
ಹೊಸ ಓಬಳಾಪುರದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೂರಕ ಪೌಷ್ಟಿಕ ಆಹಾರ ಮೇಳದ ಉದ್ಘಾಟನೆಯನ್ನು ಶಾಲೆಯ ಮುಖ್ಯ ಗುರುಗಳಾದ ರಾಜಶೇಖರ ಗೌಡ ಎಂ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಜುನಾಥ್ ಈ ಮತ್ತು ಉಪಾಧ್ಯಕ್ಷೆ ಶಾಂತಮ್ಮ ಜಿ ಉದ್ಘಾಟಿಸಿದರು.
ಗ್ರಾಮದ ಹಿರಿಯರಾದ ಬಣಕಾರ್ ನಿಂಗಣ್ಣನವರು ಹಾಗೂ ಎಸ್ ಡಿ ಎಂ ಸಿ ಯ ಸರ್ವ ಸದಸ್ಯರು ಹಾಗೂ ಗ್ರಾಮದ ಮುಖಂಡರು ಮತ್ತು ನಮ್ಮ ಶಾಲೆಯ ಮಕ್ಕಳ ಪೋಷಕರು ಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಅಡಿಗೆ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮಕ್ಕೆ ಎಲ್ಲರೂ ಭಾಗವಹಿಸಿ ಸಂಜೆಯ ಪೂರಕ ಪೌಷ್ಟಿಕ ಆಹಾರವನ್ನು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ ಈ ದಿನದ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.




















