ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ನವೆಂಬರ್ ಕನ್ನಡಿಗರು !

ಬೊಬ್ಬೆ ಇಡುವರು ಇಂದು ಕನ್ನಡ ಕನ್ನಡ ಎಂದು,
ಬಂದಿದೆ ಮತ್ತೆ
ನವೆಂಬರ್ ಒಂದು,
ಈ ದಿನ ಮಾತ್ರವೇ
ಕನ್ನಡಿಗರೆಲ್ಲಾ ಒಂದು,
ಮರು ದಿನದಿಂದಲೇ
ಹಾಯ್, ಹಲೋ, ಎನುತ
ಆಂಗ್ಲಮ್ಮನಿಗೇ ಶರಣಾಗುವರು,
ಕನ್ನಡಮ್ಮನ ಮರೆಯುವರು,
ಕನ್ನಡಿಗರಿವರು,
ನವೆಂಬರ್ ಕನ್ನಡಿಗರು,!
ಕ್ಷಮಿಸಿ, ನೀವೂ ಈ ಕನ್ನಡಿಗರಾದರೆ!?
ಕನ್ನಡ ನಾಡನು ಉಳಿಸೋಣ,
ಕನ್ನಡ ಭಾಷೆಯ ಬೆಳೆಸೋಣ, ಕನ್ನಡಿಗರಾಗಿ
ಬದುಕೋಣ,
ಕನ್ನಡಿಗರು ನಾವು,
ವಿಶಾಲ ಹೃದಯದವರು,
ಅಲ್ಲವೇ ಮತ್ತೆ,? ಅದಕ್ಕೇ
ಅಲ್ಲವೇ ಈಗ ನಾವೆಲ್ಲ ಹುಡುಕುತ್ತಿರುವೆವು,..
ಎಲ್ಲಿದೆ ಕನ್ನಡ, ಕನ್ನಡ?,
ಎತ್ತ ನೋಡಿದರೂ
ಎನ್ನಡ, ಎಕ್ಕಡ, !ಕಾಣುತ್ತಿಲ್ಲ
ಯಾರಿಗೂ ನಮ್ಮ ಕನ್ನಡ!?..

  • ಶಿವಪ್ರಸಾದ್ ಹಾದಿಮನಿ, ಕನ್ನಡ ಉಪನ್ಯಾಸಕರು.
    ಸ. ಪ್ರ. ದ. ಕಾಲೇಜು, ಕೊಪ್ಪಳ.
    ಮೊ :೭೯೯೬೭೯೦೧೮೯.
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!