ಬಾಗಲಕೋಟೆ: ನಗರದ ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಶಾಖೆಯ ಪ್ರತಿನಿಧಿ ಬಾವಾಸಾಬ ವಾಲಿಕಾರ ಅವರು ಸತತ ಹತ್ತನೇ ಬಾರಿ ಅಂತರರಾಷ್ಟ್ರೀಯ ಮಟ್ಟದ ಎಂ.ಡಿ.ಆರ್.ಟಿ (MDRT) ಗೌರವಕ್ಕೆ ಪಾತ್ರರಾದ ಹಿನ್ನೆಲೆಯಲ್ಲಿ, ಜಿಲ್ಲೆಯ ಬೀಳಗಿ ತಾಲೂಕಿನ ಸ್ವಗ್ರಾಮ ಕುಂದರಗಿ ಗ್ರಾಮದ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬಾವಾಸಾಬ ವಾಲಿಕಾರ, “ವಿಮಾ ಕ್ಷೇತ್ರದಲ್ಲಿ ನಿರಂತರ ಯಶಸ್ಸು ಸಾಧಿಸಲು ಗ್ರಾಹಕರು ನನ್ನ ಮೇಲಿಟ್ಟಿರುವ ವಿಶ್ವಾಸ ಮತ್ತು ಪ್ರೀತಿಯೇ ಪ್ರಮುಖ ಪ್ರೇರಣೆಯಾಗಿದೆ. ಸತತ ಹತ್ತು ವರ್ಷಗಳ ಕಾಲ ಎಂ.ಡಿ.ಆರ್.ಟಿ ಗೌರವವನ್ನು ಉಳಿಸಿಕೊಳ್ಳಲು ನನ್ನ ಪರಿಶ್ರಮದ ಜೊತೆಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸಹೋದ್ಯೋಗಿಗಳ ನಿರಂತರ ಪ್ರೋತ್ಸಾಹವೂ ಸಹಕಾರಿಯಾಗಿದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೆಳೆಯರ ಬಳಗದ ಸದಸ್ಯರಾದ ಪಡಿಯಪ್ಪ ಬೋಕಿ, ಗಿರಿಮಲ್ಲಪ್ಪ ಕಿಡಿಯಪ್ಪನವರ, ಶಿವಪ್ಪ ಮೇಟಿ, ವೆಂಕಟೇಶ ಜಂಬಗಿ, ಭೀಮರಾಯ ಕೆರಕಲಮಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




















