ಮುಧೋಳ : ಸುಮಾರು ನೂರು ವರ್ಷಕ್ಕೂ ಹೆಚ್ಚು ಕಾಲ ಬದುಕಿ ಶತಾಯುಷಿಗಳೆಂದು ಹೊಗಳಿಕೆಗೆ ಪಾತ್ರರಾದ ಹಳೆಯ ತಲೆಮಾರಿನ ಹಿರಿಯ ಜೀವ ಶತಾಯುಷಿ ಜನಪದವನ್ನು ತಮ್ಮ ಬದುಕಿನ ಜೀವನಾಡಿಯನ್ನಾಗಿ ಮಾಡಿಕೊಂಡ ಗಂಗವ್ವ ಪುಂಡಲೀಕ ಘಂಟಿ ಅವರು ದಿ. 26 ರಂದು ಸೋಮವಾರ ಮಧ್ಯಾಹ್ನ 12 .30.ಕ್ಕೆ ನಿಧನ ಹೊಂದಿದ್ದಾರೆ.
ಇಬ್ಬರು ಗಂಡು ಮಕ್ಕಳು. ಒಬ್ಬ ಹೆಣ್ಣುಮಗಳು . ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನ ಅಗಲಿದ್ದಾರೆ. ಇವರ ನಿಧನಕ್ಕೆ ಗ್ರಾಮಸ್ಥರು, ಕಲಾಬಳಗವು ಅಪಾರ ಸಂಖ್ಯೆಯಲ್ಲಿ ಸೇರಿ ಶೋಕವನ್ನು ವ್ಯಕ್ತಪಡಿಸಿದರು.




















