ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸರ್ಕಾರದ ಕಣ್ಣಿಗೆ ಬಿದ್ದಿಲ್ಲವೇ ಕಂಪ್ಲಿಯ ಈ ‘ಮೃತ್ಯುಕೂಪ’? ಸುದ್ದಿ ಮಾಡಿದರೂ ಎಚ್ಚೆತ್ತುಕೊಳ್ಳದ ಕುಂಭಕರ್ಣ ಅಧಿಕಾರಿಗಳು

ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್

ಬಳ್ಳಾರಿ / ಕಂಪ್ಲಿ: ಒಮ್ಮೆ ಸುದ್ದಿ ಮಾಡಿ ಜಾಗೃತಿ ಮೂಡಿಸಿದರೂ ಕದಲದ ಅಧಿಕಾರಿಗಳು, ಸಾರ್ವಜನಿಕರ ಪ್ರಾಣದ ಜೊತೆ ಆಟವಾಡುತ್ತಿರುವ ಗುತ್ತಿಗೆದಾರರು!

ಇದು ಕಂಪ್ಲಿಯ ಕೋಟೆಯ ಗಂಗಾವತಿ ರಸ್ತೆಯ (ರಾಜ್ಯ ಹೆದ್ದಾರಿ 29) ಬೆನಕನ ಕಾಲುವೆ ಹತ್ತಿರದ ನೂತನ ಕಿರು ಸೇತುವೆಯ ಇಂದಿನ ದುಸ್ಥಿತಿ. ಈ ಭಾಗದ ಜನರ ಆಕ್ರೋಶ ಮುಗಿಲು ಮುಟ್ಟಿದ್ದರೂ, ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲದಂತೆ ಕುಂಭಕರ್ಣ ನಿದ್ರೆಗೆ ಜಾರಿದೆ.

ಅರೆಬರೆ ಕಾಮಗಾರಿ: ಹೆದ್ದಾರಿಯೋ ಅಥವಾ ಧೂಳಿನ ಮರುಭೂಮಿಯೋ?

ಹೊಸ ಸೇತುವೆ ನಿರ್ಮಾಣದ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಲೂಟಿಯಾಗಿದೆಯೇ ವಿನಃ ಕಾಮಗಾರಿ ಮಾತ್ರ ಇಂದಿಗೂ ಪೂರ್ಣಗೊಂಡಿಲ್ಲ. ಇಡೀ ಕಿರು ಸೇತುವೆಯ ಪ್ರದೇಶವು ದಟ್ಟವಾದ ಧೂಳಿನಿಂದ ಆವೃತವಾಗಿದೆ. ಈ ಮಾರ್ಗದಲ್ಲಿ ವಾಹನಗಳು ಚಲಿಸುವಾಗ ಸೃಷ್ಟಿಯಾಗುವ ಧೂಳಿನ ಗಾಳಿಯಿಂದಾಗಿ ದ್ವಿಚಕ್ರ ವಾಹನ ಸವಾರರು ಕಣ್ಣು ಕಾಣಿಸದೆ ಪರದಾಡುವಂತಾಗಿದೆ. ರಸ್ತೆ ಪಕ್ಕದ ನಿವಾಸಿಗಳು ಹಾಗೂ ವರ್ತಕರು ದಿನನಿತ್ಯ ಧೂಳು ಕುಡಿದು ಉಸಿರಾಟದ ತೊಂದರೆಯಿಂದ ಕಂಗೆಟ್ಟಿದ್ದಾರೆ.

