ಶಿವಮೊಗ್ಗ : ವಿಶ್ವನಾಯಕ, ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರ ವಿರುದ್ಧ ಕ್ಷುಲ್ಲಕ ಹಾಗೂ ಕೀಳುಮಟ್ಟದ ಭಾಷಾ ಪ್ರಯೋಗ ಮಾಡಿದರೆ ದೇಶದ ಜನಾದೇಶ ತಮ್ಮ ಪರವಾಗಿ ಬರುತ್ತದೆ ಎನ್ನುವ ಹಗಲುಗನಸಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೇಲುತ್ತಿದ್ದಾರೆ. ಆದರೆ, ಮೋದಿಯವರಂತಹ ನಾಯಕನ ವಿರುದ್ಧ ಈ ಹತಾಶ ಕಾಂಗ್ರೆಸ್ಸಿಗರು ಬಾಯಿಗೆ ಬಂದಂತೆ ಬೊಗಳಿದಷ್ಟೂ, ಅವರ ರಾಜಕೀಯ ದಿವಾಳಿತನ ಮತ್ತು ಕಾಂಗ್ರೆಸ್ನ ಅಸಲಿ ಕರಾಳ ಮುಖವಾಡವೇ ದೇಶದ ಜನತೆಯ ಮುಂದೆ ಬೆತ್ತಲಾಗುತ್ತಿದೆ,” ಎಂದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಎಸ್. ಎನ್. ಚನ್ನಬಸಪ್ಪ (ಚೆನ್ನಿ) ಅವರು ತಿಳಿಸಿದ್ದಾರೆ.
ಯಾವುದೇ ಸಿದ್ಧಾಂತ, ಅಭಿವೃದ್ಧಿಯ ದೂರದೃಷ್ಟಿ ಇಲ್ಲದೆ ಕೇವಲ ಸುಳ್ಳು, ಅಪಪ್ರಚಾರ ಮತ್ತು ಕೀಳು ಅಭಿರುಚಿಯ ಬೈಗುಳಗಳನ್ನೇ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್ಗೆ ಪ್ರಜಾಪ್ರಭುತ್ವದಲ್ಲಿ ಯಾವುದೇ ನೈತಿಕ ಹಕ್ಕು ಉಳಿದಿಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೂ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ಸಿಗರ ಬಾಯಿಂದ ಹೊರಬರುತ್ತಿರುವ ಪ್ರತಿಯೊಂದು ಅವಹೇಳನಕಾರಿ ಮಾತುಗಳು ಅವರ ಆಂತರಿಕ ನಡುಕ, ಅತಿಯಾದ ಹತಾಶೆ ಹಾಗೂ ನಿರ್ಲಜ್ಜ ರಾಜಕಾರಣದ ಪರಮಾವಧಿಯನ್ನು ತೋರಿಸುತ್ತಿವೆ.
ಸೂರ್ಯನ ಮೇಲೆ ಉಗುಳಿದರೆ ಅದು ತನ್ನ ಮುಖದ ಮೇಲೆಯೇ ಬೀಳುತ್ತದೆ ಎಂಬ ಸಾಮಾನ್ಯ ಜ್ಞಾನವೂ ಮಲ್ಲಿಕಾರ್ಜುನ ಖರ್ಗೆ ಹಾಗೂ ಅವರ ಪಕ್ಷದ ನಾಯಕರಿಗೆ ಇಲ್ಲವಾಗಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ ಅವರನ್ನು ಕಾಂಗ್ರೆಸ್ಸಿಗರು ಎಷ್ಟು ಕೀಳಾಗಿ ನಿಂದಿಸುತ್ತಾರೋ, ಅವರ ಕತ್ತಲೆಯ ಹತಾಶೆಯ ಕೆಸರಿನಲ್ಲೇ ಭಾರತೀಯ ಜನತಾ ಪಾರ್ಟಿಯ ಕಮಲವು ಇನ್ನಷ್ಟು ಬೃಹತ್ತಾಗಿ, ಪ್ರಖರವಾಗಿ ಅರಳುವುದು ಶತಸಿದ್ಧ. ಭಾರತದ ಸ್ವಾಭಿಮಾನಿ ಜನತೆ ಈ ದೇಶವಿರೋಧಿ, ಸಂಸ್ಕಾರಹೀನ ಕಾಂಗ್ರೆಸ್ ಪಕ್ಷಕ್ಕೆ ಮುಂಬರುವ ದಿನಗಳಲ್ಲಿ ಮತಪೆಟ್ಟಿಗೆಯ ಮೂಲಕ ನಡುಬೀದಿಯಲ್ಲೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶಾಸಕರ ಕಾರ್ಯಾಲಯ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪ್ರಕಟಣೆ ತಿಳಿಸಿದೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ /ಮೈಸೂರು.



















