ಮಂಗಳೂರಿನ ಮಣ್ಣಗುಡ್ಡೆ ಪರಿಸರದ ಶ್ರೀ ರವಳನಾಥ ನಾಯಕ್ ಸುಜೀರ್ ಅವರು ತಮ್ಮ ಬಾಲ್ಯದಲ್ಲಿ ಪರಿಸರದ ಗೆಳೆಯರ ಜೊತೆ ಸೇರಿ ಆರಂಭಿಸಿದ ಶಾರದಾ ಮಹೋತ್ಸವಕ್ಕೆ ಮೂವತ್ತು ಏಳು ವರ್ಷ ಸಂದು ಮಣ್ಣಗುಡ್ಡೆ ಶಾರದಾ ಮಹೋತ್ಸವ ಎಂದು ಪ್ರಚಲಿತವಾಗಿದೆ. ಬಾಲ್ಯದಲ್ಲಿ ಆರಂಭದ ಐದು ವರ್ಷ ಶ್ರೀ ರವಳನಾಥ ನಾಯಕ ಸುಜೀರ್ ಅವರೇ ಮಣ್ಣಿನ ಶಾರದಾ ಮೂರ್ತಿ ಮಾಡಿ ನವರಾತ್ರಿಯ ಏಳನೇ ದಿನದಂದು ಪ್ರತಿಷ್ಠಾಪಿಸಿ, ಎಂಟನೇ ಮತ್ತು ಒಂಬತ್ತನೇ ದಿನ ನವಮಿಯಂದು ಮಹಾ ಪೂಜೆ ಮಾಡಿ ಮೆರವಣಿಗೆಯಲ್ಲಿ ಶ್ರೀ ಶಾರದೆಯ ವಿಗ್ರವನ್ನು ಕೊಂಡುಹೋಗಿ ಶ್ರೀ ಮಹಾಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜನೆ ಮಾಡುವುದು ವಾಡಿಕೆ ಆಗಿತ್ತು , 1997 ರಲ್ಲಿ ಈ ಬಾಲಕರ ಶಾರದಾ ಮಹೋತ್ಸವವು ಪರಿಸರದ ಭಕ್ತರು ಜೊತೆಸೇರಿ ಸಾರ್ವಜನಿಕ ಶಾರದಾ ಮಹೋತ್ಸವ ಆಗಿ ಪ್ರಚಲಿತ ಆಗಿ 2004 ರ ವರೆಗೆ ವಿಜೃಂಭಣೆ ಯಿಂದ ಜರಾಗುತ್ತಾ ಬಂದಿತ್ತು. 2006 ರ ಅವಧಿಗೆ ಬಾಲಕರೆಲ್ಲಾ ಯುವಕರಾಗಿ ಕೆಲಸದ ನಿಮಿತ್ತ ಬೇರೆ , ಬೇರೆ ನಗರಗಳಿಗೆ ಸ್ಥಳಾಂತರಗೊಂಡರು. ಬದಲಾದ ಪರಿಸ್ಥಿತಿಯಲ್ಲಿ ಈ ಶಾರದಾ ಮಹೋತ್ಸವ ವನ್ನು ಕಾರ್ಸ್ಟ್ರೀಟ್ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಶಾರದಾ ಮಹೋತ್ಸವದೊಂದಿಗೆ ಸೇರಿಸುವ ನಿರ್ಧಾರಕ್ಕೆ ಬಂದರೂ , ಪವಾಡ ಸದೃಶ ವಾಗಿ ಶ್ರೀ ರವಳನಾಥ ನಾಯಕ್ ಸುಜೀರ್ ಅವರಿಗೆ ಕನಸಲ್ಲಿ ಪ್ರೇರಣೆ ಆಗಿ , ಈ ಶಾರದಾ ಮಹೋತ್ಸವ ಅವರು ಬಾಲ್ಯದಿಂದ ಆರಂಭಿಸಿಕೊಂಡು ಬಂದಿದ್ದು , ಮುಂದೆ ಶಾರದಾ ಮಹೋತ್ಸವವನ್ನು ಅವರ ಮನೆಯಲ್ಲೇ ಆಚರಿಸಿಕೊಂಡು ಬರಬೇಕೆಂಬ ನಿರ್ಧಾರ ತೆಗೆದುಕೊಂಡು ಬಂದು , ಈ ವರ್ಷ ಮೂವತ್ತೇಳನೇ ವರ್ಷದ ಶ್ರೀ ಶಾರದಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಈ ವರ್ಷ ಪವಾಡ ಸದೃಶವಾಗಿ ಶ್ರೀ ಶಾರದೆಯ ವಿಗ್ರಹವು ವಿಸರ್ಜನೆಯ ಸಂದರ್ಭ ನೀರಲ್ಲಿ ಮುಳುಗುವ ಬದಲು ಮತ್ತೆ ಮೇಲಕ್ಕೆ ಬಂದು , ನೀರಲ್ಲಿ ಮುಳುಗಲು ಅಸಮ್ಮತಿ ತೋರಿದ್ದು ಭಕ್ತರಿಗೆ ಅನುಭವಕ್ಕೆ ಬಂದಿದೆ. ಇದು ಸಾಮಾಜಿಕ ತಾಣದಲ್ಲಿ ವಿಡಿಯೋ ರೀಲ್ ಆಗಿ ವೈರಲ್ ಕೂಡ ಆಗಿದೆ.
ಈ ಎಲ್ಲಾ ಘಟನೆಗಳು ಶ್ರೀ ರವಳನಾಥ ನಾಯಕ್ ಸುಜೀರ್ ಅವರಲ್ಲಿ ದೈವಿಕ ಶಕ್ತಿ ತುಂಬಿದೆ ಮತ್ತು ಸಂತೃಪ್ತ ಭಾವನೆ ಮೂಡಿಸಿದೆ.
ವರದಿ : ಚಂದ್ರಶೇಖರ ಹೆಬ್ಬಾರ್ ಕೊಲ್ಯ




















