ಕಂಪ್ಲಿ: ಅತಿ ವೇಗವಾಗಿ ಬೈಕ್ ಚಲಾಯಿಸುವಾಗ ನಿಯಂತ್ರಣ ತಪ್ಪಿ ಯುವಕನೊಬ್ಬ ಬೈಕ್ ಸಮೇತ ಕಾಲುವೆಗೆ ಬಿದ್ದಿರುವ ದುರ್ಘಟನೆ ಇಲ್ಲಿಗೆ ದೇವಸಮುದ್ರ ಸಮೀಪದ ಎಲ್ಎಲ್ಸಿ (ಲೋ ಲೆವೆಲ್ ಕೆನಾಲ್) ಕಾಲುವೆ ಬಳಿ ನಡೆದಿದೆ. ಎಮ್ಮಿಗನೂರು ಗ್ರಾಮದ ರಾಜಾಸಾಬ್ (21) ಕಾಲುವೆ ಪಾಲಾದ ದುರ್ದೈವಿ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಮೃತ ರಾಜಾಸಾಬ್ ಅತಿವೇಗವಾಗಿ ಬೈಕ್ನಲ್ಲಿ ಕಾಲುವೆ ರಸ್ತೆಯ ಸಮೀಪ ಬರುತ್ತಿದ್ದಾಗ, ಎದುರಿನಿಂದ ಎಮ್ಮೆಗಳು ಬಂದಿವೆ. ಈ ವೇಳೆ ನಿಯಂತ್ರಣ ತಪ್ಪಿ ಸಿಗದೆ ಯುವಕ ಮೋಟಾರ್ ಸೈಕಲ್ ಸಮೇತ ನೇರವಾಗಿ ಕಾಲುವೆಗೆ ಬಿದ್ದಿದ್ದಾನೆ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಕಂಪ್ಲಿ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು, ದೇವಸಮುದ್ರ ಕಾಲುವೆ ಬಳಿ ಯುವಕನ ಮೃತದೇಹಕ್ಕಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















