ಅನ್ಯರು ತೋರಿದ ಹಾದಿಯಲ್ಲಿ
ನಡೆವಾಗ ಎಚ್ಚರಿರಬೇಕು ಅರಿವಿನಲ್ಲಿ
ಅಭಿಮಾನ ಬಿಟ್ಟರ ಅಜ್ಞಾನದಲ್ಲಿ
ಅಪಾಯ ಖಂಡಿತ ತವರಿಗಿಲ್ಲಿ
ತವರು ಹಸಿರಾಗಿದ್ದರ ಸಮೃದ್ಧಿಯಲ್ಲಿ
ನಾವೇ ಉಣಬಲ್ಲೆವು ಆನಂದದಲ್ಲಿ
ನಗುನಗುತ ನಲಿದು ಗೂಡಿನಲ್ಲಿ
ನೆಮ್ಮದಿಯಾಗಿ ಬಾಳಬಲ್ಲೆವು ನೆರಳಿನಲ್ಲಿ
ನಿಮ್ಮಂತೆ ಮಾತನಾಡಿ ಪರರಿಲ್ಲಿ
ನಿಮಗೆ ಸಿರಿ ಬರಬೇಕೆಂದು ಆಶಿಸಿಲ್ಲಿ
ನಂಬಿಸಿ ಪಳಗಿಸಿ ನಿಮ್ಮನ್ನಿಲ್ಲಿ
ಮನೆಯನ್ನೆ ಒಡೆವರು ಜಾಣ್ಮೆಯಲ್ಲಿ
ಬೇರೆಯಾಗಲು ಪ್ರೇರೇಪಿಸಿ ಹುರುಪಿನಲ್ಲಿ
ಹಂಚಿಕೆ ಮಾಡಿಸಿ ಆಸ್ತಿಗಳನ್ನಿಲ್ಲಿ
ಸಾರ್ಥಕವೆಂದು ನಿಮ್ಮ ಎದುರಿನಲ್ಲಿ
ವ್ಯಂಗಿಸುವರು ನೀವಿಲ್ಲದ ಸಂದಿಯಲ್ಲಿ
ಅನ್ಯರಿಗೆ ಹೊಲ ಮಾರಿಸಿ ವರುಷದಲ್ಲಿ
ಬಂಧುಗಳನು ದೂರಾಗಿಸಿ ಸುಲಭದಲ್ಲಿ
ಮೋಜು ನೋಡುವರು ಕುಂತಲ್ಲಿ
ತವರು ಅಭಿಮಾನ ಬಿಡಲೇಬೇಡಿ ಉಳಿಯಲಿಲ್ಲಿ
- ಕಲ್ಲಪ್ಪ ಕವಳಕೇರಿ ಮಂಗಳೂರು✍️
(ಕೊಪ್ಪಳ ಜಿಲ್ಲೆ.)




















