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 195ನೇ ‘ಮಹಾಮನೆ’ ಕಾರ್ಯಕ್ರಮದಲ್ಲಿ ‘ಮಡಿವಾಳ ಮಾಚಿದೇವ ವಚನ ಮತ್ತು ಮೌಲ್ಯಗಳು’ ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.
“ವಚನ ಸಾಹಿತ್ಯದಲ್ಲಿ ಸಾಮಾಜಿಕ ಕಳಕಳಿ ಅಡಗಿದೆ. ಪರರಿಗೆ ಒಳ್ಳೆಯದನ್ನು ಬಯಸುವುದೇ ನಿಜವಾದ ಶಿವಜ್ಞಾನ. ಇಂದಿನ ದಿನಗಳಲ್ಲಿ ಸಣ್ಣಪುಟ್ಟ ತಪ್ಪು ತಿಳಿವಳಿಕೆಗಳಿಂದ ಸುಂದರ ಸಂಬಂಧಗಳು ದೂರವಾಗುತ್ತಿರುವುದು ವಿಷಾದನೀಯ” ಎಂದು ಕಳವಳ ವ್ಯಕ್ತಪಡಿಸಿದರು.

ಶರಣರು ಜಾತಿಗೆ ಸೀಮಿತವಲ್ಲ :
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಟಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಚಂದ್ರಯ್ಯ ಸೊಪ್ಪಿಮಠ ಮಾತನಾಡಿ, “ಶರಣರನ್ನು ಯಾವುದೇ ಒಂದು ನಿರ್ದಿಷ್ಟ ಜಾತಿ ಅಥವಾ ಕಾಯಕಕ್ಕೆ ಸೀಮಿತಗೊಳಿಸಬಾರದು. ಇಂದಿನ ಯುವಕರು ಸಿನಿಮಾ ನಟರ ಅಭಿಮಾನಿಗಳಾಗುವ ಬದಲು, ಶರಣರ ತತ್ವ-ಆದರ್ಶಗಳ ಅಭಿಮಾನಿಗಳಾದರೆ ಜೀವನ ಶ್ರೇಷ್ಠ ಮಟ್ಟಕ್ಕೇರುತ್ತದೆ” ಎಂದರು.

ಸಾಧಕರಿಗೆ ಸನ್ಮಾನ :
ಸಮಾಜ ಸೇವೆಯನ್ನು ಗುರುತಿಸಿ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ, ನಿವೃತ್ತ ಶಿಕ್ಷಕ ಕೆ. ಚಂದ್ರಶೇಖರ್ ಹಾಗೂ ಉಪನ್ಯಾಸ ನೀಡಿದ ಶಿಕ್ಷಕ ಎ. ದೊಡ್ಡಬಸವ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಿ, ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಡಿವಾಳ ಸಮಾಜದ ತಾಲೂಕು ಅಧ್ಯಕ್ಷ ಮಡಿವಾಳ ಹುಲುಗಪ್ಪ, ನ್ಯಾಯವಾದಿ ಎಚ್. ನಾಗರಾಜ, ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಡಾ. ಬಿ. ಸುನಿಲ್, ಪೀರಾವಲಿ ಹಂಚಿನಾಳ, ಬಿ.ಎಂ. ರುದ್ರಯ್ಯ, ಎಸ್. ಶಾಮಸುಂದರರಾವ್, ಸುರೇಶ ಮರಿಶೆಟ್ರು, ಇಂದ್ರಿಪಿ ಮಲ್ಲಿಕಾರ್ಜುನ, ಎಸ್. ರಾಮು, ಅಶೋಕ ಕುಕನೂರು, ಎಲ್‌ಐಸಿ ಈರಣ್ಣ ಸೇರಿದಂತೆ ಮಡಿವಾಳ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!