ಇತ್ತೀಚೆಗಷ್ಟೇ ನಿರ್ಮಾಣಗೊಂಡು, ಅಂಚು ಕುಸಿದು ಬಿದ್ದಿದ್ದ ಈ ಸೇತುವೆ ಈಗ ಸಂಪೂರ್ಣವಾಗಿ ಬಿರುಕು ಬಿಟ್ಟಿದೆ. ಕಳಪೆ ಗುಣಮಟ್ಟದ ಸಿಮೆಂಟ್ ಹಾಗೂ ಅವೈಜ್ಞಾನಿಕ ಕಾಮಗಾರಿಗೆ ಈ ಬಿರುಕುಗಳೇ ನೇರ ಸಾಕ್ಷಿ ನುಡಿಯುತ್ತಿವೆ. ಕಾಂಕ್ರೀಟ್ ತಡೆಗೋಡೆಯ ಪಕ್ಕದಲ್ಲೇ ಸೃಷ್ಟಿಯಾಗಿರುವ ಭೀಕರ ಕಂದಕವು ದಿನದಿಂದ ದಿನಕ್ಕೆ ದೊಡ್ಡದಾಗುತ್ತಿದ್ದು, ಸೇತುವೆಯ ಅಸ್ತಿತ್ವಕ್ಕೇ ಧಕ್ಕೆ ತಂದಿದೆ. ಬೃಹತ್ ವಾಹನಗಳು ಸಂಚರಿಸುವಾಗ ಸೇತುವೆ ಕುಸಿಯುವ ಭೀತಿ ಎದುರಾಗಿದೆ.

ಸಾರ್ವಜನಿಕರ ನೇರ ಪ್ರಶ್ನೆ: ಹೆಣ ಬಿದ್ದ ಮೇಲಷ್ಟೇ ಅಧಿಕಾರಿಗಳು ಬರುವುದೇ?

“ಈಗಾಗಲೇ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದರೂ ಲೋಕೋಪಯೋಗಿ ಇಲಾಖೆಯ (PWD) ಅಧಿಕಾರಿಗಳಾಗಲಿ, ಗುತ್ತಿಗೆದಾರರಾಗಲಿ ಇತ್ತ ಸುಳಿದಿಲ್ಲ. ಇಲ್ಲಿ ಯಾವುದಾದರೂ ದೊಡ್ಡ ಅಪಘಾತ ಸಂಭವಿಸಿ, ಸಾರ್ವಜನಿಕರ ಪ್ರಾಣ ಹೋದ ಮೇಲಷ್ಟೇ ಇವರು ಎಚ್ಚೆತ್ತುಕೊಳ್ಳುತ್ತಾರಾ?” ಎಂದು ಸ್ಥಳೀಯ ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ರಾತ್ರಿ ವೇಳೆಯಂತೂ ಈ ಜಾಗ ಮೃತ್ಯುಕೂಪವಾಗಿ ಮಾರ್ಪಟ್ಟಿದ್ದರೂ ಯಾವುದೇ ಬ್ಯಾರಿಕೇಡ್ ಅಥವಾ ಎಚ್ಚರಿಕೆ ಫಲಕ ಹಾಕುವ ಕನಿಷ್ಠ ಜವಾಬ್ದಾರಿಯನ್ನೂ ಇಲಾಖೆ ತೋರಿಲ್ಲ.

ಹಣ ಲೂಟಿ ಮಾಡಿ ಸಾರ್ವಜನಿಕರ ಜೀವವನ್ನು ಅಪಾಯಕ್ಕೆ ತಳ್ಳಿರುವ ಗುತ್ತಿಗೆದಾರನನ್ನು ತಕ್ಷಣ ಬ್ಲ್ಯಾಕ್‌ಲೀಸ್ಟ್‌ಗೆ ಸೇರಿಸಬೇಕು. ತಕ್ಷಣವೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಧೂಳಿನ ಸಮಸ್ಯೆಗೆ ಮುಕ್ತಿ ಹಾಡಿ, ಬಿರುಕು ಬಿಟ್ಟಿರುವ ಸೇತುವೆಯನ್ನು ವೈಜ್ಞಾನಿಕವಾಗಿ ಮರು-ದುರಸ್ತಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಸಾರ್ವಜನಿಕ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!